ಆದರೆ ಈ ಸುನೀಲ್ ಕುಮಾರ್ ಸಾಹ್ ಒಂದು ಸೂಪರ್ ಐಡಿಯಾ ಮಾಡಿದ್ದಾರೆ. ಪ್ರೀತಿಸಿ ಮೋಸ ಹೋದವರಿಗಾಗಿ ಗೋಪಾಲ್ ಗಂಜ್ ನ ಚೌಕದಲ್ಲಿ ವಿಶೇಷ ಸಟ್ಟು ಸ್ಟಾಲ್ ಸ್ಥಾಪಿಸಿದ್ದಾರೆ. ಸಟ್ಟು ಎಂದರೆ ಬೇರೆ ಏನೂ ಅಲ್ಲ. ಸಟ್ಟು ಒಂದು ಪ್ರೊಟೀನ್-ಸಮೃದ್ಧವಾದ ಹಿಟ್ಟು, ಪುಡಿ ಮಾಡಿದ ಚನಾ ಅಥವಾ ಇತರ ಕಾಳುಗಳು ಮತ್ತು ಧಾನ್ಯಗಳಿಂದ ತಯಾರಿಸಲಾಗುತ್ತದೆ. ಇದು ಜಾರ್ಖಂಡ್, ಬಿಹಾರ, ಪಂಜಾಬ್, ಉತ್ತರಾಖಂಡ ಮತ್ತು ಯುಪಿಯಂತಹ ಭಾರತದ ಹಲವು ಭಾಗಗಳಲ್ಲಿ ಸಾಕಷ್ಟು ಜನಪ್ರಿಯವಾಗಿದೆ.