Gold Price Today | ಚಿನ್ನ ಸದಾ ಬೇಡಿಕೆಯಲ್ಲಿರುವ ಲೋಹ. ಮಾರುಕಟ್ಟೆಯಲ್ಲಿ ಹೂಡಿಕೆದಾರರಿಂದ ಹಿಡಿದು ಸಾಮಾನ್ಯ ಜನರವರೆಗೆ ಚಿನ್ನವನ್ನು ಕೊಂಡುಕೊಳ್ಳುವವರು ಪ್ರತಿನಿತ್ಯ ಇರುತ್ತಾರೆ. ಪ್ರಾಚೀನ ಕಾಲದಿಂದಲೂ ಚಿನ್ನವನ್ನು ಕಷ್ಟ ಕಾಲದಲ್ಲಿ ಕೈಹಿಡಿಯುವ ಆಪದ್ಬಾಂಧವ ಎಂದೇ ಪರಿಗಣಿಸಲಾಗುತ್ತದೆ. ಇದು ಸತ್ಯವೂ ಹೌದು. ಹಾಗಾಗಿ ಚಿನ್ನಕ್ಕೆ ಸದಾ ಬೇಡಿಕೆ ಇರುವುದನ್ನು ಗಮನಿಸಬಹುದು. (ಸಾಂದರ್ಭಿಕ ಚಿತ್ರ)
ಚಿನ್ನದ ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ಹೆಚ್ಚಾಗಿದೆ. ಚಿನ್ನದ ದರ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಸತತ ನಾಲ್ಕನೇ ದಿನವೂ ಚಿನ್ನದ ಬೆಲೆಯಲ್ಲಿ ಏರಿಕೆಯಾಗಿದೆ. ನಾಲ್ಕು ದಿನಗಳಲ್ಲಿ 1000 ರೂಪಾಯಿಗೂ ಹೆಚ್ಚಾಗಿರೋದು ಗಮನಾರ್ಹ. ಇದರೊಂದಿಗೆ 24 ಗ್ರಾಂ ಚಿನ್ನದ ದರ 56 ಸಾವಿರ ರೂಪಾಯಿಗೆ ಏರಿಕೆಯಾಗಿದೆ. ದೇಶದ ಬಹುತೇಕ ಎಲ್ಲಾ ನಗರಗಳಲ್ಲಿ ಚಿನ್ನದ ಬೆಲೆಯಲ್ಲಿ ಏರಿಕೆ ಕಂಡು ಬಂದಿದೆ.
ಇಂದು ಭಾರತದ ಮಾರುಕಟ್ಟೆಯಲ್ಲಿ ಚಿನ್ನವು ಹೆಚ್ಚಳವಾಗಿದೆ. ಪ್ರತಿ ಗ್ರಾಂ ಆಭರಣ ಚಿನ್ನದ ಬೆಲೆ ಇಂದು ರೂ.5,205 ಆಗಿದೆ. ಜಾಗತಿಕವಾಗಿ ನಡೆಯುವ ಹಲವು ಅಂಶಗಳು ಹಾಗೂ ಬದಲಾವಣೆಗಳ ಪ್ರಭಾವದಿಂದಾಗಿ ಚಿನ್ನದ ಬೆಲೆಯಲ್ಲಿ ನಿತ್ಯವೂ ವ್ಯತ್ಯಾಸಗಳು ನಡೆಯುತ್ತಲೇ ಇರುತ್ತವೆ. ಅಂತೆಯೇ ದೇಶದ ವಿವಿಧ ಭಾಗಗಳಲ್ಲೂ ಸಹ ಇದರ ಬೆಲೆಯಲ್ಲಿ ವ್ಯತ್ಯಾಸಗಳನ್ನು ಗಮನಿಸಬಹುದು. (ಸಾಂದರ್ಭಿಕ ಚಿತ್ರ)
ದೇಶದ ಪ್ರಮುಖ ನಗರಗಳ ಚಿನ್ನದ ಬೆಲೆ ಭಾನುವಾರ ದೇಶದ ವಿವಿಧ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ ಹೇಗಿತ್ತು ಎಂಬುದನ್ನು ಈಗ ನೋಡೋಣ.. ನಿತ್ಯ ದೇಶದ ಮಹಾನಗರಗಳಲ್ಲಿ ಚಿನ್ನದ ಬೆಲೆಯಲ್ಲಿ ಅಲ್ಪ ವ್ಯತ್ಯಾಸಗಳಾಗುವುದನ್ನು ಸಾಮಾನ್ಯವಾಗಿ ಗಮನಿಸಬಹುದು. ಇಂದು ಬೆಂಗಳೂರಿನಲ್ಲಿ 22 ಕ್ಯಾರಟ್ ಬಂಗಾರದ ಬೆಲೆ (ಹತ್ತು ಗ್ರಾಂ) ರೂ. 52,050 ಆಗಿದ್ದರೆ ಚೆನ್ನೈ, ಮುಂಬೈ ಹಾಗೂ ಕೊಲ್ಕತ್ತಾ ನಗರಗಳಲ್ಲಿ ಕ್ರಮವಾಗಿ ಇದರ ಬೆಲೆ ರೂ. 52,960, ರೂ. 52,000, ರೂ. 52,000 ಆಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಇಂದು ಚಿನ್ನದ ಬೆಲೆ 52,150 ರೂ. ಆಗಿದೆ. (ಸಾಂದರ್ಭಿಕ ಚಿತ್ರ)
ಇನ್ನು ಬೆಳ್ಳಿಯ ವಿಷಯಕ್ಕೆ ಬಂದರೆ ನಿನ್ನೆಗೆ ಹೋಲಿಸಿದರೆ ಇಂದು ಬೆಳ್ಳಿ ದರದಲ್ಲಿ ಸ್ವಲ್ಪ ಇಳಿಕೆಯಾಗಿದೆ. ಚಿನ್ನದಂತೆಯೇ ಬೆಳ್ಳಿ ಬೆಲೆಯಲ್ಲೂ ಏರಿಳಿತ ಸಾಮಾನ್ಯವಾಗಿದೆ. ಒಂದು ಕೆಜಿ ಬೆಳ್ಳಿಯ ಇಂದಿನ ಮಾರುಕಟ್ಟೆ ಬೆಲೆ ರೂ. 74,000 ಗಳಷ್ಟಿದೆ. ಕಳೆದ ಎರಡು ವಾರಗಳನ್ನು ಗಮನಿಸಿದರೆ ಸದ್ಯ ಬೆಳ್ಳಿ ಬೆಲೆಯಲ್ಲಿ ಸಾಕಷ್ಟು ಏರಿಕೆಯೇ ಆಗಿರುವುದನ್ನು ಗಮನಿಸಬಹುದು. (ಸಾಂದರ್ಭಿಕ ಚಿತ್ರ)
ಬೆಂಗಳೂರು ನಗರ ದಲ್ಲಿ ನೋಡುವುದಾದರೆ ಬೆಳ್ಳಿ ಬೆಲೆಯಲ್ಲಿ ನಿನ್ನೆಗಿಂತ ಸ್ವಲ್ಪ ಕಡಿಮೆಯಾಗಿದೆ. ನಗರದಲ್ಲಿ ಇಂದು ಪ್ರತಿ 10gm, 100gm, 1000gm (1ಕೆಜಿ) ಬೆಳ್ಳಿ ಬೆಲೆಗಳು ಕ್ರಮವಾಗಿ ರೂ. 740, ರೂ. 7,400 ಹಾಗೂ ರೂ.74,000 ಗಳಾಗಿವೆ. ಮಿಕ್ಕಂತೆ ದೇಶದ ಇತರೆ ಮಹಾನಗರಗಳಾದ ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿ ದರ ರೂ. 74,000 ಆಗಿದ್ದರೆ, ದೆಹಲಿಯಲ್ಲಿ ರೂ. 72,750, ಮುಂಬೈನಲ್ಲಿ ರೂ.72,750 ಹಾಗೂ ಕೊಲ್ಕತ್ತದಲ್ಲೂ ರೂ. 72,750 ಗಳಾಗಿದೆ. (ಸಾಂದರ್ಭಿಕ ಚಿತ್ರ)