Price Hike: ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ಮ್ಯಾಗಿ, ಕಾಫಿ, ಟೀ ಪುಡಿ ರೇಟ್ ಹೆಚ್ಚಳ.. ಯಾವುದು ಎಷ್ಟಾಗಿದೆ ನೋಡಿ

Price Hike: ಜನಸಾಮಾನ್ಯರಿಗೆ ಸಾಲು ಸಾಲು ಬೆಲೆ ಏರಿಕೆ ಶಾಕ್ ಗಳು ಎದುರಾಗುತ್ತಲೇ ಇವೆ. ಇತ್ತೀಚೆಗಷ್ಟೇ ಸೋಪು ಮತ್ತು ಸರ್ಫ್ ಬೆಲೆಯನ್ನು ಹೆಚ್ಚಿಸಿದ್ದ ಕಂಪನಿಯೊಂದು... ಈಗ ನೂಡಲ್ಸ್, ಟೀ, ಕಾಫಿ ಬೆಲೆಯನ್ನು ಹೆಚ್ಚಿಸಿದೆ. ಯಾವುದರ ಮೇಲೆ ಎಷ್ಟು ಎಂಬುದನ್ನು ತಿಳಿದುಕೊಳ್ಳಿ.

First published:

  • 17

    Price Hike: ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ಮ್ಯಾಗಿ, ಕಾಫಿ, ಟೀ ಪುಡಿ ರೇಟ್ ಹೆಚ್ಚಳ.. ಯಾವುದು ಎಷ್ಟಾಗಿದೆ ನೋಡಿ

    1. ಗ್ರಾಹಕ ಸರಕುಗಳ (FMCG) ಕ್ಷೇತ್ರದ ದೈತ್ಯ ಕಂಪನಿ ಹಿಂದೂಸ್ತಾನ್ ಯೂನಿಲಿವರ್ ಲಿಮಿಟೆಡ್ (HUL) ನೆಸ್ಲೆ ಬೆಲೆ ಏರಿಕೆಯನ್ನು ಘೋಷಿಸಿದೆ. ಮಾರ್ಚ್ 14 ರಿಂದ ಚಹಾ, ಕಾಫಿ, ಹಾಲು ಮತ್ತು ನೂಡಲ್ಸ್ ಬೆಲೆಗಳು ಹೆಚ್ಚಾಗಲಿವೆ ಎಂದು ಮೂಲಗಳು CNBC TV-18 ಗೆ ತಿಳಿಸಿವೆ. ಈ ಕಂಪನಿಗಳಿಂದ ಸರಕುಗಳನ್ನು ಖರೀದಿಸುವವರಿಗೆ ಇದು ಆಘಾತವನ್ನು ಉಂಟು ಮಾಡುತ್ತದೆ. (ಪ್ರಾತಿನಿಧಿಕ ಚಿತ್ರ)

    MORE
    GALLERIES

  • 27

    Price Hike: ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ಮ್ಯಾಗಿ, ಕಾಫಿ, ಟೀ ಪುಡಿ ರೇಟ್ ಹೆಚ್ಚಳ.. ಯಾವುದು ಎಷ್ಟಾಗಿದೆ ನೋಡಿ

    2. ಬ್ರೂ ಕಾಫಿ ಪೌಡರ್ ನ ಎಲ್ಲಾ ಪ್ಯಾಕೆಟ್ಗಳ ಬೆಲೆಯನ್ನು ಶೇಕಡಾ 3 ರಿಂದ 7 ರಷ್ಟು ಹೆಚ್ಚಿಸಿದೆ. ಬ್ರೂ ಗೋಲ್ಡ್ ಕಾಫಿ ಜಾರ್ ಗಳು ಶೇ.3ರಿಂದ 4ರಷ್ಟು ಮತ್ತು ಇನ್ ಸ್ಟಂಟ್ ಕಾಫಿ ಪೌಚ್ ಗಳು ಶೇ.3ರಿಂದ 6.66ರಷ್ಟು ಹೆಚ್ಚಾಗಲಿವೆ. ತಾಜ್ ಮಹಲ್ ಚಹಾದ ಎಲ್ಲಾ ಪ್ಯಾಕೆಟ್ಗಳ ಬೆಲೆಗಳು, ಎಲ್ಲಾ ವೈರೆಟಿಗಳು ಶೇ.3.7 ರಿಂದ 5.8 ರಷ್ಟು ಬೆಲೆ ಏರಿಕೆಯಾಗಿದೆ. 3 ರೋಸಸ್ ಟೀ ಪುಡಿ ಶೇ.1.5 ಮತ್ತು 14ರಷ್ಟು ಹೆಚ್ಚಿನ ಬೆಲೆಯನ್ನು ಹೊಂದಿದೆ. (ಸಾಂಕೇತಿಕ ಚಿತ್ರ)

    MORE
    GALLERIES

  • 37

    Price Hike: ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ಮ್ಯಾಗಿ, ಕಾಫಿ, ಟೀ ಪುಡಿ ರೇಟ್ ಹೆಚ್ಚಳ.. ಯಾವುದು ಎಷ್ಟಾಗಿದೆ ನೋಡಿ

    3. ತಮ್ಮ ಉತ್ಪನ್ನಗಳ ಮೇಲೆ ಹಣದುಬ್ಬರದ ಒತ್ತಡದಿಂದಾಗಿ HUL ಬೆಲೆ ಏರಿಕೆಗೆ ಮುಂದಾಗಿದೆ ಎಂದು ಹೇಳಲಾಗುತ್ತಿದೆ. ಕೆಲ ದಿನಗಳ ಹಿಂದೆ ಸೋಪ್, ಡಿಟರ್ಜೆಂಟ್, ಡಿಶ್ ವಾಶರ್ ಮತ್ತಿತರ ಉತ್ಪನ್ನಗಳ ಬೆಲೆಯನ್ನು ಶೇ.3ರಿಂದ 10ರಷ್ಟು ಹೆಚ್ಚಿಸಿದೆ ಎಂದು ವರದಿಯಾಗಿತ್ತು. ಸರ್ಫ್ ಎಕ್ಸೆಲ್ ಈಸಿ ವಾಶ್, ಸರ್ಫ್ ಎಕ್ಸೆಲ್ ಕ್ವಿಕ್ ವಾಶ್, ವಿಮ್ ಬಾರ್, ವಿಮ್ ಲಿಕ್ವಿಡ್, ಲಕ್ಸ್ ಸೋಪ್, ರೆಕ್ಸೋನಾ ಸೋಪ್, ಪಾಂಡ್ಸ್ ಟಾಲ್ಕಂ ಪೌಡರ್ ಮುಂತಾದ ಉತ್ಪನ್ನಗಳ ಬೆಲೆ ಏರಿಕೆಯಾಗಿದೆ. (ಸಾಂಕೇತಿಕ ಚಿತ್ರ)

    MORE
    GALLERIES

  • 47

    Price Hike: ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ಮ್ಯಾಗಿ, ಕಾಫಿ, ಟೀ ಪುಡಿ ರೇಟ್ ಹೆಚ್ಚಳ.. ಯಾವುದು ಎಷ್ಟಾಗಿದೆ ನೋಡಿ

    4. 2021ರ ಜನವರಿಯಲ್ಲಿ ವೀಲ್, ರಿನ್, ಸರ್ಫ್ ಎಕ್ಸೆಲ್ ಮತ್ತು ಲೈಫ್ ಬಾಯ್ ನಂತಹ ಉತ್ಪನ್ನಗಳ ಬೆಲೆಗಳು ಶೇಕಡಾ 3 ರಿಂದ 20 ರಷ್ಟು ಏರಿಕೆಯಾಗಿದೆ ಎಂದು ವರದಿಯಾಗಿದೆ. ಕಂಪನಿಯು ಸೆಪ್ಟೆಂಬರ್ ಮತ್ತು ಡಿಸೆಂಬರ್ ತ್ರೈಮಾಸಿಕದಲ್ಲಿ ಚಹಾ, ಕಚ್ಚಾ ಪಾಮ್ ಎಣ್ಣೆ ಮತ್ತು ಇತರ ಉತ್ಪನ್ನಗಳ ಬೆಲೆಗಳನ್ನು ಹೆಚ್ಚಿಸಿದೆ. HUL ಮಾತ್ರವಲ್ಲ... ನೆಸ್ಲ್ ಕೂಡ ತಮ್ಮ ಉತ್ಪನ್ನಗಳ ಬೆಲೆಯನ್ನು ಹೆಚ್ಚಿಸಿದೆ. (ಸಾಂಕೇತಿಕ ಚಿತ್ರ)

    MORE
    GALLERIES

  • 57

    Price Hike: ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ಮ್ಯಾಗಿ, ಕಾಫಿ, ಟೀ ಪುಡಿ ರೇಟ್ ಹೆಚ್ಚಳ.. ಯಾವುದು ಎಷ್ಟಾಗಿದೆ ನೋಡಿ

    5. ನೆಸ್ಲೆ ಕಂಪನಿಯ ಮ್ಯಾಗಿ ನೂಡಲ್ಸ್ ಬೆಲೆ ಶೇ.9 ರಿಂದ 16 ರಷ್ಟು ಏರಿಕೆಯಾಗಿದೆ. ಹಾಲು ಮತ್ತು ಕಾಫಿ ಪುಡಿಯ ಬೆಲೆಯನ್ನೂ ಹೆಚ್ಚಿಸಿದೆ. 70 ಗ್ರಾಂ ಮ್ಯಾಗಿ ಮಸಾಲಾ ನೂಡಲ್ಸ್ ಪ್ಯಾಕ್ ಬೆಲೆ 12 ರಿಂದ 14 ರೂ.ಗೆ ಏರಿಕೆಯಾಗಿದೆ. (ಸಾಂಕೇತಿಕ ಚಿತ್ರ)

    MORE
    GALLERIES

  • 67

    Price Hike: ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ಮ್ಯಾಗಿ, ಕಾಫಿ, ಟೀ ಪುಡಿ ರೇಟ್ ಹೆಚ್ಚಳ.. ಯಾವುದು ಎಷ್ಟಾಗಿದೆ ನೋಡಿ

    6. ನೆಸ್ಲ್ ಎ ಯ ಎ + ಹಾಲಿನ ಬೆಲೆ ಶೇಕಡಾ 4 ರಷ್ಟು ಏರಿಕೆಯಾಗಿದೆ. ಇದರೊಂದಿಗೆ 75 ರೂ.ನಿಂದ 78 ರೂ.ಗೆ ಏರಿತು. ನೆಸ್ಕೆಫೆ ಕ್ಲಾಸಿಕ್ ಕಾಫಿ ಪೌಡರ್ ಬೆಲೆ ಶೇ.3ರಿಂದ ಶೇ.7ಕ್ಕೆ ಏರಿಕೆಯಾಗಿದೆ. ನೆಸ್ಕೆಫೆ ಕ್ಲಾಸಿಕ್ 25 ಗ್ರಾಂ ಪ್ಯಾಕ್ ಬೆಲೆ 78 ರಿಂದ 80 ರೂ.ಗೆ ಏರಿಕೆಯಾಗಿದೆ. ನೆಸ್ಕೆಫೆ ಕ್ಲಾಸಿಕ್ 50 ಗ್ರಾಂ ಪ್ಯಾಕ್ ಬೆಲೆ 145 ರಿಂದ 150 ರೂ.ಗೆ ಏರಿಕೆಯಾಗಿದೆ.

    MORE
    GALLERIES

  • 77

    Price Hike: ಜನಸಾಮಾನ್ಯರಿಗೆ ಬೆಲೆ ಏರಿಕೆ ಶಾಕ್: ಮ್ಯಾಗಿ, ಕಾಫಿ, ಟೀ ಪುಡಿ ರೇಟ್ ಹೆಚ್ಚಳ.. ಯಾವುದು ಎಷ್ಟಾಗಿದೆ ನೋಡಿ

    7. ಕಚ್ಚಾ ವಸ್ತುಗಳ ಬೆಲೆ ಹೆಚ್ಚಾದಂತೆ ಉತ್ಪಾದನಾ ವಸ್ತುಗಳ ಬೆಲೆಯೂ ಏರುತ್ತಿದೆ. ಇದರಿಂದ ಕಂಪನಿಗಳು ಬೆಲೆ ಏರಿಕೆ ಮಾಡಿ ಗ್ರಾಹಕರ ಮೇಲೆ ಹೊರೆ ಹೊರಿಸುತ್ತಿವೆ. (ಸಾಂಕೇತಿಕ ಚಿತ್ರ)

    MORE
    GALLERIES