ಹೊಸ ಮೊಬೈಲ್ ಸಂಖ್ಯೆ ತೆಗೆದುಕೊಳ್ಳುವವರು ಫ್ಯಾನ್ಸಿ ಮೊಬೈಲ್ ಸಂಖ್ಯೆಯನ್ನು ಹುಡುಕುತ್ತಿರುತ್ತಾರೆ. ಕೊನೆಯಲ್ಲಿ 777, 000, 123 ... ಈ ರೀತಿಯ ಫ್ಯಾನ್ಸಿ ಸಂಖ್ಯೆಗಳನ್ನು ಪಡೆಯಲು ಪ್ರಯತ್ನ ನಡೆಸುವ ಬೇಕಾದಷ್ಟು ಜನ ನಮ್ಮಲ್ಲಿದ್ದಾರೆ. ಸುಲಭವಾಗಿ ನೆನಪಿಡಲು, ವಿಐಪಿ ನಂಬರ್ ಎಂದು ಪರಿಗಣಿಸಿ ಇಂತಹ ಫ್ಯಾನ್ಸಿ ಸಂಖ್ಯೆಗಳನ್ನುಪಡೆದುಕೊಳ್ಳುವವರೂ ಸಹ ಇದ್ದಾರೆ. (ಸಾಂಕೇತಿಕ ಚಿತ್ರ)
ಕೆಲವು ಕಂಪನಿಗಳು ಪೋಸ್ಟ್ ಪೇಯ್ಡ್ ಗ್ರಾಹಕರಿಗೆ ಫ್ಯಾನ್ಸಿ ನಂಬರ್ಗಳನ್ನು ನೀಡುತ್ತವೆ. ಸಾರ್ವಜನಿಕ ವಲಯದ ಟೆಲಿಕಾಂ ಕಂಪನಿಯಾದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ಫ್ಯಾನ್ಸಿ ಸಂಖ್ಯೆಗಳನ್ನು ಹರಾಜು ಹಾಕುತ್ತದೆ. ಈ ಸಂಖ್ಯೆಗಳನ್ನು ಪ್ರೀಮಿಯಂ ಸಂಖ್ಯೆಗಳು, ವಿಐಪಿ ಸಂಖ್ಯೆಗಳು ಮತ್ತು ವ್ಯಾನಿಟಿ ಸಂಖ್ಯೆಗಳು ಎಂದು ಕರೆಯಲಾಗುತ್ತದೆ. ಬಿಎಸ್ಎನ್ಎಲ್ ಸಿಮ್ ಖರೀದಿಸಲು ಬಯಸುವವರು ಫ್ಯಾನ್ಸಿ ನಂಬರ್ ತೆಗೆದುಕೊಳ್ಳಬಹುದು. (ಸಾಂಕೇತಿಕ ಚಿತ್ರ)