India's Unicorn Club: ಭಾರತದ ಹವಾ ಬಲುಜೋರು! ಇದೀಗ ದೇಶದಲ್ಲಿ 100 ಯುನಿಕಾರ್ನ್!
ಸ್ಟಾರ್ಟ್ಅಪ್ ಎಂಬ ಹೆಸರನ್ನು ಕೇಳಿದ್ದೇವೆ. ಆದರೆ ಇತ್ತೀಚಿಗೆ ಪದೇ ಪದೇ ಯುನಿಕಾರ್ನ್ ಎಂಬ ಪದ ಮುನ್ನೆಲೆಗೆ ಬರುತ್ತಿದೆ. ಹಾಗಾದರೆ ಯುನಿಕಾರ್ನ್ ಎಂದರೇನು? ಈ ಕಂಪನಿಗಳ ಲಕ್ಷಣಗಳೇನು? ಭಾರತದಲ್ಲಿ ಇಂತಹ ಕಂಪನಿಗಳು ಎಷ್ಟಿವೆ? ಇಲ್ಲಿದೆ ಮಾಹಿತಿ.
ಭಾರತದಲ್ಲಿ ಇದೀಗ ಸ್ಟಾರ್ಟ್ಅಪ್ ಯುಗ! ಹೊಸ ಹೊಸ ಆಲೋಚನೆಗಳಿಗೆ ಕಂಪನಿಗಳ ರೂಪು ನೀಡಿ ಲಾಭದಾಯಕ ವ್ಯವಹಾರ ನಡೆಸಲಾಗುತ್ತಿದೆ. ಇಂತಹ ಸ್ಟಾರ್ಟ್ಅಪ್ಗಳಲ್ಲಿ ಅತ್ಯಂತ ಯಶಸ್ವಿಯಾಗಿ ಯುನಿಕಾರ್ನ್ ಪಟ್ಟವನ್ನು ಸಹ ಹಲವರು ಪಡೆದುಕೊಳ್ಳುತ್ತಿವೆ.
2/ 8
2022 ರ ಮೊದಲ ನಾಲ್ಕು ತಿಂಗಳಲ್ಲಿ 14 ಯುನಿಕಾರ್ನ್ಗಳ ಭಾರತ ಸಾಕ್ಷಿಯಾಗಿದೆ. ದೇಶದ 100 ನೇ ಯುನಿಕಾರ್ನ್ ಆಗಿ ನಿಯೋಬ್ಯಾಂಕ್ ರೂಪುಗೊಂಡಿದೆ.
3/ 8
ಈ ಸಾಧನೆಯೊಂದಿಗೆ ಭಾರತವು ಇಂದು ಜಾಗತಿಕವಾಗಿ ಪ್ರತಿ 10 ಯುನಿಕಾರ್ನ್ಗಳಲ್ಲಿ 1 ಯುನಿಕಾರ್ನ್ಗೆ ಜನ್ಮ ನೀಡಿದ ಹೆಗ್ಗಳಿಕೆಗೆ ಪಾತ್ರವಾಗಿದೆ.
4/ 8
'ಯುನಿಕಾರ್ನ್' ಎಂಬ ಹೆಸರನ್ನು $1 ಬಿಲಿಯನ್ಗಿಂತಲೂ ಹೆಚ್ಚು ಮೌಲ್ಯವನ್ನು ಗಳಿಸುವ ಅಪರೂಪದ ಸ್ಟಾರ್ಟ್ಅಪ್ಗಳಿಗೆ ಹೇಳಲಾಗುತ್ತದೆ.
5/ 8
ವಿಶ್ವದ 3ನೇ ಅತಿದೊಡ್ಡ ಭಾರತೀಯ ಸ್ಟಾರ್ಟ್ಅಪ್ ಪರಿಸರ ವ್ಯವಸ್ಥೆಯಾದ ಭಾರತವು ಈಗ 100 ಯುನಿಕಾರ್ನ್ಗಳಿಗೆ ನೆಲೆ ನೀಡಿದೆ. ಇವುಗಳಿಂದ ಒಟ್ಟು $332.7 ಶತಕೋಟಿ ಮೌಲ್ಯವನ್ನು ಹೊಂದಿದೆ.
6/ 8
ಭಾರತದಲ್ಲಿ ಯುನಿಕಾರ್ನ್ ರೂಪುಗೊಳ್ಳಲು ಸ್ಟಾರ್ಟಪ್ ಒಂದು ತೆಗೆದುಕೊಳ್ಳುವ ಕನಿಷ್ಠ ಮತ್ತು ಗರಿಷ್ಠ ಸಮಯ ಕ್ರಮವಾಗಿ 6 ತಿಂಗಳು ಮತ್ತು 26 ವರ್ಷಗಳು ಎನ್ನಲಾಗಿದೆ.
7/ 8
ಭಾರತದ ಯುವ ಜನರ ಹೊಸ ಹೊಸ ಐಡಿಯಾಗಳಿಂದ ಹೊಸ ಹೊಸ ಸ್ಟಾರ್ಟ್ಅಪ್ಗಳು ರೂಪುಗೊಳ್ಳುತ್ತಿವೆ. ಇದು ಭಾರತವನ್ನು ವಿಶ್ವದ ಸ್ಟಾರ್ಟ್ಅಪ್ ಹಬ್ ಆಗಿ ರೂಪಿಸಿವೆ.
8/ 8
ಸದ್ಯ ಭಾರತದಲ್ಲಿ ಹೇಳುವುದಾದರೆ ನಮ್ಮ ಕರ್ನಾಟಕದ ಬೆಂಗಳೂರು ಸ್ಟಾರ್ಟ್ಅಪ್ ಹಬ್ ಎಂದು ಖ್ಯಾತಿ ಪಡೆದಿದೆ.