ಇಂದಿನ ದಿನಗಳಲ್ಲಿ ಪ್ರತಿಯೊಬ್ಬರ ಗುರಿ ಹಣ ಸಂಪಾದನೆ ಮಾಡುವುದೇ ಆಗಿದೆ. ಅದನ್ನು ಹೇಗೆ ಗಳಿಸುತ್ತಾರೆ ಎಂಬುದು ಮುಖ್ಯವಾಗುವುದಿಲ್ಲ. ಕೆಲವರು ತಮ್ಮ ಕೆಲಸದ ಜೊತೆಗೆ ಸೈಡ್ ಬ್ಯುಸಿನೆಸ್ ಮಾಡುತ್ತಿರುತ್ತಾರೆ. ಇನ್ನೂ ಕೆಲವರು ಬಿಡುವಿನ ವೇಳೆಯಲ್ಲಿ ಮನೆಯಲ್ಲಿಯೇ ಟ್ಯೂಷನ್ ಮಾಡುವುದು, ಸೂಪರ್ ಮಾರ್ಕೆಟ್ ನಡೆಸುವುದು ಮುಂತಾದ ಕೆಲಸಗಳನ್ನು ಮಾಡುವ ಮೂಲಕ ಹಣ ಸಂಪಾದನೆ ಮಾಡುತ್ತಾರೆ.
ಉತ್ತರಾಖಂಡದ ಹರಿದ್ವಾರದ ಶಿವಾಲಿಕ್ ನಗರ ಚೌಕ್ ಬಳಿಯ ಟೀ ಸ್ಟಾಲ್‌ನಲ್ಲಿ ಜನರು ಬೆಳಿಗ್ಗೆಯಿಂದ ಸಂಜೆಯವರೆಗೆ ಚಹಾ ಕುಡಿಯುವುದನ್ನು ಕಾಣಬಹುದು. ಈ ಟೀ ಸ್ಟಾಲ್ ಅನ್ನು ಯುವತಿಯೊಬ್ಬಳು ತನ್ನ ಪತಿಯೊಂದಿಗೆ ನಡೆಸುತ್ತಿದ್ದಾಳೆ. ಶಿವಾಲಿಕ್ ನಗರದ ಚಿನ್ಮಯ ಪದವಿ ಕಾಲೇಜು ಎದುರಿನ ಖಾಲಿ ಜಾಗದಲ್ಲಿ ನಿಧಿ ಎಂಬ ಯುವತಿ ಮತ್ತು ಆಕೆಯ ಪತಿ ರೂಪೇಶ್ ಟೀ ಅಂಗಡಿ ನಡೆಸುತ್ತಿದ್ದಾರೆ. ಅವರ ಶಾಪ್ನಲ್ಲಿ ನಾಲ್ಕು ವಿಧದ ಚಹಾ ಸಿಗುತ್ತದೆ.
ಇದಕ್ಕೂ ಮೊದಲು ನಿಧಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಮನೆಯಲ್ಲಿ ತುರ್ತು ಕೆಲಸದ ಕಾರಣ 15 ದಿನ ರಜೆ ಕೇಳಿದಾಗ ಕಂಪನಿ ನಿರಾಕರಿಸಿತು. ಇದಾದ ನಂತರ ನಿಧಿ ಕಂಪನಿಯನ್ನು ತೊರೆದು ತನ್ನದೇ ಆದ ಚಹಾ ವ್ಯಾಪಾರವನ್ನು ಪ್ರಾರಂಭಿಸಿದ್ದಾರೆ. ಈ ಚಹಾ ಅಂಗಡಿ ಫೇಮಸ್ ಆಗಿದೆ. ತಮ್ಮ ಚಹಾದ ರುಚಿ ಹರಿದ್ವಾರದಲ್ಲಿ ಲಭ್ಯವಿರುವ ಇತರ ಚಹಾಗಳಿಗಿಂತ ಭಿನ್ನವಾಗಿದೆ ಎಂದು ನಿಧಿ ಹೇಳುತ್ತಾರೆ. ಕುಲ್ಹಾದ್ ಟೀ, ಏಲಕ್ಕಿ ಟೀ, ಚಾಕೊಲೇಟ್ ಟೀ ಮತ್ತು ಮಸಾಲಾ ಟೀ ಸೇರಿದಂತೆ ನಾಲ್ಕು ವಿಧದ ಟೀಗಳನ್ನು ನಿಧಿ ತಯಾರಿಸುತ್ತಿದ್ದಾರೆ.