ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಭಾರತದ ಶ್ರೀಮಂತ ಸೆಲೆಬ್ರಿಟಿಗಳಲ್ಲಿ ಒಬ್ಬರು. ಇವರಿಬ್ಬರ ನಿವ್ವಳ ಮೌಲ್ಯ 1250 ಕೋಟಿಗೂ ಹೆಚ್ಚು. ಇಬ್ಬರ ಹೆಸರನ್ನೂ ಸೇರಿಸಿ ವಿರುಷ್ಕಾ ಹೆಸರು ಸಾಕಷ್ಟು ಫೇಮಸ್ ಆಗಿದೆ. ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಪರಸ್ಪರ ಡೇಟಿಂಗ್ ಮಾಡುವಾಗ ತಮ್ಮ ಸಂಬಂಧವನ್ನು ಎಂದಿಗೂ ಬಹಿರಂಗಗೊಳಿಸಿರಲಿಲ್ಲ ಆದರೂ ಇಬ್ಬರೂ ಹಲವಾರು ಸಂದರ್ಭಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು.
Anushka Sharma- ವಿರಾಟ್ ಕೊಹ್ಲಿಯ ಹೆಂಡತಿ ಅನುಷ್ಕಾ ಶರ್ಮಾ ಬಾಲಿವುಡ್ ನಟಿ. ಕೊಹ್ಲಿಯನ್ನು ಕೈ ಹಿಡಿಯುವ ಮುನ್ನವೇ ಬಿಗ್ ಸ್ಟಾರ್ ಆಗಿದ್ದಳಾಕೆ. ಬಹಳಷ್ಟು ಓದಿಯೂ ಇದ್ದಾಳೆ. ಅನುಷ್ಕಾ ಶರ್ಮಾ ಬಿಎ ಹಾಗೂ ಎಕನಾಮಿಕ್ಸ್ನಲ್ಲಿ ಎಂಎ ಮಾಡಿದ್ದಾರೆ. 2017ರ ಡಿಸೆಂಬರ್ 11ರಂದು ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಮದುವೆ ಆಗಿದ್ದು. ಇವರು ಹುಟ್ಟಿ ಬೆಳೆದ ಸ್ಥಳಗಳು ಇಂಟರೆಸ್ಟಿಂಗ್. ಇವರು ಹುಟ್ಟಿದ್ದು ರಾಮನ ನಾಡು ಅಯೋಧ್ಯೆಯಲ್ಲಿ. ಓದಿ ಬೆಳೆದದ್ದು ಬೆಂಗಳೂರಿನಲ್ಲಿ. ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಪದವಿ ಪಡೆದು ನಂತರ ಕರೆಸ್ಪಾಂಡೆನ್ಸ್ ಕೋರ್ಸ್ನಲ್ಲಿ ಎಂಎ ಮಾಡಿದ್ದಾರೆ.