ಹೂಡಿಕೆದಾರರು ಎಲ್ಐಸಿ ಐಪಿಒವನ್ನು ಅತಿದೊಡ್ಡ ಆರಂಭಿಕ ಸಾರ್ವಜನಿಕ ಕೊಡುಗೆ ಎಂದು ಪರಿಗಣಿಸುತ್ತಾರೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. Paytm ನ IPO ಇದುವರೆಗೆ 18,300 ಕೋಟಿ ರೂ. Paytm ಕಳೆದ ವರ್ಷವಷ್ಟೇ ತನ್ನ IPO ಅನ್ನು ಪಡೆದುಕೊಂಡಿದೆ. ಇದೀಗ LIC IPO Paytm ದಾಖಲೆಗಳನ್ನು ಮುರಿಯಲು ಬರುತ್ತಿದೆ. ಎಲ್ಐಸಿ ಐಪಿಒಗೆ ಸಂಬಂಧಿಸಿದಂತೆ ಎಲ್ಐಸಿ ಡ್ರಾಫ್ಟ್ ರೆಡ್ ಹೆರಿಂಗ್ ಪ್ರಾಸ್ಪೆಕ್ಟರ್ (ಡಿಆರ್ಹೆಚ್ಪಿ) ಅನ್ನು ಈಗಾಗಲೇ ಸಲ್ಲಿಸಲಾಗಿದೆ. (ಸಾಂದರ್ಭಿಕ ಚಿತ್ರ)
LIC IPO ಮಾರ್ಚ್ 10 ರಂದು ತೆರೆದುಕೊಂಡು ಮಾರ್ಚ್ 14 ರಂದು ಮುಕ್ತಾಯಗೊಳ್ಳುತ್ತದೆ. ಇವುಗಳ ಬೆಲೆ 2,000 ಮತ್ತು 2,100 ರೂ. ವರೆಗೆ ಇರಬಹುದು ಎಂದು ಅಂದಾಜಿಸಲಾಗಿದೆ. ಇಲ್ಲಿ 7 ಬಗೆಯ ಷೇರುಗಳಿವೆ ಎನ್ನಲಾಗುತ್ತಿದೆ. ಈ ಮೂಲಕ ಒಟ್ಟು 31,62,49,885 ಷೇರುಗಳು ಲಭ್ಯವಾಗಲಿವೆ. ಈ ಷೇರುಗಳ ಒಟ್ಟು ಮೌಲ್ಯ 65,416.29 ಕೋಟಿ ರೂ. ಎಂದು ಹೇಳಲಾಗಿದೆ. (ಸಾಂದರ್ಭಿಕ ಚಿತ್ರ)
LIC ಉದ್ಯೋಗಿಗಳು ಮತ್ತು ಪಾಲಿಸಿದಾರರಿಗೆ ಶೇ.10 ರವರೆಗೆ ರಿಯಾಯಿತಿ ಸಿಗುವ ಸಾಧ್ಯತೆಗಳಿವೆ. 1.58 ಕೋಟಿ ಷೇರುಗಳು ಉದ್ಯೋಗಿಗಳಿಗೆ ಮತ್ತು 3.16 ಕೋಟಿ ಷೇರುಗಳು ಪಾಲಿಸಿದಾರರಿಗೆ ಲಭ್ಯವಾಗಲಿದೆ ಎಂದು ಹೇಳಲಾಗಿದೆ. ಈ ಎರಡೂ ವರ್ಗ 1,890 ರೂಪಾಯಿ ಬೆಲೆಯ ಒಂದು ಷೇರನ್ನು ಪಡೆಯುತ್ತಾರೆ. ಆಂಕರ್ ಹೂಡಿಕೆದಾರರಿಗೆ 8.06 ಕೋಟಿ ಷೇರುಗಳು ಲಭ್ಯವಾಗಲಿದೆ. ಈ ಷೇರುಗಳ ಒಟ್ಟು ಮೌಲ್ಯ16,935.18 ಕೋಟಿ ರೂ.ಗಳಾಗಿದೆ (ಸಾಂದರ್ಭಿಕ ಚಿತ್ರ)
ಅರ್ಹ ಸಾಂಸ್ಥಿಕ ಬಿಡ್ ದಾರರಿ(Qualified institutional bidders)ಗೆ 11,290.12 ಕೋಟಿ ಮೌಲ್ಯದ 5.37 ಕೋಟಿ ಷೇರುಗಳು, ಸಾಂಸ್ಥಿಕೇತರ ಹೂಡಿಕೆದಾರರಿ (Non-institutional investors)ಗೆ 8,467.59 ಕೋಟಿ ಮೌಲ್ಯದ 4.03 ಕೋಟಿ ಷೇರುಗಳು ಮತ್ತು ಚಿಲ್ಲರೆ ಹೂಡಿಕೆದಾರರಿ(Retail investors)ಗೆ 19,757.71 ಕೋಟಿ ಮೌಲ್ಯದ 9.41 ಕೋಟಿ ಷೇರುಗಳು ಸಿಗಲಿವೆ ಎಂಬ ಎಲ್ಲಾ ವಿವರಗಳು ಪ್ರಸ್ತುತ ಚಲಾವಣೆಯಲ್ಲಿವೆ. ಈ ಬಗ್ಗೆ ಅಧಿಕೃತ ಹೇಳಿಕೆ ಇನ್ನಷ್ಟೇ ಬರಬೇಕಿದೆ. (ಸಾಂದರ್ಭಿಕ ಚಿತ್ರ)