Businessmen: ಇವರೇ ನೋಡಿ ಭಾರತದ ಶ್ರೀಮಂತ ಉದ್ಯಮಿಗಳ ಸೊಸೆಯಂದಿರು- ಇಲ್ಲಿದೆ ಇಂಟ್ರೆಸ್ಟಿಂಗ್ ಕಹಾನಿ

ಇಂಟೆರೆಸ್ಟಿಂಗ್‌ ವಿಷಯ ಏನೆಂದರೆ ಈ ಅತಿ ಶ್ರೀಮಂತ ಉದ್ಯಮಿಗಳ ಸೊಸೆಯಂದಿರು (Daughter in Law) ಟ್ರೆಂಡ್‌ಸೆಟರ್‌ಗಳಾಗಿದ್ದು, ತಮ್ಮದೇ ಆದ ಅಭಿಮಾನಿ ಬಳಗವನ್ನು(Fans) ಹೊಂದಿದ್ದಾರೆ.

First published:

 • 18

  Businessmen: ಇವರೇ ನೋಡಿ ಭಾರತದ ಶ್ರೀಮಂತ ಉದ್ಯಮಿಗಳ ಸೊಸೆಯಂದಿರು- ಇಲ್ಲಿದೆ ಇಂಟ್ರೆಸ್ಟಿಂಗ್ ಕಹಾನಿ

  ಕುಟುಂಬವೆಂದರೆ(Family) ಅಲ್ಲಿ ಪ್ರೀತಿ ಬಾಂಧವ್ಯ(Love) ಇದ್ದೇ ಇರುತ್ತದೆ. ಅದು ದೊಡ್ಡ ಕುಟುಂಬವಾಗಲಿ ಅಥವಾ ಚಿಕ್ಕದಿರಲಿ. ಒಂದಲ್ಲ ಒಂದು ಕಾರಣಕ್ಕೆ ಪರಿವಾರದೊಂದಿಗೆ ನಾವು ಭೇಟಿಯಾಗುತ್ತಲೇ(Meet) ಇರುತ್ತೇವೆ. ಅದರಲ್ಲೂ ಹಬ್ಬ-ಹರಿದಿನ, ಮದುವೆ ಮುಂತಾದ ವಿಶೇಷ ಸಂದರ್ಭಗಳಲ್ಲಿ ಒಟ್ಟಾಗುತ್ತೇವೆ. ಇದಕ್ಕೆ ಪ್ರಸಿದ್ಧ ಶ್ರೀಮಂತ ಉದ್ಯಮಿಗಳ(Rich Families) ಕುಟುಂಬಗಳೂ ಹೊರತಲ್ಲ. ಭಾರತದ ಬಿಲಿಯನೇರ್ ಉದ್ಯಮಿಗಳು ಮತ್ತು ಅವರ ಮಕ್ಕಳ ಬಗ್ಗೆ ನಾವೆಲ್ಲರೂ ಕೇಳಿರುತ್ತೇವೆ. ಆದರೆ ಅಂಥ ಶ್ರೀಮಂತ ಮನೆತನದ ಸೊಸೆಯಂದಿರ ಕುರಿತು ಕಡಿಮೆ ಕೇಳಿರುತ್ತೇವೆ. ಆದರೆ ಇಂಟೆರೆಸ್ಟಿಂಗ್‌ ವಿಷಯ ಏನೆಂದರೆ ಈ ಅತಿ ಶ್ರೀಮಂತ ಉದ್ಯಮಿಗಳ ಸೊಸೆಯಂದಿರು (Daughter in Law) ಟ್ರೆಂಡ್‌ಸೆಟರ್‌ಗಳಾಗಿದ್ದು, ತಮ್ಮದೇ ಆದ ಅಭಿಮಾನಿ ಬಳಗವನ್ನು(Fans) ಹೊಂದಿದ್ದಾರೆ.

  MORE
  GALLERIES

 • 28

  Businessmen: ಇವರೇ ನೋಡಿ ಭಾರತದ ಶ್ರೀಮಂತ ಉದ್ಯಮಿಗಳ ಸೊಸೆಯಂದಿರು- ಇಲ್ಲಿದೆ ಇಂಟ್ರೆಸ್ಟಿಂಗ್ ಕಹಾನಿ

  1. ಶ್ಲೋಕಾ ಮೆಹ್ತಾ ಅಂಬಾನಿ: ಭಾರತದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಯಾರಿಗೆ ಗೊತ್ತಿಲ್ಲ. ಅವರ ಸೊಸೆ ಶ್ಲೋಕಾ ಮೆಹ್ತಾ ಅಂಬಾನಿ ಒಬ್ಬ ಫ್ಯಾಷನಿಸ್ಟ್‌ ಆಗಿದ್ದಾರೆ. ಶ್ಲೋಕಾ ಅನೇಕ ಕಾರಣಗಳಿಗಾಗಿ ಪ್ರಸಿದ್ಧರಾಗಿದ್ದಾರೆ. ಮಾರ್ಚ್ 9, 2019 ರಂದು ಆಕಾಶ್ ಅಂಬಾನಿ ಅವರನ್ನು ಮದುವೆಯಾಗುವ ಮೂಲಕ ಶ್ಲೋಕಾ ಮೆಹ್ತಾ ಅಂಬಾನಿ ಮನೆ ಸೊಸೆಯಾದರು. ಇದು ಭಾರತದ ಅತಿದೊಡ್ಡ ವಿವಾಹಗಳಲ್ಲಿ ಒಂದಾಗಿತ್ತು. ದಂಪತಿಗೆ ಪೃಥ್ವಿ ಆಕಾಶ್ ಅಂಬಾನಿ ಎಂಬ ಮಗನಿದ್ದಾನೆ.

  MORE
  GALLERIES

 • 38

  Businessmen: ಇವರೇ ನೋಡಿ ಭಾರತದ ಶ್ರೀಮಂತ ಉದ್ಯಮಿಗಳ ಸೊಸೆಯಂದಿರು- ಇಲ್ಲಿದೆ ಇಂಟ್ರೆಸ್ಟಿಂಗ್ ಕಹಾನಿ

  2. ಪರಿಧಿ ಶ್ರಾಫ್ ಅದಾನಿ: ಪ್ರಸಿದ್ಧ ಕೈಗಾರಿಕೋದ್ಯಮಿ ಗೌತಮ್‌ ಅದಾನಿ ಸೊಸೆ ಹಾಗೂ ಕರಣ್‌ ಅದಾನಿ ಪತ್ನಿಯಾಗಿರುವ ಪರಿಧಿ ಶ್ರಾಫ್‌ ಅದಾನಿಯವರದ್ದೂ ಜನಪ್ರಿಯ ವ್ಯಕ್ತಿತ್ವ. ಕೋಟ್ಯಾಧಿಪತಿ ಮನೆಯ ಸೊಸೆಯಾಗಿದ್ದರೂ ಇವರು ವಕೀಲರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ತಮ್ಮದೇ ಆದ ಆಸಕ್ತಿಯ ಕ್ಷೇತ್ರದಲ್ಲಿ ಭವಿಷ್ಯವನ್ನು ರೂಪಿಸಿಕೊಳ್ಳುತ್ತಿದ್ದಾರೆ. ಇವರು ಭಾರತದ ಅತಿದೊಡ್ಡ ಕಾನೂನು ಸಂಸ್ಥೆಯಾದ ಸಿರಿಲ್ ಅಮರಚಂದ್ ಮಂಗಲದಾಸ್ ಅವರ ಕಂಪನಿ ಸೇರಿದ್ದಾರೆ.

  MORE
  GALLERIES

 • 48

  Businessmen: ಇವರೇ ನೋಡಿ ಭಾರತದ ಶ್ರೀಮಂತ ಉದ್ಯಮಿಗಳ ಸೊಸೆಯಂದಿರು- ಇಲ್ಲಿದೆ ಇಂಟ್ರೆಸ್ಟಿಂಗ್ ಕಹಾನಿ

  3. ಅನುಶ್ರೀ ಜಿಂದಾಲ್: ಜೆಎಸ್‌ಡಬ್ಲ್ಯು ಗ್ರೂಪ್‌ನ ಅಧ್ಯಕ್ಷ, ಸಜ್ಜನ್ ಜಿಂದಾಲ್ ಅವರ ಪುತ್ರ, ಪಾರ್ಥ್ ಜಿಂದಾಲ್ ಅವರ ಪತ್ನಿ ಅನುಶ್ರೀ ಜಿಂದಾಲ್ ಬಹಳಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. 2016 ರಲ್ಲಿ ವಿಯೆನ್ನಾದಲ್ಲಿ ಪಾರ್ಥ್‌ ಹಾಗೂ ಅನುಶ್ರೀ ದಂಪತಿಗಳಾದರು. ಪಾರ್ಥ್ ಜಿಂದಾಲ್ IPL ತಂಡದ ಮಾಲೀಕ, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ISL ಫುಟ್ಬಾಲ್ ಕ್ಲಬ್ ಬೆಂಗಳೂರು FC ನ CEO ಆಗಿದ್ದರೆ, ಅವರ ಪತ್ನಿ ಸ್ವಾಮಾನ್ ಫೈನಾಷಿಯಲ್ ಸರ್ವಿಸಸ್ ಅನ್ನು ನಿರ್ವಹಿಸುತ್ತಿದ್ದಾರೆ. ದಂಪತಿಗೆ ಒಬ್ಬ ಮಗಳಿದ್ದಾಳೆ.

  MORE
  GALLERIES

 • 58

  Businessmen: ಇವರೇ ನೋಡಿ ಭಾರತದ ಶ್ರೀಮಂತ ಉದ್ಯಮಿಗಳ ಸೊಸೆಯಂದಿರು- ಇಲ್ಲಿದೆ ಇಂಟ್ರೆಸ್ಟಿಂಗ್ ಕಹಾನಿ

  4. ಕ್ರಿಶಾ ಶಾ ಅಂಬಾನಿ: ಮುಖೇಶ್ ಅಂಬಾನಿಯವರ ಕಿರಿಯ ಸಹೋದರ ಅನಿಲ್ ಅಂಬಾನಿಯವರದ್ದು ಜನಪ್ರಿಯ ಹೆಸರು. ಅನಿಲ್‌ ಅಂಬಾನಿ ಅವರ ಹಿರಿಯ ಸೊಸೆ ಹಾಗೂ ಜೈ ಅನ್ಮೋಲ್‌ ಅಂಬಾನಿ ಪತ್ನಿಯೇ ಕ್ರಿಶಾ ಶಾ ಅಂಬಾನಿ. ಜೈ ಅನ್ಮೋಲ್‌ ಕುಟುಂಬದ ವ್ಯವಹಾರಗಳನ್ನು ನೋಡಿಕೊಂಡರೆ ಪತ್ನಿ ಕ್ರಿಶಾ ಸಾಮಾಜಿಕ ಕಾರ್ಯಕರ್ತೆಯಾಗಿದ್ದಾರೆ. ಇವರು ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್‌ನಿಂದ ಸಾಮಾಜಿಕ ನೀತಿ ಮತ್ತು ಅಭಿವೃದ್ಧಿಯಲ್ಲಿ ಪದವಿ ಪಡೆದಿದ್ದಾರೆ.

  MORE
  GALLERIES

 • 68

  Businessmen: ಇವರೇ ನೋಡಿ ಭಾರತದ ಶ್ರೀಮಂತ ಉದ್ಯಮಿಗಳ ಸೊಸೆಯಂದಿರು- ಇಲ್ಲಿದೆ ಇಂಟ್ರೆಸ್ಟಿಂಗ್ ಕಹಾನಿ

  5. ನತಾಶಾ ಪೂನವಾಲಾ: ಸೈರಸ್ ಎಸ್ ಪೂನವಾಲಾ ಅವರು ಭಾರತೀಯ ಬಿಲಿಯನೇರ್ ಮತ್ತು ಸೈರಸ್ ಪೊನವಾಲಾ ಗ್ರೂಪ್‌ನ ಅಧ್ಯಕ್ಷರಾಗಿದ್ದಾರೆ. ಇದು ವಿಶ್ವದ ಅತಿದೊಡ್ಡ ಲಸಿಕೆ ತಯಾರಕರಾದ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾವನ್ನು ಸಹ ಒಳಗೊಂಡಿದೆ. ಅವರ ಮಗ, ಆದರ್ ಪೂನಾವಾಲಾ ಅವರ ಪತ್ನಿ ನತಾಶಾ ಪೂನಾವಾಲಾ ಸೆಲೆಬ್ರಿಟಿಗಳಿಗಿಂತ ಮುಂಚೆಯೇ ಫ್ಯಾಷನ್ ಟ್ರೆಂಡ್‌ಗಳನ್ನು ಹೊಂದಿಸಲು ಹೆಸರುವಾಸಿಯಾಗಿದ್ದಾರೆ.

  MORE
  GALLERIES

 • 78

  Businessmen: ಇವರೇ ನೋಡಿ ಭಾರತದ ಶ್ರೀಮಂತ ಉದ್ಯಮಿಗಳ ಸೊಸೆಯಂದಿರು- ಇಲ್ಲಿದೆ ಇಂಟ್ರೆಸ್ಟಿಂಗ್ ಕಹಾನಿ

  6. ಸಾಕ್ಷಿ ಛಾಬ್ರಾ ಮಿತ್ತಲ್: ಭಾರ್ತಿ ಎಂಟರ್‌ಪ್ರೈಸಸ್‌ನ ಸಂಸ್ಥಾಪಕ ಮತ್ತು ಅಧ್ಯಕ್ಷರಾಗಿರುವ ಸುನಿಲ್ ಭಾರತಿ ಮಿತ್ತಲ್, USD 1,500 ಕೋಟಿಗಳ ನಿವ್ವಳ ಮೌಲ್ಯವನ್ನು ಹೊಂದಿರುವ ಮತ್ತೊಬ್ಬ ಭಾರತೀಯ ಬಿಲಿಯನೇರ್. ಅವರ ಮಗ ಶರ್ವಿನ್ ಮಿತ್ತಲ್, ಬಾಲ್ಯದ ಪ್ರಿಯತಮೆ ಸಾಕ್ಷಿ ಛಾಬ್ರಾ ಮಿತ್ತಲ್ ಅವರನ್ನು ವಿವಾಹವಾಗಿದ್ದಾರೆ. ಇನ್ನು ಸಾಕ್ಷಿ ತಮ್ಮದೇ ಆಸಕ್ತಿಯ ಕ್ಷೇತ್ರದಲ್ಲಿ ಮುಂದುವರಿಯುತ್ತಿದ್ದು FOODHAK ನ ಸಂಸ್ಥಾಪಕ ಮತ್ತು ಸಿಇಒ ಆಗಿದ್ದಾರೆ.

  MORE
  GALLERIES

 • 88

  Businessmen: ಇವರೇ ನೋಡಿ ಭಾರತದ ಶ್ರೀಮಂತ ಉದ್ಯಮಿಗಳ ಸೊಸೆಯಂದಿರು- ಇಲ್ಲಿದೆ ಇಂಟ್ರೆಸ್ಟಿಂಗ್ ಕಹಾನಿ

  7. ಅದಿತಿ ಪ್ರೇಮ್‌ಜಿ: ಪ್ರಸಿದ್ಧ ಭಾರತೀಯ ಉದ್ಯಮಿ, ಅಜೀಂ ಪ್ರೇಮ್‌ಜಿ ಅವರ ನಿವ್ವಳ ಮೌಲ್ಯ USD 920 ಕೋಟಿ. ಅವರ ಸೊಸೆ ಅದಿತಿ ಪ್ರೇಮ್‌ಜಿ ಮತ್ತೊಬ್ಬ ಪ್ರಸಿದ್ಧ ಪರ್ಸನಾಲಿಟಿ. ರಿಷಾದ್‌ ಹಾಗೂ ಅದಿತಿ 2005ರಲ್ಲಿ ವಿವಾಹವಾಗಿದ್ದು ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.

  MORE
  GALLERIES