Kia CPO ಗ್ರಾಹಕರಿಗೆ ಎರಡು ವರ್ಷಗಳವರೆಗೆ ವಾರಂಟಿ ನೀಡುತ್ತದೆ. ಇಲ್ಲವಾದರೆ ಗರಿಷ್ಠ 40 ಸಾವಿರ ಕಿಲೋಮೀಟರ್ ವರೆಗೆ ವಾರಂಟಿ ಬರುತ್ತದೆ. ಅಲ್ಲದೆ Kia ಅಲ್ಲದ ಮಾದರಿಗಳು ಈ Kia CPO ನಲ್ಲಿ ಲಭ್ಯವಿದೆ. ನೀವು ನಾಲ್ಕು ಉಚಿತ ನಿರ್ವಹಣಾ ಸೇವೆಗಳನ್ನು ಸಹ ಪಡೆಯಬಹುದು. ಕಿಯಾ ಕಾರು ಖರೀದಿಸಿದವರಲ್ಲಿ ಅನೇಕರು ತಮ್ಮ ಹಳೆಯ ಕಾರಿಗೆ ಬದಲಿ ಕಾರು ಪಡೆದಿದ್ದಾರೆ, ಹಾಗಾಗಿ ಈಗ ಅವರು ಸ್ವಂತವಾಗಿ ಸೆಕೆಂಡ್ ಹ್ಯಾಂಡ್ ಕಾರು ಉದ್ಯಮಕ್ಕೆ ಪ್ರವೇಶಿಸಿದ್ದಾರೆ ಎಂದು ಕಂಪನಿಯ ಮುಖ್ಯ ಮಾರಾಟ ಅಧಿಕಾರಿ ಮ್ಯುಂಗ್ ಸಿಕ್ ಸೊಹ್ನ್ ಹೇಳಿದ್ದಾರೆ.