ಪೆಟ್ರೋಲ್ ಬೆಲೆ ಸಾಕಷ್ಟು ಏರಿಕೆಯಾಗಿದ್ದು, ಕೆಲ ದಿನಗಳ ಹಿಂದೆ ದರ ಇಳಿಕೆಯಾಗಿದ್ದರೂ, ಸಾಮಾನ್ಯ ಹಾಗೂ ಮಧ್ಯಮ ವರ್ಗದ ಜನರಿಗೆ ಪೆಟ್ರೋಲ್ ಖರೀದಿಸುವುದೇ ಹೊರೆಯಾಗಿದೆ. ಆದರೆ ಪೆಟ್ರೋಲ್ ಉಚಿತವಾದರೆ ಯಾರಿಗೆ ತಾನೇ ಆಸೆ ಆಗೋದಿಲ್ಲಾ? ಹೇಳಿ. ಆಕ್ಸಿಸ್ ಬ್ಯಾಂಕ್ ಉಚಿತ ಪೆಟ್ರೋಲ್ ನೀಡುತ್ತಿದೆ. ಆಕ್ಸಿಸ್ ಬ್ಯಾಂಕ್ ಇಂಡಿಯನ್ ಆಯಿಲ್ ಸಹಭಾಗಿತ್ವದಲ್ಲಿ ಸಹ-ಬ್ರಾಂಡೆಡ್ ಕ್ರೆಡಿಟ್ ಕಾರ್ಡ್ ಅನ್ನು ರಚಿಸಿದೆ. (ಸಾಂಕೇತಿಕ ಚಿತ್ರ)
ಆಕ್ಸಿಸ್ ಬ್ಯಾಂಕ್ ಇಂಡಿಯನ್ ಆಯಿಲ್ ಕ್ರೆಡಿಟ್ ಕಾರ್ಡ್ನೊಂದಿಗೆ ನೀವು ಅನೇಕ ಕೊಡುಗೆಗಳನ್ನು ಪಡೆಯಬಹುದು. ಈ ಕ್ರೆಡಿಟ್ ಕಾರ್ಡ್ ಪಡೆಯಲು ರೂ.500 ಸೇರುವ ಶುಲ್ಕವನ್ನು ಪಾವತಿಸಬೇಕು. ಎರಡನೇ ವರ್ಷದಿಂದ ವಾರ್ಷಿಕ ರೂ.500 ಶುಲ್ಕ ಪಾವತಿಸಬೇಕು. ವಾರ್ಷಿಕವಾಗಿ ರೂ.50,000ಕ್ಕಿಂತ ಹೆಚ್ಚು ಖರ್ಚು ಮಾಡಿದರೆ ವಾರ್ಷಿಕ ಶುಲ್ಕವನ್ನು ಮನ್ನಾ ಮಾಡಲಾಗುತ್ತದೆ. (ಚಿತ್ರ: ಆಕ್ಸಿಸ್ ಬ್ಯಾಂಕ್)
ಇಂಡಿಯನ್ ಆಯಿಲ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ನೊಂದಿಗೆ ಪಾವತಿಗಳನ್ನು ಮಾಡಿದರೆ ಮತ್ತು ಇಎಂಐ ಆಗಿ ಪರಿವರ್ತಿಸಿದರೆ, ವಾರ್ಷಿಕವಾಗಿ ಶೇಕಡಾ 49.36 ಬಡ್ಡಿಯನ್ನು ಪಾವತಿಸಲಾಗುತ್ತದೆ. ಹಾಗಾಗಿ ಇಎಂಐಗೆ ಪರಿವರ್ತಿಸದಿರುವುದು ಉತ್ತಮ. ಈ ಕ್ರೆಡಿಟ್ ಕಾರ್ಡ್ನೊಂದಿಗೆ ನೀವು ವರ್ಷಕ್ಕೆ 53 ಲೀಟರ್ ಇಂಧನವನ್ನು ಉಚಿತವಾಗಿ ಪಡೆಯಬಹುದು ಎಂದು ಆಕ್ಸಿಸ್ ಬ್ಯಾಂಕ್ ಹೇಳಿದೆ. 53 ಲೀಟರ್ ಪೆಟ್ರೋಲ್ ಹೇಗೆ ಉಚಿತವಾಗಿ ದೊರೆಯುತ್ತದೆ ಎಂಬುದನ್ನೂ ವೆಬ್ ಸೈಟ್ ವಿವರಿಸುತ್ತದೆ. (ಸಾಂಕೇತಿಕ ಚಿತ್ರ)
ನೀವು ಇಂಡಿಯನ್ ಆಯಿಲ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ತೆಗೆದುಕೊಳ್ಳಲು ಬಯಸಿದರೆ ನಿಮ್ಮ ಹತ್ತಿರದ ಆಕ್ಸಿಸ್ ಬ್ಯಾಂಕ್ ಶಾಖೆಯನ್ನು ಸಂಪರ್ಕಿಸಬೇಕು. ಅಥವಾ ನೀವು ಆಕ್ಸಿಸ್ ಬ್ಯಾಂಕ್ ವೆಬ್ಸೈಟ್ನಲ್ಲಿ ಅರ್ಜಿ ಸಲ್ಲಿಸಬಹುದು. 18 ರಿಂದ 70 ವರ್ಷದೊಳಗಿನ ಯಾರಾದರೂ ಈ ಕ್ರೆಡಿಟ್ ಕಾರ್ಡ್ ಅನ್ನು ಪಡೆಯಬಹುದು. 15 ವರ್ಷ ಮೇಲ್ಪಟ್ಟವರಿಗೆ ಆಡ್ ಆನ್ ಕ್ರೆಡಿಟ್ ಕಾರ್ಡ್ ಲಭ್ಯವಿದೆ. ಈ ಕ್ರೆಡಿಟ್ ಕಾರ್ಡ್ ಪಡೆಯಲು ಪ್ಯಾನ್ ಕಾರ್ಡ್, ಫಾರ್ಮ್ 60, ವಿಳಾಸ ಪುರಾವೆ, ಗುರುತಿನ ಪುರಾವೆ ಕಡ್ಡಾಯವಾಗಿದೆ. (ಸಾಂಕೇತಿಕ ಚಿತ್ರ)
ಇದಷ್ಟೇ ಅಲ್ಲ, ಗ್ರಾಹಕರ ಅಗತ್ಯಗಳಿಗೆ ಅನುಗುಣವಾಗಿ ಆಕ್ಸಿಸ್ ಬ್ಯಾಂಕ್ನಿಂದ ವಿವಿಧ ಸಹ-ಬ್ರಾಂಡೆಡ್ ಕ್ರೆಡಿಟ್ ಕಾರ್ಡ್ಗಳಿವೆ. ಫ್ಲಿಪ್ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ನೊಂದಿಗೆ ಆನ್ಲೈನ್ ಶಾಪಿಂಗ್ನಲ್ಲಿ ಕ್ಯಾಶ್ಬ್ಯಾಕ್, ಸ್ಪೈಸ್ಜೆಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್, ವಿಸ್ತಾರಾ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ನೊಂದಿಗೆ ವಿಮಾನ ಟಿಕೆಟ್ಗಳ ಮೇಲೆ ಕೊಡುಗೆಗಳು ಇವೆ. (ಚಿತ್ರ: ಆಕ್ಸಿಸ್ ಬ್ಯಾಂಕ್)