Baby Berth: ರೈಲ್ವೇ ಪ್ರಯಾಣಿಕರಿಗೆ ಗುಡ್​ನ್ಯೂಸ್​! ಭಾರತೀಯ ರೈಲ್ವೆಯಿಂದ ಬೇಬಿ ಬರ್ತ್​ ಯೋಜನೆಯಲ್ಲಿ ಮಹತ್ವದ ಬದಲಾಣೆ

ಪ್ರತಿನಿತ್ಯ ಸಾವಿರಾರು ಮಂದಿ ರೈಲಿನಲ್ಲಿ ಪ್ರಯಾಣಿಸುತ್ತಾರೆ. ಅವರು ದೂರದ ಸ್ಥಳಗಳಿಗೆ ಹೋಗುತ್ತಾರೆ. ಆದರೆ ಮಕ್ಕಳೊಂದಿಗೆ ಪ್ರಯಾಣ ಮಾಡುವುದು ಸ್ವಲ್ಪ ಕಷ್ಟ ಎನ್ನಬಹುದು. ಯಾಕೆಂದರೆ ತಾಯಿ ಮಕ್ಕಳು ಸಿಂಗಲ್ ಬರ್ತ್ ನಲ್ಲಿ ಹೊಂದಿಕೊಂಡು ಪ್ರಯಾಣಿಸಬೇಕು. ಹೀಗಾಗಿ ಇದೀಗ ರೈಲ್ವೆ ಇಲಾಖೆ ಮಹತ್ವದ ನಿರ್ಧಾರ ಕೈಗೊಂಡಿದ್ದು, ಶೀಘ್ರದಲ್ಲೇ ಎಲ್ಲಾ ರೈಲುಗಳಲ್ಲಿ ಬೇಬಿ ಬರ್ತ್‌ಗಳನ್ನು ಅಳವಡಿಲು ನಿರ್ಧರಿಸಿದೆ.

First published:

  • 18

    Baby Berth: ರೈಲ್ವೇ ಪ್ರಯಾಣಿಕರಿಗೆ ಗುಡ್​ನ್ಯೂಸ್​! ಭಾರತೀಯ ರೈಲ್ವೆಯಿಂದ ಬೇಬಿ ಬರ್ತ್​ ಯೋಜನೆಯಲ್ಲಿ ಮಹತ್ವದ ಬದಲಾಣೆ

    ಭಾರತೀಯ ರೈಲ್ವೆಯು ಪ್ರಯಾಣಿಕರ ಅನುಕೂಲಕ್ಕಾಗಿ ಹಲವು ಬದಲಾವಣೆಗಳನ್ನು ಮಾಡುತ್ತಿದೆ. ಈ ಬಾರಿ ಮಕ್ಕಳ ಪ್ರಯಾಣಕ್ಕೆ ಸಂಬಂಧಿಸಿದಂತೆ ಬದಲಾವಣೆ ಮಾಡಲಾಗಿದ್ದು, ಶೀಘ್ರವೇ ಜಾರಿಗೆ ಬರಲಿದೆ. ಮಕ್ಕಳೊಂದಿಗೆ ಪ್ರಯಾಣಿಸುವ ಮಹಿಳೆಯರಿಗೆ ರೈಲ್ವೆ ಸುಲಭಗೊಳಿಸಿದೆ.

    MORE
    GALLERIES

  • 28

    Baby Berth: ರೈಲ್ವೇ ಪ್ರಯಾಣಿಕರಿಗೆ ಗುಡ್​ನ್ಯೂಸ್​! ಭಾರತೀಯ ರೈಲ್ವೆಯಿಂದ ಬೇಬಿ ಬರ್ತ್​ ಯೋಜನೆಯಲ್ಲಿ ಮಹತ್ವದ ಬದಲಾಣೆ

    ನೀವು ಕೂಡ ನಿಮ್ಮ ಮಕ್ಕಳೊಂದಿಗೆ ರೈಲಿನಲ್ಲಿ ಪ್ರಯಾಣಿಸಲು ಹೊರಟಿದ್ದರೆ, ಈ ಬದಲಾವಣೆಯ ಬಗ್ಗೆ ನೀವು ಖಂಡಿತವಾಗಿ ತಿಳಿದಿರಲೇಬೇಕು. ಐದು ವರ್ಷದೊಳಗಿನ ಮಕ್ಕಳಿಗಾಗಿ ವಿಶೇಷ ಬೇಬಿ ಬರ್ತ್‌ಗಳನ್ನು ಮಾಡಲು ರೈಲ್ವೆ ಇಲಾಖೆ ಅಧ್ಯಯನ ಪ್ರಾರಂಭಿಸಿದೆ. ಶೀಘ್ರದಲ್ಲೇ ಬೇಬಿ ಬರ್ತ್​ ಬಗ್ಗೆ ಎರಡನೇ ಟ್ರಯಲ್ ಆರಂಭಿಸಲಿದೆ.​

    MORE
    GALLERIES

  • 38

    Baby Berth: ರೈಲ್ವೇ ಪ್ರಯಾಣಿಕರಿಗೆ ಗುಡ್​ನ್ಯೂಸ್​! ಭಾರತೀಯ ರೈಲ್ವೆಯಿಂದ ಬೇಬಿ ಬರ್ತ್​ ಯೋಜನೆಯಲ್ಲಿ ಮಹತ್ವದ ಬದಲಾಣೆ

    ಎಲ್ಲಾ ರೈಲುಗಳಲ್ಲಿ ಬೇಬಿ ಬರ್ತ್‌ಗಳಿಗೆ ಸಂಬಂಧಿಸಿದಂತೆ ಬದಲಾವಣೆಗಳನ್ನು ಮಾಡಲಾಗುವುದು. ಮಕ್ಕಳಿಗಾಗಿ ಇರುವ ಈ ವಿಶೇಷ ಬರ್ತ್‌ ಟಿಕೆಟ್​ ಬೆಲೆಯನ್ನು ರೈಲ್ವೆ ಮಂಡಳಿ ಶೀಘ್ರದಲ್ಲೇ ನಿರ್ಧರಿಸುತ್ತದೆ. ವಾಸ್ತವವಾಗಿ, ರೈಲಿನಲ್ಲಿ ಬೇಬಿ ಬರ್ತ್​ ಸೌಲಭ್ಯವನ್ನು ಕಳೆದ ವರ್ಷವೇ ಪ್ರಾಯೋಗಿಕವಾಗಿ ಪ್ರಾರಂಭಿಸಲಾಯಿತು.

    MORE
    GALLERIES

  • 48

    Baby Berth: ರೈಲ್ವೇ ಪ್ರಯಾಣಿಕರಿಗೆ ಗುಡ್​ನ್ಯೂಸ್​! ಭಾರತೀಯ ರೈಲ್ವೆಯಿಂದ ಬೇಬಿ ಬರ್ತ್​ ಯೋಜನೆಯಲ್ಲಿ ಮಹತ್ವದ ಬದಲಾಣೆ

    ಇದರ ಟ್ರಯಲ್​​ ಮೇ 2022ರಲ್ಲಿ ಲಕ್ನೋದಲ್ಲಿ ಪ್ರಾರಂಭವಾಗಿತ್ತು. ಕೆಲವು ದಿನಗಳ ಟ್ರಯಲ್ ನಂತರ, ಅದರ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿತ್ತು. ಆದರೆ ಕೆಲವು ನ್ಯೂನತೆಗಳು ಸಹ ಕಂಡಿದ್ದವು. ಇದರ ನಂತರ, ಬೇಬಿ ಬರ್ತ್​ನಲ್ಲಿ ದೋಷಗಳನ್ನು ತೆಗೆದುಹಾಕುವ ಕೆಲಸವನ್ನು ಮತ್ತೆ ಮಾಡಲಾಯಿತು. ಇದೀಗ ಹೊಸ ಬದಲಾವಣೆಗಳೊಂದಿಗೆ ಬೇಬಿ ಬರ್ತ್ ಎರಡನೇ ಪ್ರಯೋಗಕ್ಕೆ ಸಿದ್ಧವಾಗಿದೆ.

    MORE
    GALLERIES

  • 58

    Baby Berth: ರೈಲ್ವೇ ಪ್ರಯಾಣಿಕರಿಗೆ ಗುಡ್​ನ್ಯೂಸ್​! ಭಾರತೀಯ ರೈಲ್ವೆಯಿಂದ ಬೇಬಿ ಬರ್ತ್​ ಯೋಜನೆಯಲ್ಲಿ ಮಹತ್ವದ ಬದಲಾಣೆ

    ಬೇಬಿ ಬರ್ತ್ ಮೊದಲಿಗಿಂತ ಹೆಚ್ಚು ಆರಾಮದಾಯಕವಾಗಿರುತ್ತದೆ ಎಂಬ ಪರಿಕಲ್ಪನೆಯನ್ನು ಅಭಿವೃದ್ಧಿಪಡಿಸಿದ ನಿತಿನ್ ದೇವ್ರೆ, ರೈಲು ಪ್ರಯಾಣದ ಸಮಯದಲ್ಲಿ, ತಾಯಿ-ಮಗುವಿನ ಬರ್ತ್‌ನಲ್ಲಿ ಸ್ಥಳಾವಕಾಶ ಕಡಿಮೆ ಇರುವುದರಿಂದ ಸಮಸ್ಯೆಯಾಗಿತ್ತು ಎಂದು ಹೇಳಿದರು. ಈ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡು ಬೇಬಿ ಬರ್ತ್​ ಸಿದ್ಧಪಡಿಸಲಾಗಿದೆ.

    MORE
    GALLERIES

  • 68

    Baby Berth: ರೈಲ್ವೇ ಪ್ರಯಾಣಿಕರಿಗೆ ಗುಡ್​ನ್ಯೂಸ್​! ಭಾರತೀಯ ರೈಲ್ವೆಯಿಂದ ಬೇಬಿ ಬರ್ತ್​ ಯೋಜನೆಯಲ್ಲಿ ಮಹತ್ವದ ಬದಲಾಣೆ

    ಮಕ್ಕಳನ್ನು ಗಮನದಲ್ಲಿಟ್ಟುಕೊಂಡು ಮಾಡಿದ ಈ ಹೊಸ ವಿನ್ಯಾಸ ಮೊದಲಿಗಿಂತ ಹೆಚ್ಚು ಆರಾಮದಾಯಕ ಮತ್ತು ಸುರಕ್ಷಿತವಾಗಿದೆ. ಹಿಂದಿನ ಬೇಬಿ ಬರ್ತ್‌ಗಳು ಸಾಮಾನ್ಯ ಆಸನಗಳಂತೆ ತೆರೆದಿದ್ದವು, ಮೇಲಿನ ಬರ್ತ್​ನಲ್ಲಿಟ್ಟ ಲಗೇಜ್​ಗಳು ಮಗುವಿನ ಮೇಲೆ ಬೀದ್ದು ಗಾಯವಾಗುವ ಅಪಾಯವನ್ನುಂಟು ಮಾಡುವ ಸಾಧ್ಯತೆ ಇತ್ತು. ಆದರೆ ಈಗ ಅದು ಮೇಲಿನಿಂದ ಕವರ್ ಮಾಡಲಾಗಿದೆ.

    MORE
    GALLERIES

  • 78

    Baby Berth: ರೈಲ್ವೇ ಪ್ರಯಾಣಿಕರಿಗೆ ಗುಡ್​ನ್ಯೂಸ್​! ಭಾರತೀಯ ರೈಲ್ವೆಯಿಂದ ಬೇಬಿ ಬರ್ತ್​ ಯೋಜನೆಯಲ್ಲಿ ಮಹತ್ವದ ಬದಲಾಣೆ

    ಇದರೊಂದಿಗೆ, ತಾಯಿ ಮತ್ತು ಹಾಲುಣಿಸುವಿಕೆಗೆ ಯಾವುದೇ ಅಪಾಯವಿಲ್ಲ. ಇದಲ್ಲದೆ ಸಣ್ಣ ಮಕ್ಕಳನ್ನು ಗಮನದಲ್ಲಿಟ್ಟುಕೊಂಡು ಕಾರ್ಟೂನ್‌ಗಳನ್ನು ಪರದೆಯ ಮೇಲೆ ಮುದ್ರಿಸಲಾಗುತ್ತದೆ. ಪ್ರತಿ ಕೋಚ್‌ನಲ್ಲಿ ಪ್ರತಿ ಕೋಚ್​ನಲ್ಲಿ ಈ ಹೊಸ ಬೇಬಿ ಬರ್ತ್ ಅನ್ನು ಸ್ಥಾಪಿಸುವ ಅಗತ್ಯವಿಲ್ಲ. ರೈಲ್ವೆಯು ಪ್ರಯಾಣಿಸುವ ಸಮಯದಲ್ಲಿ ಟಿಕೆಟ್ ಬುಕ್​ ಮಾಡಿದ ನಂತರ ಈ ಬೇಬಿ ಬರ್ತ್​ಅನ್ನು ಸಿದ್ಧಪಡಿಸಲಿದೆ.

    MORE
    GALLERIES

  • 88

    Baby Berth: ರೈಲ್ವೇ ಪ್ರಯಾಣಿಕರಿಗೆ ಗುಡ್​ನ್ಯೂಸ್​! ಭಾರತೀಯ ರೈಲ್ವೆಯಿಂದ ಬೇಬಿ ಬರ್ತ್​ ಯೋಜನೆಯಲ್ಲಿ ಮಹತ್ವದ ಬದಲಾಣೆ

    ಪ್ರಯಾಣಿಕರು ಟಿಕೆಟ್ ಬುಕ್​ ಮಾಡುವ ಸಂದರ್ಭದಲ್ಲಿ ಬೇಬಿ ಬರ್ತ್​ ಇನ್​ಸ್ಟಾಲ್ ಮಾಡಲು ಟಿಟಿಇ ಅಥವಾ ರೈಲ್ವೆ ಸಿಬ್ಬಂದಿಯನ್ನು ಸಂಪರ್ಕಿಸಬಹುದು. ಬೇಬಿ ಬರ್ತ್ ಅನ್ನು ಹುಕ್​ನ ಸಹಾಯದಿಂದ ಸಾಮಾನ್ಯ ಬರ್ತ್​​ಗೆ ಜೋಡಿಸಬಹುದು.

    MORE
    GALLERIES