ರೂಲ್ಸ್ ಇರುವುದೇ ಮುರಿಯೋಕೆ ಅಂತಾರೆ ಕೆಲವರು. ಇನ್ನೂ ಕೆಲವರು ಟ್ರಾಫಿಕ್ ನಿಯಮಗಳನ್ನು ಮುರಿಯೋದ್ರಲ್ಲಿ ಎಕ್ಸ್ಪರ್ಟ್ಗಳು. ಹೆಲ್ಮೆಟ್ ಹಾಕದೇ, ರೆಡ್ ಸಿಗ್ನಲ್, ಒನ್ವೇನಲ್ಲಿ ನುಗ್ಗಿ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡುತ್ತಾರೆ.
2/ 8
ಈ ಹಿಂದೆ ಟ್ರಾಫಿಕ್ ನಿಯಮ ಬ್ರೇಕ್ ಮಾಡಿದಾಗ ಸಾಲಿನಲ್ಲಿ ನಿಂತು ದಂಡವನ್ನು ಕಟ್ಟಿಕೊಳ್ಳಬೇಕಾಗಿತ್ತು. ಇದು ಬಹಳ ತಲೆ ನೋವಿನ ಕೆಲಸವಾಗಿತ್ತು. ಆದರೆ ಈಗ ಎಲ್ಲವೂ ಆನ್ಲೈನ್ ಆಗಿದೆ.
3/ 8
ಈ ಡಿಜಿಟಲ್ ಯುಗದಲ್ಲಿ ಟ್ರಾಫಿಕ್ ನಿಯಮ ಬ್ರೇಕ್ ಮಾಡಿದ ದಂಡವನ್ನು ನಾವು ಆನ್ಲೈನ್ ಮೂಲಕವೇ ಪಾವತಿ ಮಾಡಬಹುದಾಗಿದೆ. ನಾವು ದಂಡ ಪಾವತಿ ಮಾಡಲು ಸರತಿ ಸಾಲಿನಲ್ಲಿ ನಿಲ್ಲಬೇಕಾಗಿಲ್ಲ.
4/ 8
ಸಾಮಾನ್ಯವಾಗಿ ನಮಗೆ ಸಾರಿಗೆ ನಿಯಮ ಉಲ್ಲಂಘನೆ ಮಾಡಿದಾಗ ಹಾಕಲಾಗುವ ದಂಡ ಚಲನ್ ನಮಗೆ ಆನ್ಲೈನ್ ಮೂಲಕವೂ ಲಭ್ಯವಾಗಲಿದೆ. ಈ ಚಲನ್ ಬಳಸಿಕೊಂಡು ನಾವು ಆನ್ಲೈನ್ ಮೂಲಕವೇ ಪಾವತಿ ಮಾಡಬಹುದಾಗಿದೆ.
5/ 8
ಇಲೆಕ್ಟ್ರಾನಿಕ್ ಚಲನ್ ಸಿಸ್ಟಮ್ ಬಳಸಿಕೊಂಡು ಈ ದಾಖಲೆಯನ್ನು ಜನರೇಟ್ ಮಾಡಲಾಗಿರುತ್ತದೆ. ನಾಗರಿಕರಿಗೆ ದಂಡ ಪಾವತಿ ವಿಚಾರದಲ್ಲಿಯೂ ಪಾರದರ್ಶಕತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಆನ್ಲೈನ್ ದಂಡ ಪಾವತಿ ವ್ಯವಸ್ಥೆಯನ್ನು ಆರಂಭ ಮಾಡಲಾಗುತ್ತದೆ.
6/ 8
ಮೊದಲು ನೀವು https://echallan.parivahan.gov.in/index/accused-challan ಗೆ ಭೇಟಿ ನೀಡ ಬೇಕು. ನಂತನ ನಿಮ್ಮ ಚಲನ್ ಸಂಖ್ಯೆಯನ್ನು ಇಲ್ಲಿ ನಮೂದಿಸಬೇಕು.
7/ 8
ಬಳಿಕ ವಾಹನದ ಸಂಖ್ಯೆಯನ್ನು ಕೂಡಾ ನಮೂದಿಸ ಬೇಕು. ನಂತರ ಡಿಎಲ್ ನಂಬರ್, ಕ್ಯಾಪ್ಚಾ ಕೋಡ್ ಉಲ್ಲೇಖ ಮಾಡಿ. ನಂತರ Get Details ಮೇಲೆ ಕ್ಲಿಕ್ ಮಾಡಬೇಕು.
8/ 8
ಟ್ರಾಫಿಕ್ ನಿಯಮ ಉಲ್ಲಂಘನೆಯ ಮಾಹಿತಿ, ಚಲನ್ ಪರಿಶೀಲನೆ ಮಾಡಿ.ಕೊನೆಯದಾಗಿ ದಂಡ ಪಾವತಿಸಲು proceed ಮೇಲೆ ಕ್ಲಿಕ್ ಮಾಡಿ ದಂಡ ಪಾವತಿಸಿ. ಮತ್ತೆ ದಂಡ ಕಟ್ಟೋದು ಸುಲಭ ಅಂತ ಮತ್ತೆ ಮತ್ತೆ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಬೇಡಿ.