ಹಲವು ವರ್ಷಗಳ ನಂತರ ನಕಗಾವಾ ತೈಲ ಉದ್ಯಮವನ್ನು ಬಿಟ್ಟು, ನಕಗಾವಾ ಮಾವಿನ ಕೃಷಿ ಮಾಡಲು ಪ್ರಾರಂಭಿಸಿದರು. ಚಳಿಗಾಲದಲ್ಲಿ ಹಣ್ಣನ್ನು ಬೆಳೆಯುವುದು ಕಾರ್ಯಸಾಧ್ಯವೆಂದು ಪ್ರತಿಪಾದಿಸಿದ ಮಿಯಾಝಾಕಿಯ ದಕ್ಷಿಣ ಪ್ರಾಂತ್ಯದ ಮತ್ತೊಬ್ಬ ಮಾವು ರೈತನ ಮಾರ್ಗದರ್ಶನದಲ್ಲಿ, ನಕಗಾವಾ ತನ್ನ ಫಾರ್ಮ್ ಅನ್ನು ನಿರ್ಮಿಸಿದರು. ತನ್ನ ಸ್ಟಾರ್ಟ್ಅಪ್ ನೊರಾವರ್ಕ್ಸ್ ಜಪಾನ್ ಅನ್ನು ಸ್ಥಾಪಿಸಿದರು.
ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ, ಜಪಾನ್ ಕಾರ್ಮಿಕರ ಕೊರತೆಯನ್ನು ಎದುರಿಸುತ್ತಿದ್ದು, ಚಳಿಗಾಲದಲ್ಲಿ ಕೊಯ್ಲು ಮಾಡುವಾಗ ಕಾರ್ಮಿಕರು ಲಭ್ಯವಿರುತ್ತಾರೆ ಎಂದು ನಕಗಾವಾ ತಿಳಿಸಿದ್ದಾರೆ. ಸುಸ್ಥಿರ ವಿಧಾನದಲ್ಲಿ ಹಣ್ಣಿಗೆ ಸಿಗುವ ವಿಶೇಷ ರುಚಿ ಹೆಚ್ಚುವರಿ ಬೋನಸ್ನಂತೆ. ನಕಾಗಾವಾ ಅವರು ಸಾಮಾನ್ಯ ಮಾವಿನಹಣ್ಣುಗಳಿಗಿಂತ ಇವು ಹೆಚ್ಚು ಸಿಹಿಯಾಗಿರುತ್ತದೆ ಎಂದು ಹೇಳುತ್ತಾರೆ.