ದೇಶದಲ್ಲಿ ಹೆಚ್ಚಾಗಿ ಮಾರುತಿ ಸುಜುಕಿ ಕಂಪನಿಯ ಕಾರುಗಳನ್ನು ನೋಡುತ್ತೇವೆ. ಆದರೆ ಇದೀಗ ಮಾರುತಿ ಸುಜುಕಿ ಕಾರು ಹೊಂದಿರುವ ಗ್ರಾಹಕರಿಗೆ ಬಿಗ್ ಶಾಕ್ ಎದುರಾಗಿದೆ. ಅದರಲ್ಲೂ ಇತ್ತೀಚೆಗೆ ಮಾರುತಿ ಕಾರು ಖರೀದಿಸಿದವರಿಗೆ ಇದು ಬ್ಯಾಡ್ ನ್ಯೂಸ್.
2/ 7
ಮಾರುತಿ ಸುಜುಕಿ ತನ್ನ ಐದು ಮಾದರಿಗಳ 9125 ವಾಹನಗಳನ್ನು ಹಿಂಪಡೆದಿದೆ. ತಾಂತ್ರಿಕ ದೋಷದಿಂದಾಗಿ ಕಂಪನಿಯು ಸಿಯಾಜ್ ಸೇರಿದಂತೆ 5 ಮಾದರಿಗಳನ್ನು ಹಿಂಪಡೆಯುತ್ತಿದೆ.
3/ 7
ಸಿಎನ್ಬಿಸಿ ಆವಾಜ್ ಪ್ರಕಾರ, ಇವುಗಳು ನವೆಂಬರ್ 2 ಮತ್ತು 28 ರ ನಡುವೆ ತಯಾರಿಸಲಾದ ಮಾದರಿಗಳಾಗಿವೆ. ಸೀಟ್ ಬೆಲ್ಟ್ ದೋಷದಿಂದ ಈ ಮಾದರಿಗಳನ್ನು ಹಿಂಪಡೆಯಲಾಗಿದೆ ಎಂದು ಕಂಪನಿ ಹೇಳಿದೆ.
4/ 7
ನಿಮ್ಮ ಬಳಿಯೂ ಈ ಮಾದರಿಗಳ ಮಾರುತಿ ಕಾರು ಇದ್ದರೆ ಕೂಡಲೇ ಹಿಂದಿರುಗಿಸಿ ಎಂದು ಕಂಪನಿ ಹೇಳಿದೆ. ಈ ರೀತಿಯ ಸಮಸ್ಯೆಗಳು ಎದುರಾಗಿರುವುದು ಮೊದಲೇನೆಲ್ಲ. ಈ ಹಿಂದೆಯೂ ಇದೇ ರೀತಿ ತನ್ನ ವ್ಯಾಗನಾರ್ ಕಾರುಗಳನ್ನು ಮಾರುತಿ ಹಿಂಪಡೆದಿತ್ತು.
5/ 7
ಮಾರುತಿ ಸುಜುಕಿ ಇದೀಗ ವರ್ಷಾಂತ್ಯದ ಆಫರ್ ಘೋಷಿಸಿದೆ. ಈ ಮೂಲಕ ಕಾರು ಮಾರಾಟದಲ್ಲಿ ದಾಖಲೆ ಬರೆಯಲು ಮುಂದಾಗಿದೆ. ಮಾರುತಿ ಸುಜುಕಿ ಆಯ್ದ ಕಾರುಗಳ ಮೇಲೆ ಡಿಸ್ಕೌಂಟ್ ಆಫರ್ ಘೋಷಿಸಲಾಗಿದೆ.
6/ 7
ಈ ವರ್ಷವನ್ನು ಮಾರುತಿ ಸುಜುಕಿ ಉತ್ತಮವಾಗಿ ಆರಂಭಿಸಿತ್ತು. ಹೊಸ ಹೊಸ ಕಾರುಗಳ ಬಿಡುಗಡೆ, ಮಾರಾಟದಲ್ಲೂ ಚೇತರಿಕೆ ಕಾಣುವ ಮೂಲಕ ಉತ್ತಮವಾಗಿ ಸಾಗಿದೆ. ಮಾರುತಿ ಸುಜುಕಿ ಅಲ್ಟೋ 800 ಕಾರಿಗೆ ಗರಿಷ್ಠ 52,000 ರೂಪಾಯಿ ಡಿಸ್ಕೌಂಟ್ ಆಫರ್ ಘೋಷಿಸಲಾಗಿದೆ.
7/ 7
ಇದರಲ್ಲಿ 30,000 ನಗದು ಡಿಸ್ಕೌಂಟ್, 15,000 ರೂಪಾಯಿ ಎಕ್ಸ್ಜೇಂಜ್ ಬೋನಸ್, 7,000 ರೂಪಾಯಿ ಕಾರ್ಪೋರೇಟ್ ಡಿಸ್ಕೌಂಟ್ ಒಳಗೊಂಡಿದೆ.