Account Balance: ಖಾತೆಯಲ್ಲಿ ಹಣ ಇಲ್ಲವೇ? ಆದ್ರೂ 10 ಸಾವಿರ ಡ್ರಾ ಮಾಡಬಹುದು

Account Balance | ನಿಮ್ಮ ಬ್ಯಾಂಕ್​ ಖಾತೆಯಲ್ಲಿ ಹಣ ಇಲ್ಲವೇ? ಆದ್ರೂ ನೀವೂ 10 ಸಾವಿರ ರೂಪಾಯಿ ಡ್ರಾ ಮಾಡಬಹುದು. ಈ ಸೌಲಭ್ಯ ಎಲ್ಲಾ ಖಾತೆದಾರರಿಗೆ ಸಿಗಲ್ಲ. ಯಾರಿಗೆಲ್ಲಾ ಈ ಸೌಲಭ್ಯ ಸಿಗುತ್ತೆ ಎಂಬುದರ ಮಾಹಿತಿ ಇಲ್ಲಿದೆ.

First published:

  • 17

    Account Balance: ಖಾತೆಯಲ್ಲಿ ಹಣ ಇಲ್ಲವೇ? ಆದ್ರೂ 10 ಸಾವಿರ ಡ್ರಾ ಮಾಡಬಹುದು

    ಬ್ಯಾಂಕ್​ನಲ್ಲಿ ಹಣ ಜಮೆ ಮಾಡೋದು, ಬೇಕಾದ್ರೆ ಹಿಂಪಡೆದುಕೊಳ್ಳುವುದು ಸಹಜ. ಆದರೆ ಖಾತೆಯಲ್ಲಿ ಹಣ ಇಲ್ಲದಿದ್ದರೂ 10 ಸಾವಿರ ರೂಪಾಯಿ ಹಣ ಪಡೆಯಬಹುದಾಗಿದೆ. ಇದನ್ನ ಬ್ಯಾಂಕ್​ ಓವರ್ ಡ್ರಾಫ್ಟ್​ ಎಂದು ಕರೆಯಲಾಗುತ್ತದೆ. ಎಲ್ಲಾ ಖಾತೆದಾದರರಿಗೆ ಓವರ್ ಡ್ರಾಫ್ಟ್​ ಸೌಲಭ್ಯ ಸಿಗಲ್ಲ. ಅತಿ ಹೆಚ್ಚು ವಹಿವಾಟು ನಡೆಸೋ ಗ್ರಾಹಕರಿಗೆ ಈ ಸೌಲಭ್ಯ ಸಿಗಲಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 27

    Account Balance: ಖಾತೆಯಲ್ಲಿ ಹಣ ಇಲ್ಲವೇ? ಆದ್ರೂ 10 ಸಾವಿರ ಡ್ರಾ ಮಾಡಬಹುದು

    ಆದರೆ ಕೇಂದ್ರ ಸರ್ಕಾರ ಬಡವರಿಗಾಗಿ ಆರಂಭಿಸಿದ ಜನ್​ಧನ್ ಖಾತೆದಾರರಿಗೂ ಓವರ್ ಡ್ರಾಫ್ಟ್​ ಸೌಲಭ್ಯ ಸಿಗಲಿದೆ. ಬಹುತೇಕ ಜನ್​ಧನ್ ಖಾತೆದಾರರಿಗೆ ಈ ಸೌಲಭ್ಯದ ಬಗ್ಗೆ ತಿಳಿದಿರಲ್ಲ. ಜನ್​ಧನ್​ ಖಾತೆದಾರರು ಖಾತೆಯಲ್ಲಿ ಶೂನ್ಯ ಬ್ಯಾಲೆನ್ಸ್ ಹೊಂದಿದ್ದರೂ 10 ಸಾವಿರ ರೂಪಾಯಿ ಪಡೆಯಬಹುದಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 37

    Account Balance: ಖಾತೆಯಲ್ಲಿ ಹಣ ಇಲ್ಲವೇ? ಆದ್ರೂ 10 ಸಾವಿರ ಡ್ರಾ ಮಾಡಬಹುದು

    ಎಲ್ಲಾ ವರ್ಗದ ಜನತೆಗೂ ಬ್ಯಾಂಕಿಂಗ್ ಸೇವೆಗಳನ್ನು ಒದಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು 2014 ರಲ್ಲಿ ಪ್ರಧಾನ ಮಂತ್ರಿ ಜನ್ ಧನ್ ಯೋಜನೆ (PMJDY) ಯೋಜನೆಯನ್ನು ಪ್ರಾರಂಭಿಸಿತು. ಬ್ಯಾಂಕಿಂಗ್ ಸೇವೆಯನ್ನು ಎಲ್ಲರಿಗೂ ತಲುಪಿಸುವ ಉದ್ದೇಶವನ್ನು ಜನ್​ಧನ್ ಯೋಜನೆ ಹೊಂದಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 47

    Account Balance: ಖಾತೆಯಲ್ಲಿ ಹಣ ಇಲ್ಲವೇ? ಆದ್ರೂ 10 ಸಾವಿರ ಡ್ರಾ ಮಾಡಬಹುದು

    ಸರ್ಕಾರ ನೀಡುವ ಇತರೆ ಯೋಜನೆಗಳ ಹಣವನ್ನುಈ ಖಾತೆಯ ಮೂಲಕ ಫಲಾನುಭವಿಗಳು ಪಡೆದುಕೊಳ್ಳಬಹುದಾಗಿದೆ. ಜನ್​ಧನ್ ಖಾತೆಯೂ ಸಾಮಾನ್ಯ ಉಳಿತಾಯ ಖಾತೆಯಾಗಿದೆ. ಜನ್​ಧನ್ ಖಾತೆಯನ್ನು ಯಾರೂ ಬೇಕಾದ್ರೂ ತೆಗೆಯಬಹುದಾಗಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 57

    Account Balance: ಖಾತೆಯಲ್ಲಿ ಹಣ ಇಲ್ಲವೇ? ಆದ್ರೂ 10 ಸಾವಿರ ಡ್ರಾ ಮಾಡಬಹುದು

    ಬ್ಯಾಂಕ್​ಗಳಲ್ಲಿ ಉಳಿತಾಯ ಖಾತೆ ತೆರೆದ್ರೆ ಕನಿಷ್ಠ ಬ್ಯಾಲೆನ್ಸ್ ನಿಯಮವನ್ನು ಪಾಲಿಸಬೇಕು. ಆದರೆ ಜನ್​ಧನ ಖಾತೆಗೆ ಈ ನಿಯಮ ಅನ್ವಯ ಆಗಲ್ಲ. ಜನ್ ಧನ್ ಖಾತೆ ತೆರೆಯುವವರಿಗೆ ಉಚಿತ ರೂಪಾಯಿ ಡೆಬಿಟ್ ಕಾರ್ಡ್ ಸಿಗುತ್ತದೆ. ಈ ಕಾರ್ಡ್‌ನಲ್ಲಿ ರೂ.2 ಲಕ್ಷದವರೆಗಿನ ಅಪಘಾತ ವಿಮಾ ರಕ್ಷಣೆಯು ಪೂರಕವಾಗಿ ಲಭ್ಯವಿದೆ. (ಸಾಂದರ್ಭಿಕ ಚಿತ್ರ)

    MORE
    GALLERIES

  • 67

    Account Balance: ಖಾತೆಯಲ್ಲಿ ಹಣ ಇಲ್ಲವೇ? ಆದ್ರೂ 10 ಸಾವಿರ ಡ್ರಾ ಮಾಡಬಹುದು

    ಜನ್ ಧನ್ ಖಾತೆದಾರರು ರೂ.10,000 ವರೆಗೆ ಓವರ್‌ಡ್ರಾಫ್ಟ್ ಸೌಲಭ್ಯವನ್ನು ಪಡೆಯಬಹುದು. ಅಂದರೆ ಖಾತೆಯಲ್ಲಿ ಹಣ ಇಲ್ಲದಿದ್ದರೂ 10,000 ರೂ.ವರೆಗೆ ಡ್ರಾ ಮಾಡಬಹುದು. ಓವರ್‌ಡ್ರಾಫ್ಟ್ ಮೂಲಕ ನೀವು ಎಷ್ಟು ಮೊತ್ತವನ್ನು ಡ್ರಾ ಮಾಡುತ್ತೀರೋ ಅದೇ ಮೊತ್ತವನ್ನು ನೀವು ಹಿಂದಿರುಗಿಸಬೇಕು. (ಸಾಂದರ್ಭಿಕ ಚಿತ್ರ)

    MORE
    GALLERIES

  • 77

    Account Balance: ಖಾತೆಯಲ್ಲಿ ಹಣ ಇಲ್ಲವೇ? ಆದ್ರೂ 10 ಸಾವಿರ ಡ್ರಾ ಮಾಡಬಹುದು

    ಬಹುತೇಕ ಎಲ್ಲಾ ಬ್ಯಾಂಕ್ ಗಳಲ್ಲಿ ಜನ್ ಧನ್ ಖಾತೆ ತೆರೆಯಲು ಸಾಧ್ಯವಿದೆ. ಸಾರ್ವಜನಿಕ ವಲಯದ ಬ್ಯಾಂಕುಗಳು, ಖಾಸಗಿ ಬ್ಯಾಂಕುಗಳು ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳಲ್ಲಿ ಜನ್ ಧನ್ ಖಾತೆಯನ್ನು ತೆರೆಯಬಹುದು. ಕೇವಲ ಅರ್ಜಿ ನಮೂನೆಯನ್ನು ಸಲ್ಲಿಸಿ ಮತ್ತು KYC ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ರೆ ಜನ್​ ಧನ್ ಖಾತೆ ಆರಂಭವಾಗುತ್ತದೆ. (ಸಾಂದರ್ಭಿಕ ಚಿತ್ರ)

    MORE
    GALLERIES