ಸ್ವಂತ ಮನೆಯ ಕನಸು ಯಾರಿಗೆ ಇರೋದಿಲ್ಲ ಹೇಳಿ? ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿರುವವರ ಅತಿ ದೊಡ್ಡ ಕನಸೆಂದರೆ ಅದುವೇ ಸ್ವಂತ ಮನೆ ಹೊಂದುವುದು. ಸ್ವಂತ ಮನೆ ಎನ್ನೋದು ಒಂದು ಸ್ಥಿರ ಆಸ್ತಿ ಇದ್ದ ಆಗೆ ಎನ್ನುವುದು ಬಹುತೇಕರ ಅಭಿಪ್ರಾಯ. ಇನ್ನು ಕೆಲವರಿಗೆ ಬಾಡಿಗೆ ಮನೆಯೇ ಬೆಸ್ಟ್. ಅದರಿಂದ ನಾವು ಬೇಗನೆ ಶ್ರೀಮಂತರಾಗಬಹುದು ಎಂದು ತಮ್ಮ ಜೀವಿತಾವಧಿಯ ಆಲ್‌ಮೋಸ್ಟ್ ಜೀವನವನ್ನು ಬಾಡಿಗೆ ಮನೆಯಲ್ಲಿಯೇ ಕಳೆಯುವವರು ಇದ್ದಾರೆ.
ಇದರ ಕುರಿತು ಭಾರತೀಯ ಮೂಲದ ಮಿಲಿಯನೇರ್ ರಮಿತ್ ಸೇಥಿ ಅವರು ಏನ್ ಹೇಳ್ತಿದಾರೆ? “ನೀವು ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದರೆ, ಅದರಿಂದ ಯಾವುದೇ ನಷ್ಟವಿಲ್ಲ. ಬಾಡಿಗೆ ಮನೆಯಲ್ಲಿ ಇರುವುದರಿಂದ ನಾವು ಬಡವರು ಎಂದುಕೊಳ್ಳುವ ಅವಶ್ಯಕತೆಯು ಕೂಡ ಇಲ್ಲ. ಇಂದಿನ ಆಧುನಿಕ ಕಾಲದಲ್ಲಿ ಮನೆಯನ್ನು ಹೊಂದುವುದು ಒಂದು ಗ್ರೇಟ್ ವಿಷಯವಾಗಿದೆ ಎಂದು ಹಲವರು ಅಂದುಕೊಳ್ಳುತ್ತಾರೆ.