ಪ್ರಪಂಚದಲ್ಲಿ ಬೆಲೆ ಏರಿಕೆ (Price Hike) ಆಕಾಶವನ್ನು ಮುಟ್ಟುತ್ತಿದೆ. ಗೃಹೋಪಯೋಗಿ ವಸ್ತುಗಳಿಂದ ಹಿಡಿದು ಕಂಪ್ಯೂಟರ್ಗಳವರೆಗೆ ಬೆಲೆಗಳ ಏರಿಕೆ ನಿಲ್ಲುತ್ತಿಲ್ಲ. ಬೆಲೆ ಏರಿಕೆಯಲ್ಲಿ ಕೋವಿಡ್ 19 (COVID 19) ಮಹಾಮಾರಿ ದೊಡ್ಡ ಪಾತ್ರವನ್ನು ಹೊಂದಿದೆ. ಸಾಂಕ್ರಾಮಿಕ ರೋಗದಿಂದಾಗಿ ಲಾಕ್ಡೌನ್ (Lockdown) ಮತ್ತು ಇತರ ಆರ್ಥಿಕ ನಿರ್ಬಂಧಗಳು ಮಾರುಕಟ್ಟೆ ಮೇಲೆ ಪರಿಣಾಮ ಬೀರಿವೆ. ಈ ಅಂಶಗಳೇ (Causes of inflation) ಹಣದುಬ್ಬರಕ್ಕೆ ಕಾರಣವಾಗಿದೆ. (ಫೋಟೋ: ಶಟರ್ಸ್ಟಾಕ್)
ಇಂಧನ ಬೆಲೆಗಳು (Fuel Price) ಪ್ರಪಂಚದ ಹೆಚ್ಚಿನ ದೇಶಗಳಲ್ಲಿ ಹಣದುಬ್ಬರಕ್ಕೆ ಪ್ರಮುಖ, ನೇರ ಮತ್ತು ಪರಿಣಾಮಕಾರಿ ಕಾರಣವಾಗಿದೆ. ಸಾಂಕ್ರಾಮಿಕ ರೋಗದ ಆರಂಭದಲ್ಲಿ ತೈಲದ ಬೇಡಿಕೆ ಕಡಿಮೆಯಾಗಿತ್ತು, ಆದರೆ ಅಂದಿನಿಂದ ತೈಲ ಬೆಲೆ ವೇಗವಾಗಿ ಏರಿಕೆಯಾಗುತ್ತಿದೆ. ಅಮೆರಿಕ, ಯುಕೆ, ಇಯು ಸೇರಿದಂತೆ ಎಲ್ಲ ಪ್ರಮುಖ ಆರ್ಥಿಕತೆಗಳಲ್ಲಿ ತೈಲ ಬೆಲೆ ಏರಿಕೆ ಪರಿಣಾಮ ಬೀರಿದೆ. (ಫೋಟೋ: ಶಟರ್ಸ್ಟಾಕ್)
ನಿತ್ಯ ಗೃಹೋಪಯೋಗಿ ವಸ್ತುಗಳ (Household Items) ಬೆಲೆಯೂ ಸಹ ಗಗನಕ್ಕೆ ತಲುಪಿವೆ.. ಸಾಂಕ್ರಾಮಿಕ ಸಮಯದಲ್ಲಿ (Pandemic) ಈ ವಸ್ತುಗಳ ಬೆಲೆ ಏರಿಕೆ ಕಂಡಿದೆ. ಲಾಕ್ಡೌನ್ ಸಮಯದಲ್ಲಿ ಗ್ರಾಹಕರು ಮನೆಯಲ್ಲಿ ಕುಳಿತಿದ್ರೆ, ಮಾರುಕಟ್ಟೆಗಳನ್ನು ಸಂಪೂರ್ಣ ಬಂದ್ ಮಾಡಲಾಗಿತ್ತು. ಹಾಗಾಗಿ ಬೇಡಿಕೆ ಮತ್ತು ಪೂರೈಕೆ ಎರಡೂ ಕುಸಿತ ಕಂಡಿತ್ತು. ಇದೇ ಸಮಯದಲ್ಲಿ ರೆಸ್ಟೋರೆಂಟ್ ಮತ್ತು ಆಹಾರ ಉದ್ಯಮವು ಸಂಪೂರ್ಣವಾಗಿ ಸ್ಥಗಿತಗೊಂಡಿತು. ಮತ್ತೊಂದೆಡೆ ಕಾರ್ಖಾನೆಗಳು ಇತ್ಯಾದಿಗಳು ಮುಚ್ಚಲ್ಪಟ್ಟವು, ಕಚ್ಚಾ ವಸ್ತುಗಳ ಪೂರೈಕೆಯಲ್ಲಿ ವ್ಯತ್ಯಯವಾಯಿತು. ಪ್ಲಾಸ್ಟಿಕ್, ಕಾಂಕ್ರೀಟ್, ಸ್ಟೀಲ್ ಇತ್ಯಾದಿಗಳ ಬೆಲೆಗಳು ಏರಿಕೆ ಕಾಣತೊಡಗಿದವು. ಪರಿಣಾಮವಾಗಿ, ಎಲ್ಲವೂ ದುಬಾರಿಯಾಗಲು ಪ್ರಾರಂಭಿಸಿತು. ( ಫೋಟೋ: ಸುಪ್ರಭಾತ್/ಶಟರ್ಸ್ಟಾಕ್)
ತೈಲ ಬೆಲೆಗಳಿಂದ ಮಾತ್ರವಲ್ಲದೆ, ಪ್ರಪಂಚದಾದ್ಯಂತದ ಹಡಗು ಕಂಪನಿಗಳು ಕೊರೊನಾ ಕಾಲದಲ್ಲಿ ದೊಡ್ಡ ಸಮಸ್ಯೆಯನ್ನು ಎದುರಿಸಬೇಕಾಯಿತು. ಲಾಕ್ಡೌನ್ನಿಂದ ಸರಕು ಸಾಗಣೆ ಸ್ಥಗಿತಗೊಂಡಿತ್ತು. ಆದರೆ ಸಾಂಕ್ರಾಮಿಕ ರೋಗದ ನಂತರ ಸರಕು ಸಾಗಣೆ ವ್ಯವಸ್ಥೆಯನ್ನು ಒತ್ತಡಕ್ಕೆ ಒಳಪಡಿಸಲಾಯಿತು. ಇದರ ನೇರ ಒತ್ತಡವು ಚಿಲ್ಲರೆ ವ್ಯಾಪಾರಿಗಳ ಮೇಲೆ ಬೀರಿತು. ಪ್ರಪಂಚದ ಅನೇಕ ಆರ್ಥಿಕತೆಗಳು ಸಹ ಕುಸಿದವು. ಇದು ಹಡಗು ಕಂಪನಿಗಳೊಂದಿಗೆ ಮಾತ್ರವಲ್ಲ, ವಾಯು ಮತ್ತು ರಸ್ತೆ ಸಾರಿಗೆಯಲ್ಲಿಯೂ ಸಂಭವಿಸಿದೆ. (ಫೋಟೋ: ಪಿಕ್ಸಾಬೇ Pixabay)
ಸಾಂಕ್ರಾಮಿಕ ರೋಗದಲ್ಲಿ ಅನೇಕ ಜನರು ತಮ್ಮ ಉದ್ಯೋಗವನ್ನು ಕಳೆದುಕೊಂಡು ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದರು. ಮತ್ತೊಂದಡೆ ಸಹಜ ಸ್ಥಿತಿಗೆ ಮರಳಿದ ನಂತರ ಕಂಪನಿಗಳು ಕಾರ್ಮಿಕರ ಸಮಸ್ಯೆಯನ್ನು ಎದುರಿಸಿದವು. ಸದ್ಯ ಬಹುತೇಕ ಕಂಪನಿಗಳು ಭತ್ಯೆ ಹೆಚ್ಚಿಸುವ ಹಂತಕ್ಕೆ ತಲುಪಿವೆ. ಹೊಸ ಕಾರ್ಮಿಕರ ನೇಮಕಾತಿಯಲ್ಲೂ ಕಂಪನಿಗಳು ಸಮಸ್ಯೆಯನ್ನು ಕಾಣುತ್ತಿವೆ. (ಫೋಟೋ - Sk Hasan Ali _ Shutterstock)