Nandini Milk: ಸಿಂಗಾಪುರದವರಿಗೂ ಬೇಕು ನಮ್ಮ ನಂದಿನಿ ಹಾಲು, 500 ಕೋಟಿ ಒಪ್ಪದಂಕ್ಕೆ ಸಹಿ ಹಾಕಿದ KMF!
1974ರಲ್ಲಿ ಕಾರ್ಯಾರಂಭ ಮಾಡಿದ ಕೆಎಂಎಫ್ ವ್ಯಾಪ್ತಿಯಲ್ಲಿ ಸದ್ಯ 16 ಜಿಲ್ಲಾ ಸಹಕಾರಿ ಹಾಲು ಒಕ್ಕೂಟಗಳಿವೆ. ಕೆಎಂಎಫ್ ಅಡಿ ಗ್ರಾಮೀಣ ಭಾಗದಲ್ಲಿ 15,043 ಪ್ರಾಥಮಿಕ ಹಾಲು ಉತ್ಪಾದಕರ ಸಹಕಾರ ಸಂಘಗಳಿದ್ದು, 26 ಲಕ್ಷ ಹಾಲು ಉತ್ಪಾದಕರು ಒಕ್ಕೂಟದ ಸದಸ್ಯರಾಗಿದ್ದಾರೆ.
ಕರ್ನಾಟಕ ರಾಜ್ಯದ ಪ್ರತಿಯೊಂದು ಮನೆಯಲ್ಲೂ ನಂದಿನಿ ಹಾಲಿನದ್ದೇ ಸದ್ದು. ಇದೀಗ ರಾಜ್ಯವಷ್ಟೇ ಅಲ್ಲದೇ ವಿದೇಶದಲ್ಲೂ ಈ ನಂದಿನಿ ಹಾಲಿಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಹೆಚ್ಚಾಗಿದೆ.
2/ 8
ರಾಜ್ಯ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳವು ದೇಶದ ಗಡಿ ದಾಟಿ ಸಿಂಗಾಪುರ ಮಾರುಕಟ್ಟೆಯನ್ನು ಸೆಳೆಯಲು ಸಜ್ಜಾಗಿದೆ. ಹಾಲು ಉತ್ಪಾದನೆಯಲ್ಲಿ ದೇಶದಲ್ಲೇ 2ನೇ ಸ್ಥಾನದಲ್ಲಿರುವ ಕರ್ನಾಟಕದಿಂದ ಸಿಂಗಾಪುರಕ್ಕೆ ಹಾಲು ರಫ್ತು ಮಾಡಲು ಕೆಎಂಎಫ್ ಮುಂದಾಗಿದೆ.
3/ 8
ದೇಶದ ಸಹಕಾರಿ ಹೈನು ಉದ್ಯಮದಲ್ಲಿಗುಜರಾತ್ನ ಆನಂದ್ ಮಿಲ್ಕ್ ಯೂನಿಯನ್ ಲಿಮಿಟೆಡ್ (ಅಮುಲ್) ನಂತರದ ಸ್ಥಾನದಲ್ಲಿರುವ ಕೆಎಂಎಫ್, ಹೊರ ರಾಜ್ಯಗಳು ಹಾಗೂ ವಿದೇಶಕ್ಕೆ ಹಾಲು, ಹಾಲಿನ ಉತ್ಪನ್ನಗಳನ್ನು ರಫ್ತು ಮಾಡುತ್ತಾ ಬಂದಿದೆ.
4/ 8
ಸಿಂಗಾಪುರ ಮಾರುಕಟ್ಟೆ ಪ್ರವೇಶಿಸಲು ಅಣಿಯಾಗಿರುವ ಕೆಎಂಎಫ್, ಹಾಸನ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದಿಂದ (ಹಾಮುಲ್) ಸಿಂಗಾಪುರಕ್ಕೆ ಪ್ರತಿನಿತ್ಯ 50 ಸಾವಿರ ಲೀಟರ್ ಯುಎಚ್ಟಿ ಗುಡ್ಲೈಫ್ ಹಾಲು ಕಳುಹಿಸಲು ಒಪ್ಪಂದ ಮಾಡಿಕೊಂಡಿದೆ.
5/ 8
ಕೆಎಂಎಫ್ ವ್ಯಾಪ್ತಿಯ 16 ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಒಕ್ಕೂಟಗಳ ಪೈಕಿ ಹಾಮುಲ್, ಹಾಲು ಉತ್ಪಾದನೆ ಮತ್ತು ಆಧುನಿಕ ತಂತ್ರಜ್ಞಾನ ಅಳವಡಿಕೆಯಲ್ಲಿ ಮುಂಚೂಣಿಯಲ್ಲಿದೆ.
6/ 8
ಹಾಮೂಲ್ನಿಂದ ಮಾಲ್ಡೀವ್ಸ್ಗೆ ದಿನಕ್ಕೆ ತಿಂಗಳ ಆರಂಭದಿಂದ 11 ಸಾವಿರ ಲೀಟರ್ ಯುಎಚ್ಟಿ ಹಾಲು ರಫ್ತು ಮಾಡಲಾಗುತ್ತಿದೆ.
7/ 8
ಸಿಂಗಾಪುರಕ್ಕೆ ಮಾರುಕಟ್ಟೆ ವಿಸ್ತರಣೆಯಿಂದ ಹಾಮೂಲ್ಗೆ ವಾರ್ಷಿಕ 500 ಕೋಟಿ ರೂ. ವ್ಯವಹಾರ ನಿರೀಕ್ಷಿಸಲಾಗಿದೆ.
8/ 8
1974ರಲ್ಲಿ ಕಾರ್ಯಾರಂಭ ಮಾಡಿದ ಕೆಎಂಎಫ್ ವ್ಯಾಪ್ತಿಯಲ್ಲಿ ಸದ್ಯ 16 ಜಿಲ್ಲಾ ಸಹಕಾರಿ ಹಾಲು ಒಕ್ಕೂಟಗಳಿವೆ. ಕೆಎಂಎಫ್ ಅಡಿ ಗ್ರಾಮೀಣ ಭಾಗದಲ್ಲಿ 15,043 ಪ್ರಾಥಮಿಕ ಹಾಲು ಉತ್ಪಾದಕರ ಸಹಕಾರ ಸಂಘಗಳಿದ್ದು, 26 ಲಕ್ಷ ಹಾಲು ಉತ್ಪಾದಕರು ಒಕ್ಕೂಟದ ಸದಸ್ಯರಾಗಿದ್ದಾರೆ.