2000 ರೂಪಾಯಿ ನೋಟುಗಳ ಬಗ್ಗೆ ರಿಸರ್ವ್ ಬ್ಯಾಂಕ್ ಶುಕ್ರವಾರ ಮಹತ್ವದ ನಿರ್ಧಾರ ಕೈಗೊಂಡಿದ್ದು, ಚಲಾವಣೆಯಿಂದ ಹಿಂತೆಗೆದುಕೊಳ್ಳುವುದಾಗಿ ಘೋಷಿಸಿದೆ. ಆದಾಗ್ಯೂ, 2000 ರೂಪಾಯಿ ನೋಟು ಚಲಾವಣೆಯಲ್ಲಿ ಮುಂದುವರಿಯುತ್ತದೆ. ಇತರ ಮುಖಬೆಲೆಗಳೊಂದಿಗೆ ಸುಲಭವಾಗಿ ವಿನಿಮಯ ಮಾಡಿಕೊಳ್ಳಬಹುದು ಎಂದು ರಿಸರ್ವ್ ಬ್ಯಾಂಕ್ ಸ್ಪಷ್ಟಪಡಿಸಿದೆ. ಇಂದಿನಿಂದ ಈ 2 ಸಾವಿರ ನೋಟುಗಳನ್ನು ಬ್ಯಾಂಕ್‌ಗಳಲ್ಲಿ ಬದಲಾವಣೆ ಮಾಡಿಕೊಳ್ಳಬಹುದು.
ನೋಟುಗಳ ವಿನಿಮಯದ ಮಿತಿ- 20 ಸಾವಿರ ರೂಪಾಯಿಗಿಂತ ಹೆಚ್ಚಿನ 2000 ರೂಪಾಯಿ ನೋಟುಗಳನ್ನು ಒಂದೇ ಬಾರಿಗೆ ಬದಲಾಯಿಸುವಂತಿಲ್ಲ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 'ಕ್ಲೀನ್ ನೋಟ್ ಪಾಲಿಸಿ' ಅಡಿಯಲ್ಲಿ 2,000 ರೂ ನೋಟನ್ನು ಅಮಾನ್ಯಗೊಳಿಸಲು ನಿರ್ಧರಿಸಿದೆ. ಈ ನೀತಿಯ ಅಡಿಯಲ್ಲಿ, ಆರ್‌ಬಿಐ ಕ್ರಮೇಣ 2000 ನೋಟನ್ನು ಮಾರುಕಟ್ಟೆಯಿಂದ ಹಿಂಪಡೆಯುತ್ತದೆ. ಸರ್ಕಾರದ ಅಂಕಿಅಂಶಗಳ ಪ್ರಕಾರ, ಪ್ರಸ್ತುತ, 3.62 ಲಕ್ಷ ಕೋಟಿ ಮೌಲ್ಯದ 2,000 ನೋಟುಗಳು ಚಲಾವಣೆಯಲ್ಲಿವೆ. ಆದರೆ ವಹಿವಾಟು ಬಹಳ ಕಡಿಮೆ ನಡೆಯುತ್ತಿದೆ.