Senior Citizen Savings Scheme ಬಗ್ಗೆ ನಿಮಗೆಷ್ಟು ಗೊತ್ತು? ಹಣ ಹೂಡಿಕೆ ಮಾಡುವ ಮೊದಲು ಇದನ್ನು ಓದಿ

ಹಿರಿಯ ನಾಗರಿಕರ ಉಳಿತಾಯ ಯೋಜನೆಯ (SCSS) ಟಾಪ್ 5 ಅನಾನುಕೂಲಗಳು ಇಲ್ಲಿವೆ. SCSS ನಲ್ಲಿ ಹೂಡಿಕೆ ಮಾಡುವುದರಿಂದ ಹಲವಾರು ಪ್ರಯೋಜನಗಳಿದ್ದರೂ, ನೀವು ತಿಳಿದಿರಬೇಕಾದ ಕೆಲವು ಅನಾನುಕೂಲಗಳು ಅಥವಾ ಮಿತಿಗಳ ಬಗ್ಗೆ ಇಲ್ಲಿದೆ ಮಾಹಿತಿ.

First published:

  • 18

    Senior Citizen Savings Scheme ಬಗ್ಗೆ ನಿಮಗೆಷ್ಟು ಗೊತ್ತು? ಹಣ ಹೂಡಿಕೆ ಮಾಡುವ ಮೊದಲು ಇದನ್ನು ಓದಿ

    ಈಗಂತೂ ಯಾವುದರಲ್ಲಿ ಹಣ ಹೂಡಿಕೆ ಮಾಡಬೇಕು ಅಂತ ಎರಡು ಮೂರು ಬಾರಿ ಚೆನ್ನಾಗಿ ಹಣ ಹೂಡಿಕೆ ಮಾಡುವ ಯೋಜನೆಯ ಬಗ್ಗೆ ವಿವರವಾಗಿ ತಿಳಿದುಕೊಂಡು ಮುನ್ನಡೆಯುವುದು ಒಳಿತು. ಏಕೆಂದರೆ ಇತ್ತೀಚೆಗೆ ಅನೇಕ ಯೋಜನೆಗಳನ್ನು ಈ ಬ್ಯಾಂಕ್ ಗಳು ಪರಿಚಯಿಸಿವೆ. ನೀವೇನಾದರೂ ಈ ಸೀನಿಯರ್ ಸಿಟಿಜನ್ ಎಂದರೆ ಹಿರಿಯ ನಾಗರಿಕರ ಉಳಿತಾಯ ಯೋಜನೆಯ (ಎಸ್‌ಸಿಎಸ್ಎಸ್) ಯಲ್ಲಿ ಹಣ ಹೂಡಿಕೆ ಮಾಡಲು ಯೋಚಿಸುತ್ತಿದ್ದರೆ, ಅದಕ್ಕೂ ಮೊದಲು ಈ ಯೋಜನೆಗಿರುವ ಇತಿ-ಮಿತಿಗಳನ್ನು ತಿಳಿದುಕೊಳ್ಳುವುದು ಒಳ್ಳೆಯದು.

    MORE
    GALLERIES

  • 28

    Senior Citizen Savings Scheme ಬಗ್ಗೆ ನಿಮಗೆಷ್ಟು ಗೊತ್ತು? ಹಣ ಹೂಡಿಕೆ ಮಾಡುವ ಮೊದಲು ಇದನ್ನು ಓದಿ

    ಈ ಉಳಿತಾಯ ಯೋಜನೆಯ ಐದು ಅನಾನುಕೂಲಗಳು: ಎಸ್‌ಸಿಎಸ್ಎಸ್ ಬಡ್ಡಿಯ ಮೇಲಿನ ಟಿಡಿಎಸ್: ಎಲ್ಲವೂ ತೆರಿಗೆ ಮುಕ್ತವಾಗಿರುವ ಪಿಪಿಎಫ್ ನಂತಹ ಯೋಜನೆಗಳಿಗಿಂತ ಭಿನ್ನವಾಗಿ, ಎಸ್‌ಸಿಎಸ್ಎಸ್ ಠೇವಣಿಗಳಿಂದ ಗಳಿಸಿದ ಬಡ್ಡಿಯು ಹಣಕಾಸು ವರ್ಷದಲ್ಲಿ 50,000 ರೂಪಾಯಿಗಳ ಮಿತಿಯನ್ನು ಮೀರಿದರೆ ತೆರಿಗೆಗೆ ಒಳಪಡುತ್ತದೆ. ಪೋಸ್ಟ್ ಆಫೀಸ್ ವೆಬ್ಸೈಟ್ ನಲ್ಲಿರುವ ಮಾಹಿತಿಯ ಪ್ರಕಾರ, ಒಂದು ಹಣಕಾಸು ವರ್ಷದಲ್ಲಿ ಎಲ್ಲಾ ಎಸ್‌ಸಿಎಸ್ಎಸ್ ಖಾತೆಗಳಲ್ಲಿನ ಒಟ್ಟು ಬಡ್ಡಿ 50,000 ರೂಪಾಯಿಗಳನ್ನು ಮೀರಿದರೆ ಎಸ್‌ಸಿಎಸ್ಎಸ್ ಬಡ್ಡಿ ಆದಾಯವು ತೆರಿಗೆಗೆ ಒಳಪಡುತ್ತದೆ.

    MORE
    GALLERIES

  • 38

    Senior Citizen Savings Scheme ಬಗ್ಗೆ ನಿಮಗೆಷ್ಟು ಗೊತ್ತು? ಹಣ ಹೂಡಿಕೆ ಮಾಡುವ ಮೊದಲು ಇದನ್ನು ಓದಿ

    ಸ್ಥಿರವಾದ ಬಡ್ಡಿದರ: ಎಸ್‌ಸಿಎಸ್ಎಸ್ ಖಾತೆಯ ಪ್ರಸ್ತುತ ಬಡ್ಡಿದರವು 8.2% ಆಗಿದ್ದು ಹಿರಿಯ ನಾಗರಿಕರಿಗೆ ಹಣವನ್ನು ಹೂಡಿಕೆ ಮಾಡಲು ತುಂಬಾನೇ ಅತ್ಯಾಕರ್ಷಕವಾದ ಯೋಜನೆಯಾಗಿದೆ. ಆದರೆ ಈ ಹಿಂದೆ ಕಡಿಮೆ ಬಡ್ಡಿ ದರದಲ್ಲಿ ಖಾತೆಯನ್ನು ತೆರೆದವರಿಗೆ ಅನಾನುಕೂಲವಾಗಿದೆ. ಪ್ರಸ್ತುತ ಹೆಚ್ಚಿನ ಬಡ್ಡಿ ದರವನ್ನು ಪಡೆಯಲು, ಅವರು ಹಳೆಯ ಎಸ್‌ಸಿಎಸ್ಎಸ್ ಖಾತೆಯನ್ನು ಮುಚ್ಚಿ ಮತ್ತು ಹೊಸ ಖಾತೆಯನ್ನು ತೆರೆಯಬಹುದು. ಆದರೆ ಎಸ್‌ಸಿಎಸ್ಎಸ್ ಖಾತೆಯನ್ನು ಅಕಾಲಿಕವಾಗಿ ಮುಚ್ಚುವುದರಿಂದ ಕೆಲವು ಶುಲ್ಕಗಳು ನಿಮ್ಮ ಮೇಲೆ ಬೀಳಬಹುದು.

    MORE
    GALLERIES

  • 48

    Senior Citizen Savings Scheme ಬಗ್ಗೆ ನಿಮಗೆಷ್ಟು ಗೊತ್ತು? ಹಣ ಹೂಡಿಕೆ ಮಾಡುವ ಮೊದಲು ಇದನ್ನು ಓದಿ

    ಕ್ಲೈಮ್ ಮಾಡದ ಬಡ್ಡಿ ಆದಾಯದ ಮೇಲೆ ಯಾವುದೇ ಬಡ್ಡಿ ಇರುವುದಿಲ್ಲ: ಎಸ್‌ಸಿಎಸ್ಎಸ್ ಖಾತೆದಾರರು ಪ್ರತಿ ತ್ರೈಮಾಸಿಕದಲ್ಲಿ ತಮ್ಮ ಬಡ್ಡಿ ಆದಾಯವನ್ನು ಪಡೆಯಬೇಕಾಗುತ್ತದೆ. ಪ್ರತಿ ತ್ರೈಮಾಸಿಕದಲ್ಲಿ ಪಾವತಿಸಬೇಕಾದ ಬಡ್ಡಿಯನ್ನು ನೀವು ಕ್ಲೈಮ್ ಮಾಡದಿದ್ದರೆ ಅಂತಹ ಮೊತ್ತವು ಯಾವುದೇ ಹೆಚ್ಚುವರಿ ಬಡ್ಡಿಯನ್ನು ಗಳಿಸುವುದಿಲ್ಲ ಅಂತ ಈ ಉಳಿತಾಯ ಯೋಜನೆಯ 2019 ರ ನಿಯಮಗಳು ಹೇಳುತ್ತವೆ.

    MORE
    GALLERIES

  • 58

    Senior Citizen Savings Scheme ಬಗ್ಗೆ ನಿಮಗೆಷ್ಟು ಗೊತ್ತು? ಹಣ ಹೂಡಿಕೆ ಮಾಡುವ ಮೊದಲು ಇದನ್ನು ಓದಿ

    ವಯಸ್ಸಿನ ಮಿತಿ ಇದೆ: ಎಸ್‌ಸಿಎಸ್ಎಸ್ ಖಾತೆ ತೆರೆಯುವ ಸೌಲಭ್ಯವು 60 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಮಾತ್ರ ಲಭ್ಯವಿದೆ. ಬೇಗನೆ ನಿವೃತ್ತರಾಗಲು ಬಯಸುವ ಖಾಸಗಿ ವಲಯದ ನೌಕರರು ಯೋಜನೆಯ ಲಾಭವನ್ನು ಪಡೆಯಲು ಸಾಧ್ಯವಿಲ್ಲ.

    MORE
    GALLERIES

  • 68

    Senior Citizen Savings Scheme ಬಗ್ಗೆ ನಿಮಗೆಷ್ಟು ಗೊತ್ತು? ಹಣ ಹೂಡಿಕೆ ಮಾಡುವ ಮೊದಲು ಇದನ್ನು ಓದಿ

    ಈ ಯೋಜನೆಗೆ ಲಾಕ್-ಇನ್ ಅವಧಿ ಇದೆ: ಎಸ್‌ಸಿಎಸ್ಎಸ್ ಖಾತೆಯಲ್ಲಿ ಮಾಡಿದ ಹೂಡಿಕೆಗಳಿಗೆ 5 ವರ್ಷಗಳ ಲಾಕ್-ಇನ್ ಅವಧಿ ಇದೆ. ಇದನ್ನು ಇನ್ನೂ 3 ವರ್ಷಗಳವರೆಗೆ ವಿಸ್ತರಿಸಬಹುದು. ಲಾಕ್-ಇನ್ ಅವಧಿಯು ಕೆಲವು ಠೇವಣಿದಾರರಿಗೆ ತಮ್ಮ ಗುರಿಗಳಿಗೆ ಅನುಗುಣವಾಗಿ ಯೋಜಿಸಲು ಅಥವಾ 2-3 ವರ್ಷಗಳವರೆಗೆ ಮಾತ್ರ ಹೂಡಿಕೆ ಮಾಡಲು ಬಯಸುವವರಿಗೆ ಇದು ಕಷ್ಟವಾಗಬಹುದು. ಇದಲ್ಲದೆ, ಲಾಕ್-ಇನ್ ಅವಧಿ ಮತ್ತು ಅಕಾಲಿಕವಾಗಿ ಹೂಡಿಕೆಯ ಹಣವನ್ನು ಹಿಂತೆಗೆದುಕೊಳ್ಳುವುದರ ಮೇಲೆ ನಿರ್ದಿಷ್ಟವಾದ ದಂಡಗಳಿವೆ.

    MORE
    GALLERIES

  • 78

    Senior Citizen Savings Scheme ಬಗ್ಗೆ ನಿಮಗೆಷ್ಟು ಗೊತ್ತು? ಹಣ ಹೂಡಿಕೆ ಮಾಡುವ ಮೊದಲು ಇದನ್ನು ಓದಿ

    ಹಿರಿಯ ನಾಗರಿಕರಿಗೆ ಇದೊಂದು ಒಳ್ಳೆಯ ಯೋಜನೆ: ಒಳ್ಳೆಯ ಬಡ್ಡಿಯನ್ನು ಮತ್ತು ಆದಾಯವನ್ನು ಗಳಿಸಲು ಬಯಸುವ ಅರ್ಹ ಹೂಡಿಕೆದಾರರಿಗೆ ಇದು ಒಳ್ಳೆಯ ಯೋಜನೆಯಾಗಿದೆ. ಎಸ್‌ಸಿಎಸ್ಎಸ್ ಠೇವಣಿಗಳ ಮೇಲಿನ ಪ್ರಸ್ತುತ 8.2% ಬಡ್ಡಿದರ ಬ್ಯಾಂಕುಗಳು ನೀಡುವ 5 ವರ್ಷಗಳ ಎಫ್‌ಡಿ ಯೋಜನೆಗಳಿಗಿಂತ ಉತ್ತಮವಾಗಿದೆ.

    MORE
    GALLERIES

  • 88

    Senior Citizen Savings Scheme ಬಗ್ಗೆ ನಿಮಗೆಷ್ಟು ಗೊತ್ತು? ಹಣ ಹೂಡಿಕೆ ಮಾಡುವ ಮೊದಲು ಇದನ್ನು ಓದಿ

    ಇದಲ್ಲದೆ, ಎಸ್‌ಸಿಎಸ್ಎಸ್ ಖಾತೆಯಲ್ಲಿ ವರ್ಷಕ್ಕೆ 1.5 ಲಕ್ಷ ರೂಪಾಯಿವರೆಗಿನ ಹೂಡಿಕೆಗಳು ಸೆಕ್ಷನ್ 80ಸಿ ಅಡಿಯಲ್ಲಿ ತೆರಿಗೆ ಕಡಿತಕ್ಕೆ ಅರ್ಹವಾಗಿವೆ. ಯಾವುದೇ ತೆರಿಗೆ ಉಳಿತಾಯ ಹೂಡಿಕೆ ಮಾಡದ ಹಿರಿಯ ನಾಗರಿಕರು ತಮ್ಮ ನಿವೃತ್ತಿಯ ನಂತರದ ಜೀವನವನ್ನು ತ್ರೈಮಾಸಿಕ ಬಡ್ಡಿ ಆದಾಯದೊಂದಿಗೆ ಆರಾಮಾಗಿ ನಡೆಸಬಹುದು.

    MORE
    GALLERIES