ದೊಡ್ಡ ಮೊತ್ತದ ಹಣಕಾಸಿನ ವಹಿವಾಟುಗಳಿಗೆ ಪ್ಯಾನ್ ಕಾರ್ಡ್ ಅಗತ್ಯವಿದೆ. ಆದರೆ ಕೆಲವು ವಂಚಕರು ನಕಲಿ ಪ್ಯಾನ್‌ಕಾರ್ಡ್‌ಗಳನ್ನು ಸೃಷ್ಟಿಸಿ ವಂಚನೆಯಲ್ಲಿ ತೊಡಗುತ್ತಾರೆ. ಸರ್ಕಾರದ ಖಜಾನೆಗೆ ಬರಬೇಕಾದ ತೆರಿಗೆಯನ್ನು ಪಾವತಿಸದೆ ತಪ್ಪಿಸಿಕೊಳ್ಳುತ್ತಿದ್ದಾರೆ. ಈ ವಂಚನೆಯನ್ನು ತಡೆಯಲು ಕೇಂದ್ರ ಸರ್ಕಾರ ಇಂತಹ ಕಾರ್ಡ್‌ಗಳನ್ನು ಪತ್ತೆ ಮಾಡಿ ನಿಷ್ಕ್ರಿಯಗೊಳಿಸುತ್ತದೆ. (ಸಾಂದರ್ಭಿಕ ಚಿತ್ರ)
ಸಿಂಧುತ್ವ ಪರಿಶೀಲನೆ
ಪ್ಯಾನ್‌ಕಾರ್ಡ್‌ನ ಸಿಂಧುತ್ವವನ್ನು ಪರಿಶೀಲಿಸುವುದು ಬಹಳ ಮುಖ್ಯ. ಒಬ್ಬ ವ್ಯಕ್ತಿಯು ಅನೇಕ ಪ್ಯಾನ್ ಕಾರ್ಡ್‌ಗಳನ್ನು ಬಳಸುತ್ತಿದ್ದರೆ ಅಥವಾ ನಕಲಿ ಪ್ಯಾನ್ ಕಾರ್ಡ್‌ಗಳನ್ನು ಬಳಸುತ್ತಿದ್ದರೆ ಸರ್ಕಾರವು ಸಾಮಾನ್ಯವಾಗಿ ಇಂತಹ ಪ್ಯಾನ್ ಕಾರ್ಡ್‌ಗಳನ್ನು ನಿಷ್ಕ್ರಿಯಗೊಳಿಸುತ್ತದೆ. ಆದ್ದರಿಂದ ನಿಮ್ಮ ಪ್ಯಾನ್‌ಕಾರ್ಡ್ ಇನ್ನೂ ಮಾನ್ಯವಾಗಿದೆಯೇ ಎಂದು ಪರಿಶೀಲಿಸಲು ಅನುಸರಿಸಬೇಕಾದ ಹಂತಗಳು ಇಲ್ಲಿವೆ. ಮೊದಲು ಆದಾಯ ತೆರಿಗೆ ಇಲಾಖೆಯ ಇ-ಫೈಲಿಂಗ್ ವೆಬ್‌ಸೈಟ್ incometaxindiaefiling.gov.in ಗೆ ಭೇಟಿ ನೀಡಿ.
ಮುಖಪುಟದ ಎಡಭಾಗದಲ್ಲಿರುವ ‘Verify Your PAN Details’ ಲಿಂಕ್ ಮೇಲೆ ಕ್ಲಿಕ್ ಮಾಡಿ. ಇವಾಗ ಹೊಸ ಪುಟ ತೆರೆದುಕೊಳ್ಳುತ್ತದೆ. ಇಲ್ಲಿ ನಿಮ್ಮ ಪ್ಯಾನ್ ಕಾರ್ಡ್ ಸಂಖ್ಯೆ ಮತ್ತು ಹೆಸರನ್ನು ಎಂಟ್ರಿ ಮಾಡಬೇಕು. ಇದಾದ ನಂತರ captcha ಕೋಡ್ ಎಂಟ್ರಿ ಮಾಡಬೇಕು. ಕೊನೆಗೆ submit ಮೇಲೆ ಕ್ಲಿಕ್ ಮಾಡಿದ್ರೆ ನಿಮ್ಮ ಪ್ಯಾನ್ ಕಾರ್ಡ್ ಸಕ್ರಿಯವಾಗಿದೆಯೇ ಇಲ್ಲವೋ ಎಂದ ಸಂದೇಶ ನಿಮ್ಮ ಸ್ಕ್ರೀನ್ ಮೇಲೆ ಬರುತ್ತದೆ. (ಸಾಂದರ್ಭಿಕ ಚಿತ್ರ)
SMS ಮೂಲಕ ಪರಿಶೀಲಿಸಿ
567678 ಅಥವಾ 56161 ಸಂಖ್ಯೆಗೆ NSDL ಪ್ಯಾನ್ ಫಾರ್ಮ್ಯಾಟ್‌ನಲ್ಲಿ SMS ಕಳುಹಿಸುವ ಮೂಲಕ ನೀವು ಪ್ಯಾನ್ ಕಾರ್ಡ್‌ನ ಮಾನ್ಯತೆಯನ್ನು ಪರಿಶೀಲಿಸಬಹುದು. ಉದಾಹರಣೆಗೆ, ನಿಮ್ಮ ಪ್ಯಾನ್ ಸಂಖ್ಯೆ ABCDE1234F ಆಗಿದ್ದರೆ, NSDL PAN ABCDE1234F ಅನ್ನು ನಮೂದಿಸಿ ಮತ್ತು SMS ಕಳುಹಿಸಿ. ಇದು ಪ್ಯಾನ್ ಕಾರ್ಡ್ ಸಕ್ರಿಯವಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು SMS ರೂಪದಲ್ಲಿ ನಿಮಗೆ ತಿಳಿಸುತ್ತದೆ. (ಸಾಂದರ್ಭಿಕ ಚಿತ್ರ)