Success Story: ಹಾಲು ಮಾರಿ ದಿನಕ್ಕೆ 17 ಲಕ್ಷ ರೂಪಾಯಿ ಸಂಪಾದಿಸುವ ಕಿಶೋರ್ ಇಂದುಕುರಿ! ನಿಜಕ್ಕೂ ಅನೇಕರಿಗೆ ಸ್ಪೂರ್ತಿ ನೀಡುತ್ತೆ ಇವರ ಕಥೆ

ಕಿಶೋರ್ ಇಂದುಕುರಿ ಹೈದರಾಬಾದ್‌ನ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದರು. ಅವರ ತಂದೆ ಖಾಸಗಿ ಸಂಸ್ಥೆಯೊಂದರಲ್ಲಿ ಎಂಜಿನಿಯರ್ ಆಗಿದ್ದರು. ಆದರೆ ಇವರು ಉನ್ನತ ಹುದ್ದೆಯನ್ನೇ ಬಿಟ್ಟು ಬ್ಯುಸಿನೆಸ್​ ಸ್ಥಾಪಿಸಿ ಇಂದು ಸಕ್ಸಸ್ ಉದ್ಯಮಿಯಾಗಿದ್ದಾರೆ.

First published:

  • 18

    Success Story: ಹಾಲು ಮಾರಿ ದಿನಕ್ಕೆ 17 ಲಕ್ಷ ರೂಪಾಯಿ ಸಂಪಾದಿಸುವ ಕಿಶೋರ್ ಇಂದುಕುರಿ! ನಿಜಕ್ಕೂ ಅನೇಕರಿಗೆ ಸ್ಪೂರ್ತಿ ನೀಡುತ್ತೆ ಇವರ ಕಥೆ

    ಎಷ್ಟೋ ಜನ ದೊಡ್ಡ ದೊಡ್ಡ ಬಿಸಿನೆಸ್ ಇರುವವರು ಹೆಚ್ಚಾಗಿ ಬ್ಯುಸಿನೆಸ್ ಶುರು ಮಾಡಿದ ಆರಂಭಿಕ ದಿನಗಳಲ್ಲಿ ಪೆಟ್ಟು ತಿಂದವರೆ ಆಗಿರುತ್ತಾರೆ. ಅಂದರೆ ಆರಂಭಿಕ ದಿನಗಳಲ್ಲಿ ಬ್ಯುಸಿನೆಸ್​ನಲ್ಲಿ ತಮ್ಮ ಉಳಿತಾಯದ ಹಣವನ್ನು ಅನೇಕ ಕಾರಣಗಳಿಂದಾಗಿ ನಷ್ಟ ಅನುಭವಿಸಿದವರೆ ಆಗಿರುತ್ತಾರೆ. ಅಲ್ಲಿಗೆ ಸ್ವಲ್ಪ ಜನರು ‘ಬೇಡಪ್ಪಾ ಬೇಡ ಈ ಬ್ಯುಸಿನೆಸ್ ಸಹವಾಸ’ ಅಂತ ಹೇಳಿ ಮತ್ತೆ ಕೆಲಸಕ್ಕೆ ಸೇರಿರುವ ಉದಾಹರಣೆಗಳು ಇವೆ.

    MORE
    GALLERIES

  • 28

    Success Story: ಹಾಲು ಮಾರಿ ದಿನಕ್ಕೆ 17 ಲಕ್ಷ ರೂಪಾಯಿ ಸಂಪಾದಿಸುವ ಕಿಶೋರ್ ಇಂದುಕುರಿ! ನಿಜಕ್ಕೂ ಅನೇಕರಿಗೆ ಸ್ಪೂರ್ತಿ ನೀಡುತ್ತೆ ಇವರ ಕಥೆ

    ಇಲ್ಲಿಯೂ ಸಹ ಅಂತಹದೇ ಒಂದು ಕಥೆ ಇದೆ ನೋಡಿ. ಕಿಶೋರ್ ಇಂದುಕುರಿ ಅವರ ಕಥೆ ನಿಜಕ್ಕೂ ಅನೇಕ ಯುವಕ-ಯುವತಿಯರಿಗೆ ಸ್ಪೂರ್ತಿ ನೀಡುತ್ತದೆ. ಅವರು ಯುನೈಟೆಡ್ ಸ್ಟೇಟ್ಸ್ ನಲ್ಲಿ ಕೈ ತುಂಬಾ ಸಂಬಳ ಬರುವ ಕೆಲಸದಲ್ಲಿದ್ದರು. ಇವರು ಇಂಟೆಲ್ ಉದ್ಯೋಗಿಯಾಗಿದ್ದರು, ಆದರೆ ಅವರು ಅಮೆರಿಕಾದಲ್ಲಿನ ತಮ್ಮ ಆರಾಮದಾಯಕ ಜೀವನಕ್ಕೆ ಗುಡ್ ಬೈ ಹೇಳಿ ಭಾರತಕ್ಕೆ ಮರಳಿದರು.

    MORE
    GALLERIES

  • 38

    Success Story: ಹಾಲು ಮಾರಿ ದಿನಕ್ಕೆ 17 ಲಕ್ಷ ರೂಪಾಯಿ ಸಂಪಾದಿಸುವ ಕಿಶೋರ್ ಇಂದುಕುರಿ! ನಿಜಕ್ಕೂ ಅನೇಕರಿಗೆ ಸ್ಪೂರ್ತಿ ನೀಡುತ್ತೆ ಇವರ ಕಥೆ

    ಇಲ್ಲಿಗೆ ಬಂದವರೆ ಅನೇಕ ಕೆಲಸಗಳನ್ನು ಮಾಡಿದ ನಂತರ ಕೊನೆಗೆ ಅವರು ಒಂದು ದೊಡ್ಡ ಬೃಹತ್ ಆದ ಡೈರಿ ವ್ಯವಹಾರವನ್ನು ನಿರ್ಮಿಸಿದರು. ಈಗ ಹೈದರಾಬಾದ್ ನ ಸಿಡ್ ಡೈರಿ ಫಾರ್ಮ್ ನಗರದ ಅತ್ಯುತ್ತಮ ಫಾರ್ಮ್ ಗಳಲ್ಲಿ ಒಂದಾಗಿದೆ.

    MORE
    GALLERIES

  • 48

    Success Story: ಹಾಲು ಮಾರಿ ದಿನಕ್ಕೆ 17 ಲಕ್ಷ ರೂಪಾಯಿ ಸಂಪಾದಿಸುವ ಕಿಶೋರ್ ಇಂದುಕುರಿ! ನಿಜಕ್ಕೂ ಅನೇಕರಿಗೆ ಸ್ಪೂರ್ತಿ ನೀಡುತ್ತೆ ಇವರ ಕಥೆ

    ಕಿಶೋರ್ ಇಂದುಕುರಿ ಹೈದರಾಬಾದಿನ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದವರು. ಅವರ ತಂದೆ ಖಾಸಗಿ ಸಂಸ್ಥೆಯಲ್ಲಿ ಎಂಜಿನಿಯರ್ ಆಗಿದ್ದರು. ಅವರು ಮೂಲತಃ ನಮ್ಮ ಕರ್ನಾಟಕದವರು. ಐಐಟಿ ಖರಗ್‌ಪುರ್ ದಿಂದ ರಸಾಯನಶಾಸ್ತ್ರದಲ್ಲಿ ಪದವಿ ಪಡೆದರು. ನಂತರ ಅವರು ಮ್ಯಾಸಚೂಸೆಟ್ಸ್ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿಯನ್ನು ಸಹ ಪಡೆದರು. ಅವರು ಅದೇ ಸಂಸ್ಥೆಯಿಂದ ಪಿಎಚ್‌ಡಿ ಯನ್ನು ಸಹ ಪೂರ್ಣಗೊಳಿಸಿದರು.

    MORE
    GALLERIES

  • 58

    Success Story: ಹಾಲು ಮಾರಿ ದಿನಕ್ಕೆ 17 ಲಕ್ಷ ರೂಪಾಯಿ ಸಂಪಾದಿಸುವ ಕಿಶೋರ್ ಇಂದುಕುರಿ! ನಿಜಕ್ಕೂ ಅನೇಕರಿಗೆ ಸ್ಪೂರ್ತಿ ನೀಡುತ್ತೆ ಇವರ ಕಥೆ

    ಅವರು ಅರಿಜೋನಾದಲ್ಲಿ ಎಂಜಿನಿಯರ್ ಆಗಿ ಇಂಟೆಲ್ ಕಂಪನಿಗೆ ಕೆಲಸಕ್ಕೆ ಸೇರಿದರು. ಅವರು ಚಾಂಡ್ಲರ್ ನಲ್ಲಿ ಒಂದು ಮನೆಯನ್ನು ಖರೀದಿಸಿದ್ದರು ಮತ್ತು ಆರಾಮದಾಯಕ ಜೀವನವನ್ನು ನಡೆಸುತ್ತಿದ್ದರು. ಆದರೆ ಮನಸ್ಸಿಗೆ ಮಾತ್ರ ನೆಮ್ಮದಿ ಇರಲಿಲ್ಲ, ಏನೋ ಒಂದು ಅಸಮಾಧಾನ ಸದಾ ಕಾಡುತ್ತಲೇ ಇತ್ತಂತೆ. ಆ ಅಸಮಾಧಾನವನ್ನು ಹುಡುಕುತ್ತಾ ಭಾರತಕ್ಕೆ ಬಂದ ಅವರು ತಮ್ಮ ಸ್ವಂತ ವ್ಯವಹಾರವನ್ನು ಶುರು ಮಾಡಲು ನಿರ್ಧರಿಸಿದರಂತೆ.

    MORE
    GALLERIES

  • 68

    Success Story: ಹಾಲು ಮಾರಿ ದಿನಕ್ಕೆ 17 ಲಕ್ಷ ರೂಪಾಯಿ ಸಂಪಾದಿಸುವ ಕಿಶೋರ್ ಇಂದುಕುರಿ! ನಿಜಕ್ಕೂ ಅನೇಕರಿಗೆ ಸ್ಪೂರ್ತಿ ನೀಡುತ್ತೆ ಇವರ ಕಥೆ

    ನಂತರ ಅವರು ಅನೇಕ ವ್ಯವಹಾರಗಳನ್ನು ಪ್ರಾರಂಭಿಸಿದರು, ಆದರೆ ಅದರಲ್ಲಿ ಕೆಲವು ವಿಫಲವಾದವು. ಅವರು ಮೊದಲಿಗೆ ವಿದೇಶಕ್ಕೆ ಹೋಗಿ ಎಂಎಸ್ ಮಾಡಲು ಬಯಸುವ ವಿದ್ಯಾರ್ಥಿಗಳಿಗೆ ಜಿಆರ್‌ಇ ಮತ್ತು ಟೋಫೆಲ್ ಟ್ಯೂಷನ್ ಗಳನ್ನು ಸಹ ನೀಡಿದರು. ನಂತರ ಅವರು ತಮ್ಮ ತೋಟದಲ್ಲಿ ತರಕಾರಿ ಬೆಳೆದು ಮಾರಾಟ ಮಾಡುತ್ತಿದ್ದರು. ನಂತರ ಡೈರಿ ಫಾರ್ಮ್ ಅನ್ನು ಶುರು ಮಾಡಲು ಇವರು 1 ಕೋಟಿ ರೂಪಾಯಿಯನ್ನು ಹೂಡಿಕೆ ಮಾಡಿದರು.

    MORE
    GALLERIES

  • 78

    Success Story: ಹಾಲು ಮಾರಿ ದಿನಕ್ಕೆ 17 ಲಕ್ಷ ರೂಪಾಯಿ ಸಂಪಾದಿಸುವ ಕಿಶೋರ್ ಇಂದುಕುರಿ! ನಿಜಕ್ಕೂ ಅನೇಕರಿಗೆ ಸ್ಪೂರ್ತಿ ನೀಡುತ್ತೆ ಇವರ ಕಥೆ

    ಕಿಶೋರ್ ಅವರು 2012 ರಲ್ಲಿ ಸುಮಾರು 20 ಹಸುಗಳನ್ನು ಖರೀದಿಸಿದರು ಮತ್ತು ಒಂದು ಡೈರಿ ಫಾರ್ಮ್ ಅನ್ನು ಪ್ರಾರಂಭಿಸಿದರು. ಉತ್ಪಾದನಾ ವೆಚ್ಚ 30 ರೂಪಾಯಿಗಳಿದ್ದರೂ ಸಹ ತಮ್ಮ ಡೈರಿಯಲ್ಲಿ ಸಿಗುವ ಹಾಲನ್ನು ಲೀಟರ್ ಗೆ 15 ರೂಪಾಯಿಗೆ ಮಾರಾಟ ಮಾಡಿದರು. ಹಸುಗಳಿಗೆ ಹಾಲು ಕರೆಯುವುದರಿಂದ ಹಿಡಿದು ಉತ್ಪನ್ನವನ್ನು ತಲುಪಿಸುವವರೆಗೆ ಅವರು ಬಹುತೇಕ ಎಲ್ಲವನ್ನೂ ಮಾಡುತ್ತಿದ್ದರು. ಯಾವುದೇ ನೀರು, ಔಷಧಿಗಳು ಮತ್ತು ಹಾರ್ಮೋನುಗಳಿಲ್ಲದೆ ಅವರು ತಮ್ಮ ಉತ್ಪನ್ನವನ್ನು ಮಾರಾಟ ಮಾಡಿದರು.

    MORE
    GALLERIES

  • 88

    Success Story: ಹಾಲು ಮಾರಿ ದಿನಕ್ಕೆ 17 ಲಕ್ಷ ರೂಪಾಯಿ ಸಂಪಾದಿಸುವ ಕಿಶೋರ್ ಇಂದುಕುರಿ! ನಿಜಕ್ಕೂ ಅನೇಕರಿಗೆ ಸ್ಪೂರ್ತಿ ನೀಡುತ್ತೆ ಇವರ ಕಥೆ

    ಕಿಶೋರ್ ಹೈದರಾಬಾದ್ ನ ಖಾಸಗಿ ಹಾಲು ಪೂರೈಕೆದಾರರಲ್ಲಿ ಒಬ್ಬರಾಗಿದ್ದಾರೆ. ಶೀಘ್ರದಲ್ಲಿಯೇ ಕಿಶೋರ್ ಇಂದುಕುರಿ ಅವರು ಹೈದರಾಬಾದ್ ನ ಅತಿದೊಡ್ಡ ಖಾಸಗಿ ಹಾಲು ಪೂರೈಕೆಯ ಘಟಕವನ್ನು ಸ್ಥಾಪಿಸಲಿದ್ದಾರೆ. ಅವರ ಕಂಪನಿಯು ನೂರಾರು ರೈತರಿಂದ ಶುದ್ಧ ಹಾಲನ್ನು ಸಂಗ್ರಹಿಸುತ್ತದೆ. ಅವರು ಪ್ರತಿದಿನ ಸಾವಿರಾರು ಗ್ರಾಹಕರಿಗೆ ಹಾಲನ್ನು ಪೂರೈಸುತ್ತಾರೆ. ಅವರು 100 ಕ್ಕೂ ಹೆಚ್ಚು ಜಾನುವಾರುಗಳೊಂದಿಗೆ ಒಂದು ದೊಡ್ಡ ಡೈರಿ ಫಾರ್ಮ್ ಅನ್ನು ನಡೆಸುತ್ತಿದ್ದಾರೆ. ಇದು 120 ಕ್ಕೂ ಹೆಚ್ಚು ಉದ್ಯೋಗಿಗಳನ್ನು ಸಹ ಹೊಂದಿದೆ.

    MORE
    GALLERIES