ಐಟಿ ದಿಗ್ಗಜ ಇನ್ಫೋಸಿಸ್ ಸಂಸ್ಥೆ ಮಾರ್ಚ್ ತ್ರೈಮಾಸಿಕದಲ್ಲಿ ನೀರಸ ಪ್ರದರ್ಶನ ನೀಡಿದೆ. ಇದರಿಂದ ಕಂಪನಿಗೆ ಭಾರೀ ನಷ್ಟ ಉಂಟಾಗಿದೆ.ಪ್ರಮುಖ ಮಾರುಕಟ್ಟೆಗಳಾದ ಅಮೆರಿಕ ಮತ್ತು ಯುರೋಪ್‌ಗಳಲ್ಲಿನ ಬ್ಯಾಂಕಿಂಗ್ ಪ್ರಕ್ಷುಬ್ಧತೆಯ ಪರಿಣಾಮ ಆದಾಯದ ಗುರಿಯನ್ನೂ ಕಡಿತಗೊಳಿಸಿದೆ.
2/ 7
ಇಂದು ಇನ್ಫೋಸಿಸ್ ಲಿಮಿಟೆಡ್ ಷೇರುಗಳು ಸುಮಾರು ಶೇ. 15ರಷ್ಟು ಭಾರೀ ಕುಸಿತ ಕಂಡಿದ್ದು, ಪ್ರತಿಸ್ಪರ್ಧಿ ಕಂಪನಿಗಳ ಷೇರುಗಳೂ ಕುಸಿಯುವಂತೆ ಮಾಡಿದೆ.
3/ 7
ಇನ್ಫೋಸಿಸ್ ಮಾರ್ಚ್‌ನಲ್ಲಿ ತಜ್ಞರ ಅಂದಾಜಿಗಿಂತ ಕಡಿಮೆ ಲಾಭವನ್ನು ವರದಿ ಮಾಡಿದ ಹಿನ್ನೆಲೆಯಲ್ಲಿ ಈ ಕುಸಿತ ದಾಖಲಾಗಿದೆ. ನಿರ್ದಿಷ್ಟವಾಗಿ ಐಟಿ ವಲಯವು ಶೇ. 6ಕ್ಕಿಂತ ಹೆಚ್ಚು ಕುಸಿತ ಕಂಡಿದ್ದು, ಸೋಮವಾರ ಅತ್ಯಂತ ಕಳಪೆ ಕಾರ್ಯನಿರ್ವಹಣೆಯ ವಲಯಗಳಲ್ಲಿ ಒಂದಾಗಿದೆ.
4/ 7
ಮಾರ್ಚ್‌ನಲ್ಲಿ ಎರಡು ಮಧ್ಯಮ ಗಾತ್ರದ ಅಮೆರಿಕದ ಬ್ಯಾಂಕ್‌ಗಳು ಕುಸಿದಿರುವುದು ಆರ್ಥಿಕ ಪರಿಸರ ವ್ಯವಸ್ಥೆಯನ್ನು ಅಲುಗಾಡಿಸಿದೆ.
5/ 7
ಇನ್ಫೋಸಿಸ್ ಅಕ್ಟೋಬರ್ 2019ರ ಬಳಿಕ ಅತಿ ದೊಡ್ಡ ಇಂಟ್ರಾಡೇ ಕುಸಿತವನ್ನು ಸೋಮವಾರ ಕಂಡಿದ್ದು, ಇತರ ಐಟಿ ಷೇರುಗಳನ್ನೂ ಕುಸಿಯುವಂತೆ ಮಾಡಿದೆ. ಇದರಿಂದ ನಿಫ್ಟಿ ಐಟಿ ಸೂಚ್ಯಂಕವು ಶೇ. 7.6ರಷ್ಟು ಕುಸಿತ ಕಂಡಿದೆ.
6/ 7
ಬೆಳಿಗ್ಗೆ ಶೇ. 15ರಷ್ಟು ಕುಸಿದಿದ್ದ ಇನ್ಫೋಸಿಸ್ ಷೇರುಗಳು ಮಧ್ಯಾಹ್ನ 11.20ರ ಸುಮಾರಿಗೆ ಶೇ. 11.10 ಅಥವಾ 154.20 ರೂ. ಕುಸಿತ ಕಂಡು 1,259 ರೂ.ಗೆ ಇಳಿಕೆ ಕಂಡಿತ್ತು.
7/ 7
ಶುಕ್ರವಾರ ಡಾ. ಬಿ.ಆರ್. ಅಂಬೇಡ್ಕರ್ ಜಯಂತಿಯ ಪ್ರಯುಕ್ತ ಭಾರತೀಯ ಷೇರು ವಿನಿಮಯ ಮಾರುಕಟ್ಟೆಗಳಿಗೆ ರಜಾದಿನವಾಗಿದ್ದರಿಂದ, ಇವೆಲ್ಲದರ ಮೊದಲ ಪ್ರತಿಕ್ರಿಯೆ ಇಂದು ಅಂದರೆ ಸೋಮವಾರ ಬೆಳಿಗ್ಗೆ ಕಂಡು ಬಂದಿದೆ.
First published:
17
Infosys ಷೇರು ಹೊಂದಿರುವವರಿಗೆ ಬಿಗ್ ಶಾಕ್!