ಕರ್ನಾಟಕ ಸರ್ಕಾರವು ನಿರುದ್ಯೋಗ ನಿವಾರಣೆ ಮಾಡುವ ಉದ್ದೇಶದಿಂದ ಕರ್ನಾಟಕ ಮುಖ್ಯಮಂತ್ರಿ ಸ್ವಯಂ ಉದ್ಯೋಗ ಸೃಷ್ಟಿ ಯೋಜನೆಯನ್ನು ಈಮುನ್ನ ಪ್ರಾರಂಭಿಸಿತ್ತು. ಈ ಯೋಜನೆಯ ಮೂಲಕ ಸರ್ಕಾರವು ಗರಿಷ್ಠ ಯೋಜನಾ ವೆಚ್ಚ ರೂ 10 ಲಕ್ಷದವರೆಗಿನ ಸಾಲದ ಮೇಲೆ ಬಡ್ಡಿ ಸಬ್ಸಿಡಿಯನ್ನು ನೀಡಲಾಗುತ್ತಿತ್ತು.
2/ 8

3/ 8
ಗ್ರಾಮೀಣ ಪ್ರದೇಶದ ನಿರುದ್ಯೋಗಿ ಯುವಕರು ಈ ಯೋಜನೆಯ ಲಾಭ ಪಡೆಯಬಹುದಿತ್ತು. ಉತ್ಪಾದನೆ ಮತ್ತು ಸೇವಾ ಚಟುವಟಿಕೆಗಳಿಗೆ ಸಾಲ ಪಡೆದರೆ ಈ ಯೋಜನೆಯ ಲಾಭವನ್ನು ಪಡೆಯಬಹುದಿತ್ತು.
4/ 8
ಆದರೆ ಮುಖ್ಯಮಂತ್ರಿಗಳ ಸ್ವಯಂ ಉದ್ಯೋಗ ಸೃಷ್ಟಿ ಯೋಜನೆಯನ್ನು 2020-21 ರಿಂದ ಸ್ಥಗಿತಗೊಳಿಸಲಾಗಿದೆ.
5/ 8
ಈ ಯೋಜನೆಯಡಿ ಯಾವುದೇ ಹೊಸ ಅರ್ಜಿಗಳನ್ನು ಸ್ವೀಕರಿಸಲಾಗುತ್ತಿಲ್ಲ. ಹಾಗಾದರೆ ನಿರುದ್ಯೋಗ ನಿವಾರಣೆಗೆ ಸ್ವಂತ ಉದ್ಯೋಗ ಮಾಡಲುಬಯಸುವ ಅಭ್ಯರ್ಥಿಗಳು ಏನು ಮಾಡಬೇಕು?
6/ 8
ಉತ್ತರ ಇಲ್ಲಿದೆ, ಮುಖ್ಯಮಂತ್ರಿಗಳ ಸ್ವಯಂ ಉದ್ಯೋಗ ಸೃಷ್ಟಿ ಯೋಜನೆಗೆ ಈಗಾಗಲೇ ಅರ್ಜಿ ಸಲ್ಲಿಸಿದ, ಸಾಲ ಮಂಜೂರಾಗದ ಅರ್ಜಿದಾರರು PMEGP ಯೋಜನೆಯಡಿ (www.kvic.org.in) ಅರ್ಜಿ ಸಲ್ಲಿಸಲು ಕರ್ನಾಟಕ ಸರ್ಕಾರ ತಿಳಿಸಿದೆ.
7/ 8
ಈಕುರಿತು ಯಾವುದೇ ಪ್ರಶ್ನೆ, ಅನುಮಾನ ಅಥವಾ ಏನೇ ಸಂದೇಹಗಳಿದ್ದರೂ ಇಲಾಖೆಯ ಜಂಟಿ ನಿರ್ದೇಶಕರಾದ director.ri@gmail.com ಗೆ ಮೇಲ್ ಕಳುಹಿಸಿ ಎಂದು ಸರ್ಕಾರ ಅಧಿಕೃತವಾಗಿ ತನ್ನ ವೆಬ್ಸೈಟ್ನಲ್ಲಿ ತಿಳಿಸಿದೆ.
8/ 8
ಅಥವಾ ಅಗತ್ಯವುಳ್ಳವರು ಸಂಪರ್ಕ ಸಂಖ್ಯೆ : 080-22386794 ಯನ್ನು ಸಹ ಸಂಪರ್ಕಿಸಿ ತಮ್ಮ ಪ್ರಶ್ನೆಗಳಿಗೆ ಉತ್ತರ, ಸಂದೇಹ ನಿವಾರಣೆ ಮಾಡಿಕೊಳ್ಳಬಹುದಾಗಿದೆ.