ಜೀವನ್ ಅಮರ್ ಪಾಲಿಸಿಗೆ ಸೇರುವುದು ಮತ್ತು ಪಾಲಿಸಿಯನ್ನು ಕ್ಲೈಮ್ ಮಾಡುವುದು ಸುಲಭ. ಒಬ್ಬರು ತಮ್ಮ ಅಗತ್ಯತೆಗಳು ಮತ್ತು ಗುರಿಗಳಿಗೆ ಅನುಗುಣವಾಗಿ ಪಾಲಿಸಿಯನ್ನು ಆಯ್ಕೆ ಮಾಡಿಕೊಳ್ಳಬಹುದು. ಪಾಲಿಸಿ ಮೊತ್ತ, ಅವಧಿ ಇತ್ಯಾದಿಗಳ ಆಯ್ಕೆ ವಿಷಯದಲ್ಲಿ ಸಂಪೂರ್ಣ ಸ್ವಾತಂತ್ರ್ಯವಿದೆ. ಇತರ ಪಾಲಿಸಿಗಳಿಗೆ ಹೋಲಿಸಿದರೆ ಜೀವನ್ ಅಮರ್ ಪ್ರೀಮಿಯಂ ಕಡಿಮೆ. ಕ್ಲೇಮ್ ಮಾಡುವಾಗ ಯಾವುದೇ ಅಡೆತಡೆ ಇರುವುದಿಲ್ಲ. ಮೊತ್ತವನ್ನು ಸುಲಭವಾಗಿ ಖಾತೆಗೆ ಜಮಾ ಮಾಡಬಹುದು. (ಸಾಂದರ್ಭಿಕ ಚಿತ್ರ)
ಪಾಲಿಸಿ ಪ್ರಯೋಜನಗಳು: ಪಾಲಿಸಿದಾರರ ಹಠಾತ್ ಮರಣದ ಸಂದರ್ಭದಲ್ಲಿ, ವಿಮಾ ಮೊತ್ತವನ್ನು ಪಾಲಿಸಿದಾರನ ಕುಟುಂಬಕ್ಕೆ ನೀಡಲಾಗುತ್ತದೆ. ನಾಮಿನಿಯು ಮರಣ ಲಾಭದ ಮೊತ್ತವನ್ನು ಪಡೆಯುತ್ತಾರೆ. ಪೂರ್ಣ ಪಾಲಿಸಿ ಮೊತ್ತವನ್ನು ಮುಕ್ತಾಯ ದಿನಾಂಕದ ನಂತರವೂ ಪಡೆಯಬಹುದು. ಇದಲ್ಲದೆ, ಈ ಪಾಲಿಸಿಯ ಮೂಲಕ ರಿಯಾಯಿತಿಗಳನ್ನು ಪಡೆಯುವ ಸಾಧ್ಯತೆಯಿಂದಾಗಿ ಪಾವತಿಸಬೇಕಾದ ಪ್ರೀಮಿಯಂ ಕೂಡ ಕಡಿಮೆಯಾಗುತ್ತದೆ. ಹೆಚ್ಚುವರಿಯಾಗಿ ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 80C ಅಡಿಯಲ್ಲಿ ತೆರಿಗೆ ಕಡಿತ ಸೌಲಭ್ಯವಿದೆ. (ಸಾಂದರ್ಭಿಕ ಚಿತ್ರ)