ಇಡೀ ವಿಶ್ವದಲ್ಲೇ ಈಗ ಎಲ್ಲಾ ಕಂಪನಿಗಳು ತಮ್ಮ ಉದ್ಯೋಗಿಗಳನ್ನು ವಜಾ ಮಾಡುತ್ತಿವೆ. ಅದರಲ್ಲೂ ಟ್ವಿಟ್ಟರ್, ಫೇಸ್ಬುಕ್ ಸೇರಿದಂತೆ ದೊಡ್ಡ ದೊಡ್ಡ ಕಂಪನಿಗಳು ದೊಡ್ಡ ಮಟ್ಟದಲ್ಲಿ ಉದ್ಯೋಗಿಗಳನ್ನು ವಜಾ ಮಾಡಿದೆ.
2/ 7
ಈ ಸಂದರ್ಭದಲ್ಲಿ ಬೆಂಗಳೂರು ಮೂಲದ ಇನ್ಫೋಸಿಸ್ ಮಾತ್ರ ಹೊಸಬರ ನೇಮಕ ಮಾಡಿಕೊಳ್ಳುವುದಲ್ಲಿ ದೊಡ್ಡ ಹೆಜ್ಜೆ ಇಡುತ್ತಿದೆ. 2022-2023ನೇ ಸಾಲಿನ ಮೂರನೇ ತ್ರೈಮಾಸಿಕದಲ್ಲಿ ಇನ್ಫೋಸಿಸ್ 6000 ಮಂದಿ ಹೊಸಬರನ್ನು ನೇಮಕ ಮಾಡಿಕೊಂಡಿದೆ.
3/ 7
ಒಟ್ಟಾರೆಯಾಗಿ 23ನೇ ಹಣಕಾಸು ವರ್ಷದಲ್ಲಿ 50,000 ಮಂದಿಯ ನೇಮಕ ಮಾಡಿಕೊಳ್ಳುವ ಗುರಿಯನ್ನು ಕಂಪನಿ ಹಾಕಿಕೊಂಡಿತ್ತು. ಅದರತ್ತ ವೇಗ ಹೆಚ್ಚಿಸಿಕೊಂಡಿದೆ ಇನ್ಫೋಸಿಸ್.
4/ 7
40,000 ಮಂದಿಯನ್ನು ವರ್ಷದ ಮೊದಲಾರ್ಧದಲ್ಲೇ ನೇಮಕ ಮಾಡಿಕೊಳ್ಳಲಾಗಿದೆ. ಕಂಪನಿಯು ತನ್ನ ವಾರ್ಷಿಕ ಗುರಿಯನ್ನು ಸಾಧಿಸುವತ್ತ ಸಾಗುತ್ತಿದೆ.
5/ 7
ಆದರೆ, ನೇಮಕಾತಿ ವಿಚಾರದಲ್ಲಿ ಗುರಿಯನ್ನು ಪರಿಷ್ಕರಣೆ ಮಾಡಿಲ್ಲ ಎಂದು ಕಂಪನಿಯ ಮುಖ್ಯ ಹಣಕಾಸು ಅಧಿಕಾರಿ ನೀಲಾಂಜನ್ ರಾಯ್ ತಿಳಿಸಿದ್ದಾರೆ.
6/ 7
ಇನ್ನೂ ಇನ್ಫೋಸಿಸ್ ನೇಮಕಾತಿ ಪ್ರಕ್ರಿಯ್ರೆಗಳು ಕೂಡ ಮುಂದುವರೆದಿದೆ. ಹಣಕಾಸು ವರ್ಷಾಂತ್ಯದ ಸಮಯಕ್ಕೆ ಇನ್ಪೋಸಿಸ್ ಈ ಮೊದಲು ಹೇಳಿದಂತೆ 50000 ಮಂದಿ ಹೊಸಬರನ್ನು ನೇಮಕ ಮಾಡಿಕೊಳ್ಳಲಿದೆ.
7/ 7
ಕಂಪನಿಯಲ್ಲಿ ಹೊಸ ಉದ್ಯೋಗಿಗಳ ಸಂಖ್ಯೆ ಈಗ ಹೆಚ್ಚಿದ್ದು, ಮೈಸೂರಿನ ಕಚೇರಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ ಎಂದು ನೀಲಾಂಜನ್ ರಾಯ್ ತಿಳಿಸಿದ್ದಾರೆ.