LIC IPO Record: ಅಬ್ಬಾ! ಎಲ್ಐಸಿ ಷೇರುಗಳ ಬೇಡಿಕೆ ಕಂಡ್ರೆ ಈಗ್ಲೇ ಅಪ್ಲೈ ಮಾಡಬೇಕೆನಿಸುತ್ತೆ!
LIC IPO Updates: ಭಾರತೀಯ ಜೀವ ವಿಮಾ ನಿಗಮದ ಮೆಗಾ ಐಪಿಒ (LIC IPO) ಭಾರೀ ಬೇಡಿಕೆ ಸೃಷ್ಟಿಯಾಗಿದೆ. ಹರಾಜು ಪ್ರಕ್ರಿಯೆಯ ಮೊದಲ ದಿನವಾದ ಬುಧವಾರ ಎರಡು ಗಂಟೆಗಳ ಒಳಗೆ ಶೇಕಡಾ 20 ಕ್ಕಿಂತ ಹೆಚ್ಚು ಚಂದಾದಾರಿಕೆ ಆಗಿದೆ.
ಭಾರತೀಯ ಜೀವ ವಿಮಾ ನಿಗಮದ ಮೆಗಾ ಐಪಿಒ (LIC IPO) ಭಾರೀ ಬೇಡಿಕೆ ಸೃಷ್ಟಿಯಾಗಿದೆ. ಹರಾಜು ಪ್ರಕ್ರಿಯೆಯ ಮೊದಲ ದಿನವಾದ ಬುಧವಾರ ಎರಡು ಗಂಟೆಗಳ ಒಳಗೆ ಶೇಕಡಾ 20 ಕ್ಕಿಂತ ಹೆಚ್ಚು ಚಂದಾದಾರಿಕೆ ಆಗಿದೆ. ದಿನದ ಅಂತ್ಯಕ್ಕೆ ಶೇಕಡಾ 50ರಷ್ಟು ಚಂದಾದಾರಿಕೆ ಆಗುವ ಸಾಧ್ಯತೆ ಇದೆ ಎಂದು ಸಹ ವರದಿಯಾಗಿದೆ.
2/ 8
ಇಂದು ಮೊದಲ ದಿನವೇ ಪಾಲಿಸಿದಾರರಿಗೆ ಕಾಯ್ದಿರಿಸಿದ ಅರ್ಧದಷ್ಟು ಭಾಗವನ್ನು ಬುಕ್ ಮಾಡಲಾಗಿದೆ. ಎಲ್ಐಸಿಯ ಆರಂಭಿಕ ಷೇರು ಮಾರಾಟ ರೂ. 21,000 ಕೋಟಿ ಮೊತ್ತ ಸಂಗ್ರಹಿಸುವ ಗುರಿ ಹೊಂದಲಾಗಿದೆ.
3/ 8
ಭಾರತೀಯ ಜೀವ ವಿಮಾ ನಿಗಮದ (ಎಲ್ಐಸಿ) ಬಹು ನಿರೀಕ್ಷಿತ ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಮೊದಲ ಎರಡು ಗಂಟೆಗಳಲ್ಲಿ ಸುಮಾರು ಮೂರನೇ ಒಂದು ಭಾಗದಷ್ಟು ಷೇರುಗಳು ಚಂದಾದಾರರಾರಿಕೆ ಆಗಿದೆ.
4/ 8
ದೇಶದ ಅತಿ ದೊಡ್ಡ IPO ದ ಸಾರ್ವಜನಿಕ ಚಂದಾದಾರಿಕೆ ಪ್ರಾರಂಭವಾದ ಕೆಲವೇ ಗಂಟೆಗಳಲ್ಲಿ ಪಾಲಿಸಿದಾರರ ಭಾಗವು ಸಂಪೂರ್ಣವಾಗಿ ಚಂದಾದಾರಿಕೆಯಾಗಿದೆ.
5/ 8
ಮಧ್ಯಾಹ್ನ 12.25 ರ ಸುಮಾರಿಗೆ, ಪಾಲಿಸಿದಾರರ ಭಾಗವು 1.05 ಬಾರಿ ಚಂದಾದಾರಿಕೆಯಾಗಿದೆ. ಉದ್ಯೋಗಿಗಳಿಗೆ ಕಾಯ್ದಿರಿಸಿದ ಶೇರುಗಳ ಶೇಕಡ 50 ಕ್ಕಿಂತ ಹೆಚ್ಚು 12.25 ರ ಹೊತ್ತಿಗೆ ಚಂದಾದಾರರಾಗಿದ್ದರೆ, ಚಿಲ್ಲರೆ ಭಾಗದ ಸುಮಾರು 33 ಪ್ರತಿಶತ ಚಂದಾದಾರರಾಗಿದ್ದಾರೆ.
6/ 8
LIC IPO ದ ಬೆಲೆ ಪಟ್ಟಿಯನ್ನು ಪ್ರತಿ ಷೇರಿಗೆ ರೂ 902-949 ನಿಗದಿಪಡಿಸಲಾಗಿದೆ.
7/ 8
ಎಲ್ಐಸಿ ತನ್ನ ಪಾಲಿಸಿದಾರರಿಗೆ ಪ್ರತಿ ಷೇರಿಗೆ ರೂ 60 ಮತ್ತು ಚಿಲ್ಲರೆ ಹೂಡಿಕೆದಾರರು ಮತ್ತು ಎಲ್ಐಸಿ ಉದ್ಯೋಗಿಗಳಿಗೆ ತಲಾ ರೂ 45 ರಿಯಾಯಿತಿಯನ್ನು ನೀಡುತ್ತಿದೆ.
8/ 8
LIC IPO ಗೆ ಚಂದಾದಾರರಾಗಲು ಬಯಸುವ ಹೂಡಿಕೆದಾರರು ನಂತರ 15 ಈಕ್ವಿಟಿ ಷೇರುಗಳು ಮತ್ತು ಮಲ್ಟಿಪಲ್ಗಳಲ್ಲಿ ಬಿಡ್ ಮಾಡಬಹುದು.