ಮಧ್ಯಪ್ರದೇಶ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. ಇತ್ತೀಚೆಗಷ್ಟೇ ನೈಸರ್ಗಿಕ ಕೃಷಿಯತ್ತ ಗಮನಹರಿಸಿರುವ ಸರ್ಕಾರ ದೇಶಿ ಹಸುಗಳ ರಕ್ಷಣೆಗೆ ಹಲವು ಕ್ರಮಗಳನ್ನು ಕೈಗೊಂಡಿದೆ. ಪ್ರೋತ್ಸಾಹ ಧನ ನೀಡಲು ನಿರ್ಧರಿಸಿದೆ. ಅಗತ್ಯವಿರುವ ದೇಶಿ ಹಸುಗಳನ್ನು ಸಾಕುವ ರೈತರಿಗೆ ಮಾಸಿಕ 900 ರೂ. ನೀಡುವುದಾಗಿ ಸೋಮವಾರ ಇಲ್ಲಿ ನಡೆದ ನೀತಿ ಆಯೋಗದ ಕಾರ್ಯಾಗಾರದಲ್ಲಿ ಕೃಷಿ ಕುರಿತು ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಈ ಘೋಷಣೆ ಮಾಡಿದರು. (ಸಾಂಕೇತಿಕ ಚಿತ್ರ)
ನೈಸರ್ಗಿಕ ಕೃಷಿಯನ್ನು ಉತ್ತೇಜಿಸಲು ಮಧ್ಯಪ್ರದೇಶ ನೈಸರ್ಗಿಕ ಕೃಷಿ ಅಭಿವೃದ್ಧಿ ಮಂಡಳಿಯನ್ನು ಸಿಎಂ ಘೋಷಿಸಿದರು. ನೈಸರ್ಗಿಕ ಕೃಷಿಗೆ ದೇಶಿ ಹಸುಗಳ ಅಗತ್ಯವಿದೆ. ರೈತರು ಕನಿಷ್ಠ ಒಂದು ದೇಶಿ ಹಸುವನ್ನು ಸಾಕಬೇಕು. ಅಂತಹ ರೈತರಿಗೆ ತಿಂಗಳಿಗೆ ರೂ.900 ಪ್ರೋತ್ಸಾಹ ಧನ ನೀಡಲು ನಿರ್ಧರಿಸಲಾಗಿದೆ. ಅಂದರೆ ಹಸುವಿನ ಆರೈಕೆಗಾಗಿ ರೈತನಿಗೆ ವರ್ಷಕ್ಕೆ ಒಟ್ಟು 10,800 ರೂಪಾಯಿ ಸಿಗುತ್ತದೆ ಎಂದು ಚೌಹಾಣ್ ತಮ್ಮ ಭಾಷಣದಲ್ಲಿ ಹೇಳಿದ್ದಾರೆ. (ಸಾಂಕೇತಿಕ ಚಿತ್ರ)