Quick Money: ಬರೀ 15 ಸಾವಿರ ಖರ್ಚು ಮಾಡಿದ್ರೆ ಸಾಕು, ಕನಿಷ್ಠ 4 ಲಕ್ಷ ಲಾಭ ಗಳಿಸಬಹುದು..ನೀವೂ ಟ್ರೈ ಮಾಡಿ
Business Idea: ಕಡಿಮೆ ಸಮಯದಲ್ಲಿ ಕಡಿಮೆ ಹಣ ಹೂಡಿಕೆ ಮಾಡಿ ಹೆಚ್ಚು ಲಾಭ ಪಡೆಯುವ ಅವಕಾಶ ಇದ್ದರೆ ಯಾರಿಗೆ ತಾನೇ ಬೇಡ ಹೇಳಿ? ಅದರಲ್ಲೂ ಈಗಿನ ಕಾಲದಲ್ಲಂತೂ ಹಣ ಬೇಡ ಎನ್ನುವವರೇ ಇಲ್ಲ. ಆರಂಭದಲ್ಲಿ ಕೇವಲ 15ರಿಂದ 20 ಸಾವಿರ ರೂಪಾಯಿ ಮಾತ್ರ ಹೂಡಿಕೆ ಮಾಡಿ ಪ್ರತಿ ತಿಂಗಳು ಲಕ್ಷಗಟ್ಟಲೆ ಲಾಭ ಗಳಿಸುವ ಸಖತ್ ಬ್ಯುಸಿನೆಸ್ ಐಡಿಯಾ ಒಂದಿದೆ.
ಇದು ಬ್ಯುಸಿನೆಸ್ ಅಂದರೆ ವ್ಯವಹಾರ ಹೌದು. ಆದರೆ ಇದು ವ್ಯವಸಾಯವೂ ಹೌದು. ಕೇವಲ 1 ಎಕರೆ ಪ್ರದೇಶದಲ್ಲಿ ಈ ಬೆಳೆ ಬೆಳೆದರೆ ವರ್ಷಕ್ಕೆ ಎಲ್ಲಾ ಖರ್ಚು ಕಳೆದು 4 ಲಕ್ಷ ರೂಪಾಯಿ ಲಾಭ ಖಚಿತವಾಗಿಯೂ ನಿಮ್ಮದಾಗುತ್ತದೆ.
2/ 7
ಅಂದ್ಹಾಗೆ ಇದು ಲೆಮನ್ಗ್ರಾಸ್ ಗಿಡದ ವಿಚಾರ. ಈ ಗಿಡದಿಂದ ತೆಗೆದ ಎಣ್ಣೆಗೆ ಮಾರುಕಟ್ಟೆಯಲ್ಲಿ ವಿಪರೀತ ಬೇಡಿಕೆ ಇದೆ. ಇದನ್ನು ಕಾಸ್ಮೆಟಿಕ್ಸ್, ಸೋಪ್, ಕ್ರೀಂ ಮುಂತಾದ ವಸ್ತುಗಳ ತಯಾರಿಕೆಯಲ್ಲಿ ಹೇರಳವಾಗಿ ಬಳಸಲಾಗುತ್ತದೆ.
3/ 7
ಹಾಗಂತ ಲೆಮನ್ ಗ್ರಾಸ್ ಬೆಳೆಯಲು ಅತ್ಯುತ್ತಮ ಭೂಮಿ ಇರಬೇಕು ಎಂದೇನಿಲ್ಲ. ಹೆಚ್ಚು ತೇವಾಂಶ ಇರದ ಬರಡು ಭೂಮಿಯಲ್ಲೂ ಇದು ಹುಲುಸಾಗಿ ಬೆಳೆಯುತ್ತದೆ. ಫೆಬ್ರವರಿ ಮತ್ತು ಜುಲೈ ತಿಂಗಳ ನಡುವೆ ಲೆಮನ್ ಗ್ರಾಸ್ ಬಿತ್ತನೆ ಮಾಡಬೇಕು.
4/ 7
ಒಂದು ಸಲ ನೆಟ್ಟ ಗಿಡವನ್ನು ಕನಿಷ್ಟ 6 ರಿಂದ 7 ಬಾರಿ ಕಟಾವು ಮಾಡಬಹುದಾಗಿದೆ. ವರ್ಷದಲ್ಲಿ ಮೂರರಿಂದ ನಾಲ್ಕು ಬಾರಿ ಕಟಾವು ಮಾಡಬಹುದು. ಒಂದು ಗುಂಟೆ ಸ್ಥಳದಿಂದ ವರ್ಷಕ್ಕೆ ಕನಿಷ್ಟ 3ರಿಂದ 5 ಲೀಟರ್ ಎಣ್ಣೆ ಪಡೆಯುವಷ್ಟು ಲೆಮನ್ ಗ್ರಾಸ್ ಬೆಳೆಯಬಹುದು.
5/ 7
ಒಂದು ಲೀಟರ್ ಲೆಮನ್ ಗ್ರಾಸ್ ಎಣ್ಣೆಗೆ 1000 ದಿಂದ 1500 ರೂಪಾಯಿಯವರೆಗೂ ಬೆಲೆ ಇದೆ. ಗಿಡ ನೆಟ್ಟು ಮೂರರಿಂದ ಐದು ತಿಂಗಳಲ್ಲಿ ಕಟಾವು ಮಾಡಲು ಆರಂಭಿಸಬಹುದು. ಒಂದು ಎಕರೆಯಲ್ಲಿ ಬೆಳೆದ ಲೆಮನ್ ಗ್ರಾಸ್ ಗಿಡಗಳಿಂದ 5 ಟನ್ ವರೆಗೂ ಹುಲ್ಲು ಪಡೆಯಬಹುದಾಗಿದೆ.
6/ 7
ಕೇವಲ 15ರಿಂದ 20 ಸಾವಿರ ರೂಪಾಯಿ ಇದ್ದರೆ ಲೆಮನ್ ಗ್ರಾಸ್ ಬೆಳೆಯಲು ಸಾಧ್ಯವಾಗುತ್ತದೆ. ನಿಮಗೆ ಸಾಧ್ಯವಿದ್ದರೆ ಆರಂಭದಲ್ಲೇ ಒಂದಷ್ಟು ಹೆಚ್ಚು ಹಣ ಹೂಡಿ ಯಂತ್ರಗಳನ್ನು ಅಳವಡಿಸಬಹುದು. ಇದಕ್ಕೆ ಸುಮಾರು ಎರಡರಿಂದ ಎರಡೂವರೆ ಲಕ್ಷ ರೂಪಾಯಿ ಖರ್ಚಾಗುತ್ತದೆ.
7/ 7
ಅನೇಕರು ತಮ್ಮ ಮನೆಗಳಲ್ಲಿ ಲೆಮನ್ ಗ್ರಾಸ್ ನಿತ್ಯ ಬಳಸುತ್ತಾರೆ. ಆಯುರ್ವೇದದ ಔಷಧಗಳಲ್ಲೂ ಇದರ ಬಳಕೆ ವ್ಯಾಪಕವಾಗಿದೆ. ವಿಟಮಿನ್ ಸಿ ಜೊತೆಗೆ ಆಂಟಿ ಆಕ್ಸಿಡೆಂಟ್ಗಳ ಪ್ರಮಾಣ ಹೆಚ್ಚಿರುವ ಲೆಮನ್ ಗ್ರಾಸ್ ಆರೋಗ್ಯದ ಜೊತೆಗೆ ಆದಾಯವನ್ನೂ ತರುವ ಅದ್ಭುತ ಬೆಳೆ.