Bank Fraud: ಈ ಆ್ಯಪ್ ಡೌನ್ಲೋಡ್ ಮಾಡಿ 5 ಲಕ್ಷ ಕಳೆದುಕೊಂಡ ವ್ಯಕ್ತಿ, ನಿಮ್ಮ ಮೊಬೈಲ್ನಲ್ಲಿದ್ರೂ ಮೊದಲು ಡಿಲೀಟ್ ಮಾಡಿ!
Bank Account: ಸ್ಮಾರ್ಟ್ಫೋನ್ ಬಳಸುವಾಗ ಸಾಕಷ್ಟು ಎಚ್ಚರದಿಂದಿರಬೇಕು. ಇಲ್ಲದಿದ್ರೆ ಅಪಾಯ ಕಟ್ಟಿಟ್ಟ ಬುತ್ತಿ. ಸ್ಮಾರ್ಟ್ಫೋನ್ನಲ್ಲಿ ಏನೋ ಮಾಡಲು ಹೋಗಿ, ಮತ್ತೇನೋ ಆಗಿ ಹಣ ಕಳೆದುಕೊಳ್ಳುವ ಸಂಭವ ಹೆಚ್ಚಿರುತ್ತೆ. ಇಲ್ಲೂ ಅದೇ ಆಗಿದೆ ನೋಡೋಣ ಬನ್ನಿ.
ಈಗೆಲ್ಲಾ ಸ್ಕೂಲ್ ಮಕ್ಕಳಿಂದ ಹಿಡಿದು ಅಜ್ಜ-ಅಜ್ಜಿಯರ ಕೈಯಲ್ಲೂ ಸ್ಮಾರ್ಟ್ಫೋನ್ ಇರುತ್ತೆ. ಇರಲಿ, ಆದರೆ ಈ ಸ್ಮಾರ್ಟ್ಫೋನ್ ಬಳಸುವಾಗ ನೀವು ತುಂಬಾ ಎಚ್ಚರದಿಂದಿರಬೇಕು. ಇಲ್ಲದಿದ್ದರೆ ದೊಡ್ಡ ನಷ್ಟಕ್ಕೆ ಕಾಣವಾಗಬಹುದು. ಈಗ ಯಾಕೆ ಈ ವಿಷಯ ಅಂತಿದ್ದೀರಾ? ಮುಂದೆ ನೋಡಿ ನಿಮಗೆ ಗೊತ್ತಾಗುತ್ತೆ.
2/ 8
ಥಾಣೆಯಲ್ಲಿ ವಾಸಿಸುವ ವ್ಯಕ್ತಿಯೊಬ್ಬರು ತಮ್ಮ ಸ್ಮಾರ್ಟ್ಫೋನ್ನಲ್ಲಿ ಅಪ್ಲಿಕೇಶನ್ವೊಂದನ್ನು ಡೌನ್ಲೋಡ್ ಮಾಡಿಕೊಂಡಿದ್ದಾರೆ. ಇದಾದ ಕೆಲವೇ ನಿಮಿಷಗಳಲ್ಲಿ ಅವರ ಖಾತೆಯಲ್ಲಿದ್ದ 5 ಲಕ್ಷ ರೂಪಾಯಿ ಮಾಯಾವಾಗಿದೆ. ಅದು ಹೇಗಪ್ಪಾ? ಅಂತೀರಾ. ಸೈಬರ್ ಕ್ರೈಮ್ ರೀ.
3/ 8
ಮನೆಯಲ್ಲಿ ಸ್ಮಾರ್ಟ್ ಟಿವಿ ಡಿಸ್ಪ್ಲೇ ಸರಿಯಿರದ ಕಾರಣ ಅದನ್ನು ಸರಿ ಮಾಡೋದಕ್ಕೆ ಈ ವ್ಯಕ್ತಿ ತಮ್ಮ ಫೋನ್ನಲ್ಲಿ ಎನಿ ಡೆಸ್ಕ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿದ್ದಾರೆ. ಹೀಗ್ ಮಾಡಿದ್ದೇ ತಡ ಅವರ 5 ಲಕ್ಷ ರೂಪಾಯಿ ಎಗರಿಸಿದ್ದಾರೆ ಸೈಬರ್ ಖದೀಮರು.
4/ 8
ಎನಿ ಡೆಸ್ಕ್ ಅಪ್ಲಿಕೇಶನ್ ಅನ್ನು ಹೆಚ್ಚಾಗಿ ಐಟಿ ವೃತ್ತಿಪರರು ಬಳಸುತ್ತಾರೆ. ಗ್ರಾಹಕರು ರಿಮೋಟ್ ಕಂಟ್ರೋಲ್ ಮೂಲಕ ವ್ಯವಸ್ಥೆಗಳನ್ನು ಸರಿಪಡಿಸುತ್ತಾರೆ. ಆದರೆ ಇದನ್ನು ಸ್ಕ್ಯಾಮರ್ಗಳು ಸಹ ಬಳಸುತ್ತಾರೆ. ಗ್ರಾಹಕರನ್ನು ಲೂಟಿ ಮಾಡುತ್ತಿದ್ದಾರೆ.
5/ 8
ಗ್ರಾಹಕರು ಟಿವಿ ಡಿಸ್ಪ್ಲೇಯನ್ನು ಸರಿಪಡಿಸಲು ಟಿವಿ ಚಾನೆಲ್ ಆಪರೇಟರ್ಗೆ ಕರೆ ಮಾಡಿದ್ದಾರೆ. ಆದರೆ ಅವರಿಗೆ ಬೇರೆ ನಂಬರ್ನಿಂದ ಕರೆ ಬಂದಿದೆ. ವಂಚಕನು ತಾನು ಚಾನೆಲ್ ಒದಗಿಸುವವರ ತಂಡದ ಸದಸ್ಯನೆಂದು ಗ್ರಾಹಕರಿಗೆ ಹೇಳುತ್ತಾನೆ. ಗ್ರಾಹಕನು ಇದನ್ನು ನಂಬಿ ಆತ ಹೇಳಿದಂತೆ ಮಾಡಿದ್ದಾರೆ.
6/ 8
ಫೋನ್ನಲ್ಲಿ ಎನಿ ಡೆಸ್ಕ್ ಆಪ್ ಇನ್ ಸ್ಟಾಲ್ ಮಾಡಲು ಹೇಳಿದ್ದಾರೆ. ಅದರಂತೆ ಮೋಸ ಹೋದ ವ್ಯಕ್ತಿ ಕೂಡ ಮಾಡಿದ್ದಾನೆ. ಈ ವೇಳೆ 5 ನಿಮಿಷದಲ್ಲಿ 5 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. ನೊಂದ ಗ್ರಾಹಕರು ಕೂಡಲೇ ಠಾಣೆಗೆ ತೆರಳಿ ದೂರು ನೀಡಿದ್ದಾರೆ.
7/ 8
ಹಾಗಾಗಿ ನೀವು ಕೂಡ ಇಂತಹ ವಿಷಯಗಳಲ್ಲಿ ಜಾಗರೂಕರಾಗಿರಬೇಕು. ಇಲ್ಲದಿದ್ದರೆ ನೀವು ಬಹಳಷ್ಟು ಹಣವನ್ನು ಕಳೆದುಕೊಳ್ಳುತ್ತೀರಿ. ನಿಮಗೆ ಪರಿಚಯವಿಲ್ಲದ ಯಾರಾದರೂ ಅಪರಿಚಿತ ಸಂಖ್ಯೆಗಳಿಂದ ನಿಮಗೆ ಕರೆ ಮಾಡಿದರೆ ಮತ್ತು Any Dest ಅನ್ನು ಸ್ಥಾಪಿಸಲು ಕೇಳಿದರೆ, ಅದನ್ನು ಮಾಡಬೇಡಿ.
8/ 8
ನಿಮ್ಮ ಫೋನ್ ಅಥವಾ ಲ್ಯಾಪ್ಟಾಪ್ನಲ್ಲಿ AnyDesk ಅನ್ನು ಸ್ಥಾಪಿಸಿದ ನಂತರ ಮತ್ತು ನೀವು ಇತರ ವ್ಯಕ್ತಿಗೆ ಆ ಕೋಡ್ ಅನ್ನು ಹೇಳಿದರೆ, ನಿಮ್ಮ ಸಾಧನವು ಅವರ ನಿಯಂತ್ರಣಕ್ಕೆ ಹೋಗುತ್ತದೆ. ಆದ್ದರಿಂದ ನೀವು ಈ ರೀತಿಯ ರಿಮೋಟ್ ಆಕ್ಸೆಸ್ ಅಪ್ಲಿಕೇಶನ್ಗಳೊಂದಿಗೆ ಬಹಳ ಜಾಗರೂಕರಾಗಿರಬೇಕು.