ITR Filing: ಐಟಿಆರ್​ ಸಲ್ಲಿಸೋ ಗಡುವು ಮುಕ್ತಾಯ! ಕೊನೆಯ ದಿನ 68 ಲಕ್ಷ ಜನರಿಂದ ಫೈಲಿಂಗ್​

ಜುಲೈ 30ರವರೆಗೆ ಒಟ್ಟಾರೆ 5.10 ಕೋಟಿ ಆದಾಯ ತೆರಿಗೆ ಪಾವತಿಯಾಗಿತ್ತು. ಭಾನುವಾರ ರಾತ್ರಿಯವರೆಗೂ ಆದಾಯ ತೆರಿಗೆ ಇಲಾಖೆಯಿಂದ ಸಹಾಯವಾಣಿ ಸಂಖ್ಯೆಯನ್ನು ನೀಡಲಾಗಿತ್ತು.

First published:

  • 18

    ITR Filing: ಐಟಿಆರ್​ ಸಲ್ಲಿಸೋ ಗಡುವು ಮುಕ್ತಾಯ! ಕೊನೆಯ ದಿನ 68 ಲಕ್ಷ ಜನರಿಂದ ಫೈಲಿಂಗ್​

    2021-22ರ ಆರ್ಥಿಕ ವರ್ಷದ ಆದಾಯ ತೆರಿಗೆ ಸಲ್ಲಿಸಲು ಜುಲೈ 31 ಕೊನೆಯ ದಿನವಾಗಿತ್ತು. ನಿನ್ನೆ ರಾತ್ರಿ 11 ಗಂಟೆಯವರೆಗೆ 67.97 ಲಕ್ಷ ಆದಾಯ ತೆರಿಗೆ ರಿಟರ್ನ್ಸ್ (ITR Filing) ಸಲ್ಲಿಕೆಯಾಗಿದೆ ಎಂದು ಆದಾಯ ತೆರಿಗೆ ಇಲಾಖೆ ತಿಳಿಸಿದೆ.

    MORE
    GALLERIES

  • 28

    ITR Filing: ಐಟಿಆರ್​ ಸಲ್ಲಿಸೋ ಗಡುವು ಮುಕ್ತಾಯ! ಕೊನೆಯ ದಿನ 68 ಲಕ್ಷ ಜನರಿಂದ ಫೈಲಿಂಗ್​

    ಈಗಾಗಲೇ ಹಲವು ಬಾರಿ ಆದಾಯ ತೆರಿಗೆ ಪಾವತಿಗೆ ಕೊನೆಯ ದಿನಾಂಕವನ್ನು ವಿಸ್ತರಿಸಿದ್ದ ಕೇಂದ್ರ ಸರ್ಕಾರ ಈ ಬಾರಿ ಗಡುವನ್ನು ವಿಸ್ತರಿಸಿಲ್ಲ.ಈ ಹಿಂದಿನಿಂದಲೂ ವಿಸ್ತರಣೆ ಗಡುವನ್ನು ವಿಸ್ತರಿಸಲ್ಲ ಎಂದು ಹೇಳಿತ್ತು. ಅದರಂತೆ ಗಡುವು ವಿಸ್ತರಣೆಯಾಗಿಲ್ಲ.

    MORE
    GALLERIES

  • 38

    ITR Filing: ಐಟಿಆರ್​ ಸಲ್ಲಿಸೋ ಗಡುವು ಮುಕ್ತಾಯ! ಕೊನೆಯ ದಿನ 68 ಲಕ್ಷ ಜನರಿಂದ ಫೈಲಿಂಗ್​

    ಭಾನುವಾರ ಸಲ್ಲಿಸಿದ ಆದಾಯ ತೆರಿಗೆ ರಿಟರ್ನ್ಸ್ ಅಂಕಿಅಂಶಗಳು ಹೀಗಿವೆ. ನಿನ್ನೆ ರಾತ್ರಿ 11 ಗಂಟೆಯವರೆಗೆ 67,97,067 ITRಗಳನ್ನು ಸಲ್ಲಿಸಲಾಗಿದೆ. ಕೊನೆಯ 1 ಗಂಟೆಯಲ್ಲಿ 4,50,013 ITRಗಳನ್ನು ಸಲ್ಲಿಸಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಟ್ವೀಟ್ ಮಾಡಿದೆ.

    MORE
    GALLERIES

  • 48

    ITR Filing: ಐಟಿಆರ್​ ಸಲ್ಲಿಸೋ ಗಡುವು ಮುಕ್ತಾಯ! ಕೊನೆಯ ದಿನ 68 ಲಕ್ಷ ಜನರಿಂದ ಫೈಲಿಂಗ್​

    ಐಟಿಆರ್ ಫೈಲಿಂಗ್ ಮಧ್ಯರಾತ್ರಿಯವರೆಗೆ ನಡೆದಿದೆ. ಕೊನೆಯ ದಿನ ಹಲವು ಜನರು ಆದಾಯ ತೆರಿಗೆ ಪಾವತಿಸುವ ವೇಳೆ ಸಾಕಷ್ಟು ತಾಂತ್ರಿಕ ಸಮಸ್ಯೆಗಳನ್ನು ಎದುರಿಸಿದರು.

    MORE
    GALLERIES

  • 58

    ITR Filing: ಐಟಿಆರ್​ ಸಲ್ಲಿಸೋ ಗಡುವು ಮುಕ್ತಾಯ! ಕೊನೆಯ ದಿನ 68 ಲಕ್ಷ ಜನರಿಂದ ಫೈಲಿಂಗ್​

    ಜುಲೈ 30ರವರೆಗೆ ಒಟ್ಟಾರೆ 5.10 ಕೋಟಿ ಆದಾಯ ತೆರಿಗೆ ಪಾವತಿಯಾಗಿತ್ತು. ಭಾನುವಾರ ರಾತ್ರಿಯವರೆಗೂ ಆದಾಯ ತೆರಿಗೆ ಇಲಾಖೆಯಿಂದ ಸಹಾಯವಾಣಿ ಸಂಖ್ಯೆಯನ್ನು ನೀಡಲಾಗಿತ್ತು.

    MORE
    GALLERIES

  • 68

    ITR Filing: ಐಟಿಆರ್​ ಸಲ್ಲಿಸೋ ಗಡುವು ಮುಕ್ತಾಯ! ಕೊನೆಯ ದಿನ 68 ಲಕ್ಷ ಜನರಿಂದ ಫೈಲಿಂಗ್​

    ನಿನ್ನೆಗೆ ಗಡುವು ಮುಗಿದಿರುವುದರಿಂದ ಇಂದಿನಿಂದ ಯಾರಾದರೂ ಆದಾಯ ತೆರಿಗೆ ಪಾವತಿಸಬೇಕಾದರೆ ದಂಡ ಪಾವತಿಸಬೇಕಾಗುತ್ತದೆ. ಕಳೆದ ಹಣಕಾಸು ವರ್ಷದಲ್ಲಿ (2020-21) ಸುಮಾರು 5.89 ಕೋಟಿ ITRಗಳನ್ನು ಸಲ್ಲಿಸಲಾಗಿತ್ತು.

    MORE
    GALLERIES

  • 78

    ITR Filing: ಐಟಿಆರ್​ ಸಲ್ಲಿಸೋ ಗಡುವು ಮುಕ್ತಾಯ! ಕೊನೆಯ ದಿನ 68 ಲಕ್ಷ ಜನರಿಂದ ಫೈಲಿಂಗ್​

    ಮೌಲ್ಯಮಾಪನ ವರ್ಷದ ಡಿಸೆಂಬರ್ 31ರೊಳಗೆ 5 ಲಕ್ಷಕ್ಕಿಂತ ಹೆಚ್ಚು ವಾರ್ಷಿಕ ಆದಾಯ ಇರುವವರು ತಮ್ಮ ಐಟಿಆರ್ ಅನ್ನು ಸಲ್ಲಿಸದಿದ್ದರೆ 5,000 ಶುಲ್ಕವನ್ನು ಪಾವತಿಸಬೇಕಾಗುತ್ತದೆ.

    MORE
    GALLERIES

  • 88

    ITR Filing: ಐಟಿಆರ್​ ಸಲ್ಲಿಸೋ ಗಡುವು ಮುಕ್ತಾಯ! ಕೊನೆಯ ದಿನ 68 ಲಕ್ಷ ಜನರಿಂದ ಫೈಲಿಂಗ್​

    5 ಲಕ್ಷಕ್ಕಿಂತ ಕಡಿಮೆ ವಾರ್ಷಿಕ ಆದಾಯ ಹೊಂದಿರುವ ವ್ಯಕ್ತಿಗಳು ವಿಳಂಬವಾಗಿ ಆದಾಯ ತೆರಿಗೆ ಪಾವತಿಸಿದರೆ 1,000 ರೂ. ಶುಲ್ಕವನ್ನು ಪಾವತಿಸಬೇಕಾಗುತ್ತದೆ.

    MORE
    GALLERIES