ಸೌರ ಫಲಕಗಳಿಂದ ಉತ್ಪಾದಿಸುವ ವಿದ್ಯುತ್ ಅನ್ನು ಪ್ರಾಥಮಿಕವಾಗಿ ಕೃಷಿ ಉದ್ದೇಶಗಳಿಗಾಗಿ ಬಳಸಬೇಕು. ನಂತರ ನೀವು ಹೆಚ್ಚುವರಿ ವಿದ್ಯುತ್ ಅನ್ನು ವಿದ್ಯುತ್ ವಿತರಣಾ ಕಂಪನಿಗೆ ಮಾರಾಟ ಮಾಡಬಹುದು. ಈ ರೀತಿಯಲ್ಲಿ ನೀವು 25 ವರ್ಷಗಳವರೆಗೆ ಪ್ರಯೋಜನವನ್ನು ಪಡೆಯಬಹುದು. ಈ ಮೂಲಕ ಪ್ರತಿ ಎಕರೆಗೆ ರೈತರಿಗೆ ವರ್ಷಕ್ಕೆ ರೂ. 60 ಸಾವಿರದಿಂದ ರೂ. ಒಂದು ಲಕ್ಷದವರೆಗೆ ಬರುತ್ತದೆ.