ಆದಾಯದ ಒಂದು ಭಾಗವನ್ನು ಹೂಡಿಕೆ ಮಾಡಿ: ಸಾಮಾನ್ಯವಾಗಿ ಹಣಕಾಸಿನ ಕುರಿತು ಸಲಹೆ ನೀಡುವವರು ತಮ್ಮ ಗಳಿಕೆಗಳ ಒಂದು ಭಾಗವನ್ನು ಸೇವಿಂಗ್ ಮಾಡಲು ಇಲ್ಲವೇ ಹೂಡಿಕೆ ಮಾಡಲು ಸಲಹೆ ನೀಡುತ್ತಾರೆ. ಆದರೆ ಸೇಥಿಯವರು ಸಂಪತ್ತಿನಲ್ಲಿ 10% ಉಳಿಸಿ ಹಾಗೂ 20% ಹೂಡಿಕೆ ಮಾಡಿ ಎಂದಾಗಿದೆ. ನಿಮ್ಮ ಯೋಜನೆ ಹೇಗಿದೆ ಎಂಬುದನ್ನು ಆಧರಿಸಿ ಹೂಡಿಕೆಯನ್ನು ಯೋಜಿಸಬಹುದು ಎಂದು ಸೇಥಿ ಸಲಹೆ ನೀಡುತ್ತಾರೆ.
ನಾಲ್ಕು ಗಂಟೆಗಳಿಗಿಂತ ಹೆಚ್ಚಿನ ವಿಮಾನ ಪ್ರಯಾಣಕ್ಕಾಗಿ ಸೇಥಿ ಯಾವಾಗಲೂ ಬ್ಯುಸಿನೆಸ್ ಕ್ಲಾಸ್ ಅನ್ನೇ ಬುಕ್ ಮಾಡುತ್ತಾರೆ. ಈ ನಿಯಮ ನಿರ್ಬಂಧಿತವಾಗಿಲ್ಲ ಬದಲಿಗೆ ಸಬಲೀಕರಣವಾಗಿದೆ ಎಂದು ಸೇಥಿ ಸಂದರ್ಶನದಲ್ಲಿ ತಿಳಿಸುತ್ತಾರೆ. ನೀವು ಜೀವನದಲ್ಲಿ ಸಾಧಿಸಬಹುದು ಎಂದು ನಿಮಗನ್ನಿಸುವ ಅಂಶವೇನಾದರೂ ಇದ್ದರೆ ಅದನ್ನು ಪಡೆಯುವಷ್ಟು ಆರ್ಥಿಕತೆ ನಿಮ್ಮಲ್ಲಿದೆ ಎಂಬುದನ್ನು ಅರ್ಥಮಾಡಿಕೊಳ್ಳಿ ಎಂದು ಸೇಥಿ ತಿಳಿಸುತ್ತಾರೆ.