1. ಆಧಾರ್ ಕಾರ್ಡ್ ಭಾರತದಲ್ಲಿ ವಾಸಿಸುವ ವ್ಯಕ್ತಿಗಳಿಗೆ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (UIDAI) ನೀಡಿದ 12 ಅಂಕಿಗಳ ಗುರುತಿನ ಚೀಟಿ. ಯುಐಡಿಎಐ ನವಜಾತ ಶಿಶುವಿನಿಂದ ಹಿಡಿದು ಹಿರಿಯ ನಾಗರಿಕರವರೆಗೂ ಎಲ್ಲರಿಗೂ ಆಧಾರ್ ಕಾರ್ಡ್ ನೀಡುತ್ತಿದೆ. ಆಧಾರ್ ಕಾರ್ಡ್ ಅನ್ನು ಗುರುತಿನ ಪುರಾವೆಯಾಗಿ ಮತ್ತು ವಿಳಾಸ ಪುರಾವೆಯಾಗಿ ಬಳಸಲಾಗುತ್ತದೆ. (ಸಾಂದರ್ಭಿಕ ಚಿತ್ರ)
2. ಪಿಎಂ ಕಿಸಾನ್ (PM Kisan) ನಂತಹ ಸರ್ಕಾರಿ ಯೋಜನೆಗಳ ಲಾಭ ಪಡೆಯಲು ಆಧಾರ್ ಕಾರ್ಡ್ ಕಡ್ಡಾಯವಾಗಿದೆ. ಇದೀಗ ಮಕ್ಕಳನ್ನು ಶಾಲೆಗೆ ದಾಖಲು (School Admission) ಮಾಡಲು ಪೋಷಕರು ಮುಂದಾಗುತ್ತಿದ್ದಾರೆ. ಬಹುತೇಕ ಶಾಲೆಗಳಲ್ಲಿ ವಿಳಾಸ ಮತ್ತು ಗುರುತಿನ ದಾಖಲೆಗಾಗಿ ಆಧಾರ್ ಕಾರ್ಡ್ ಕೇಳುತ್ತಾರೆ. ಕೆಲ ಶಾಲೆಗಳು ಆಧಾರ್ ಕಾರ್ಡ್ ಇಲ್ಲದೇ ದಾಖಲಾತಿ ಮಾಡಿಕೊಳ್ಳುತ್ತಿಲ್ಲ. ಇಂತಹ ಪ್ರಕರಣಗಳು ಸಹ ಇತ್ತೀಚೆಗೆ ವರದಿಯಾಗುತ್ತಿವೆ. (ಸಾಂದರ್ಭಿಕ ಚಿತ್ರ)
3. UIDAI ನಿಯಮಾವಳಿಗಳ ಪ್ರಕಾರ ಶಾಲಾ ಪ್ರವೇಶಕ್ಕೆ ಆಧಾರ್ ಕಡ್ಡಾಯವಲ್ಲ. UIDAI ಈ ಹಿಂದೆ ಶಾಲಾ ಪ್ರವೇಶಕ್ಕೆ ಆಧಾರ್ ಕಡ್ಡಾಯವಾಗಿದೆ ಎಂದು ಹೇಳಿತ್ತು. ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE ಪರೀಕ್ಷೆಗಳು), ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (NEET) ಮತ್ತು UGC ನಡೆಸುವ ಪರೀಕ್ಷೆಗಳಿಗೂ ಸಹ ಆಧಾರ್ ಕಾರ್ಡ್ ಕಡ್ಡಾಯ ಮಾಡಿತ್ತು. (ಸಾಂದರ್ಭಿಕ ಚಿತ್ರ)
8. 5 ರಿಂದ 15 ವರ್ಷದೊಳಗಿನ ಮಕ್ಕಳ ಆಧಾರ್ ಬಯೋಮೆಟ್ರಿಕ್ಸ್ ಅನ್ನು ನವೀಕರಿಸುವುದು ಕಡ್ಡಾಯವಾಗಿದೆ. ಶಾಲೆಗಳಲ್ಲಿ ದಾಖಲಾತಿಗೆ ಆಧಾರ್ ಹೊರತುಪಡಿಸಿ ಬೇರೆ ಯಾವ ದಾಖಲೆಗಳನ್ನು ನೀಡಬೇಕು ಎಂಬ ಅನುಮಾನ ಪೋಷಕರಲ್ಲಿ ಮೂಡುವುದು ಸಾಮಾನ್ಯವಾಗಿದೆ. ಆಧಾರ್ ಕಾರ್ಡ್ ಇಲ್ಲದವರು ಜನನ ಪ್ರಮಾಣಪತ್ರ, ಪಡಿತರ ಚೀಟಿ, ಮೂಲ ಟಿಸಿ ಮುಂತಾದ ದಾಖಲೆಗಳನ್ನು ನೀಡಬಹುದು. (ಸಾಂದರ್ಭಿಕ ಚಿತ್ರ)