LPG Cylinder Transfer: ಹೀಗೆ ಆನ್​​ಲೈನಲ್ಲಿ ನಿಮ್ಮ ಎಲ್​ಪಿಜಿ ಕನೆಕ್ಷನ್​ ಅಡ್ರೆಸ್​ ಬದಲಾಯಿಸಿ!

LPG Transfer: ಗ್ಯಾಸ್ ಸಿಲಿಂಡರ್ ಅನ್ನು ಒಂದು ಸ್ಥಳದಿಂದ ಇನ್ನೊಂದಕ್ಕೆ ವರ್ಗಾಯಿಸಲು ಏನು ಮಾಡ್ಬೇಕು ಅಂತ ಗೊತ್ತಿದ್ಯಾ? ಹೀಗೆ ನೀವು ಸುಲಭವಾಗಿ ಮನೆಯಲ್ಲೇ ಕೂತು ಈ ಪ್ರಕ್ರಿಯೆಯನ್ನು ಆನ್​ಲೈನ್​ನಲ್ಲಿ ಮಾಡಬಹುದು.

First published:

  • 19

    LPG Cylinder Transfer: ಹೀಗೆ ಆನ್​​ಲೈನಲ್ಲಿ ನಿಮ್ಮ ಎಲ್​ಪಿಜಿ ಕನೆಕ್ಷನ್​ ಅಡ್ರೆಸ್​ ಬದಲಾಯಿಸಿ!

    ನೀವು ಗ್ಯಾಸ್ ಸಿಲಿಂಡರ್ ಬಳಸುತ್ತಿದ್ದೀರಾ? ಆದರೆ ಸಿಲಿಂಡರ್ ಸಂಪರ್ಕವನ್ನು ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ವರ್ಗಾಯಿಸೋದು ಹೇಗೆ ಅಂತ ಕನ್ಪೂಸ್​ ಆಗಿದ್ಯಾ?ನೀವು ಈ ಕೆಲಸವನ್ನು ಸುಲಭವಾಗಿ ಪೂರ್ಣಗೊಳಿಸಬಹುದು.ಗ್ಯಾಸ್ ಸಿಲಿಂಡರ್ ವರ್ಗಾವಣೆಗೆ ನೀವು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

    MORE
    GALLERIES

  • 29

    LPG Cylinder Transfer: ಹೀಗೆ ಆನ್​​ಲೈನಲ್ಲಿ ನಿಮ್ಮ ಎಲ್​ಪಿಜಿ ಕನೆಕ್ಷನ್​ ಅಡ್ರೆಸ್​ ಬದಲಾಯಿಸಿ!

    ಇಂಡಿಯನ್​ ಗ್ಯಾಸ್ ಬಳಸುವವರು ಮೊದಲು ಇಂಡಿಯನ್ ಆಯಿಲ್ ಒನ್ ಮೊಬೈಲ್ ಅಪ್ಲಿಕೇಶನ್ ಅನ್ನು ಬಳಸಬೇಕಾಗುತ್ತದೆ. ಇದಕ್ಕಾಗಿ ನೀವು Google Play Store ನಿಂದ ಫೋನ್‌ನಲ್ಲಿ ಈ ಅಪ್ಲಿಕೇಶನ್ ಅನ್ನು ಸ್ಥಾಪಿಸಬೇಕು. ನಂತರ ನೋಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ.

    MORE
    GALLERIES

  • 39

    LPG Cylinder Transfer: ಹೀಗೆ ಆನ್​​ಲೈನಲ್ಲಿ ನಿಮ್ಮ ಎಲ್​ಪಿಜಿ ಕನೆಕ್ಷನ್​ ಅಡ್ರೆಸ್​ ಬದಲಾಯಿಸಿ!

    ನೋಂದಣಿಯನ್ನು ಪೂರ್ಣಗೊಳಿಸಿದ ನಂತರ, ಅಪ್ಲಿಕೇಶನ್‌ಗೆ ಲಾಗ್ ಇನ್ ಮಾಡಿ. ನಂತರ ಮೇಲಿನ ಎಡಭಾಗದಲ್ಲಿ ಮೂರು ಸಾಲುಗಳು ಕಾಣಿಸಿಕೊಳ್ಳುತ್ತವೆ. ಅದರ ಮೇಲೆ ಕ್ಲಿಕ್ ಮಾಡಿ. ಈಗ ನೀವು LPG, ಸಿಲಿಂಡರ್, ಇಂಧನ ನಿಲ್ದಾಣದಂತಹ ಹಲವು ಆಯ್ಕೆಗಳನ್ನು ನೋಡುತ್ತೀರಿ.

    MORE
    GALLERIES

  • 49

    LPG Cylinder Transfer: ಹೀಗೆ ಆನ್​​ಲೈನಲ್ಲಿ ನಿಮ್ಮ ಎಲ್​ಪಿಜಿ ಕನೆಕ್ಷನ್​ ಅಡ್ರೆಸ್​ ಬದಲಾಯಿಸಿ!

    ಇವುಗಳಲ್ಲಿ ನೀವು LPG ಆಯ್ಕೆಯನ್ನು ಕ್ಲಿಕ್ ಮಾಡಬೇಕು. ನಂತರ ನಿಮಗಾಗಿ ಹೊಸ ಪುಟ ತೆರೆದುಕೊಳ್ಳುತ್ತದೆ. ಇದರಲ್ಲಿ ನೀವು ಡೊಮೆಸ್ಟಿಕ್ ಕನೆಕ್ಷನ್, ಕಮರ್ಷಿಯಲ್ ಕನೆಕ್ಷನ್ ಅಪ್ಲೈ ಎಂಬ ಆಯ್ಕೆಗಳನ್ನು ನೋಡುತ್ತೀರಿ. ಇವುಗಳಲ್ಲಿ ನೀವು ಡೊಮೆಸ್ಟಿಕ್ ಕನೆಕ್ಷನ್ ಅನ್ನು ಕ್ಲಿಕ್ ಮಾಡಬೇಕಾಗುತ್ತದೆ. ಈಗ ಹೊಸ ಪುಟ ತೆರೆದುಕೊಳ್ಳುತ್ತದೆ.

    MORE
    GALLERIES

  • 59

    LPG Cylinder Transfer: ಹೀಗೆ ಆನ್​​ಲೈನಲ್ಲಿ ನಿಮ್ಮ ಎಲ್​ಪಿಜಿ ಕನೆಕ್ಷನ್​ ಅಡ್ರೆಸ್​ ಬದಲಾಯಿಸಿ!

    ನಂತರ ನೀವು ಬುಕಿಂಗ್ ಹಿಸ್ಟರಿ, ಕಂಪ್ಲೈಂಟ್ ಹಿಸ್ಟರಿ, ಲಾಸ್ಟ್ ಅಥವಾ ರಿಪ್ಲೇಸ್ಮೆಂಟ್, ಮೆಕ್ಯಾನಿಕ್, ಡಿಬಿಸಿ, ಚೇಂಜ್ ಡಿಸ್ಟ್ರಿಬ್ಯೂಟರ್ ಮುಂತಾದ ಆಯ್ಕೆಗಳನ್ನು ನೋಡುತ್ತೀರಿ. ಇವುಗಳಲ್ಲಿ ನೀವು ಚೇಂಜ್ ಡಿಸ್ಟ್ರಿಬ್ಯೂಟರ್ ಎಂಬ ಆಯ್ಕೆಯನ್ನು ಆರಿಸಬೇಕಾಗುತ್ತದೆ.

    MORE
    GALLERIES

  • 69

    LPG Cylinder Transfer: ಹೀಗೆ ಆನ್​​ಲೈನಲ್ಲಿ ನಿಮ್ಮ ಎಲ್​ಪಿಜಿ ಕನೆಕ್ಷನ್​ ಅಡ್ರೆಸ್​ ಬದಲಾಯಿಸಿ!

    ನಂತರ ನೀವು ಮೂರು ಆಯ್ಕೆಗಳನ್ನು ನೋಡುತ್ತೀರಿ. ಅವುಗಳೆಂದರೆ ನಗರದ ವಿಳಾಸ ಬದಲಾವಣೆ, ಪೋರ್ಟಬಿಲಿಟಿ, ಟಿವಿ. ಇವುಗಳಲ್ಲಿ ನೀವು ನಿಮ್ಮ ಆದ್ಯತೆಯ ಆಯ್ಕೆಯನ್ನು ಆರಿಸಿಕೊಳ್ಳಬಹುದು. ಅದೇನೆಂದರೆ, ನೀವು ಅದೇ ನಗರದಲ್ಲಿ ಬೇರೆ ಸ್ಥಳಕ್ಕೆ ಗ್ಯಾಸ್ ಸಂಪರ್ಕವನ್ನು ಬದಲಾಯಿಸಲು ಬಯಸಿದರೆ, ನೀವು ನಗರದ ವಿಳಾಸ ಬದಲಾವಣೆಯ ಆಯ್ಕೆಯನ್ನು ಆರಿಸಬೇಕಾಗುತ್ತದೆ.

    MORE
    GALLERIES

  • 79

    LPG Cylinder Transfer: ಹೀಗೆ ಆನ್​​ಲೈನಲ್ಲಿ ನಿಮ್ಮ ಎಲ್​ಪಿಜಿ ಕನೆಕ್ಷನ್​ ಅಡ್ರೆಸ್​ ಬದಲಾಯಿಸಿ!

    ನೀವು ಒಂದು ನಗರದಿಂದ ಮತ್ತೊಂದು ನಗರಕ್ಕೆ ಗ್ಯಾಸ್ ಸಿಲಿಂಡರ್ ಸಂಪರ್ಕವನ್ನು ಬದಲಾಯಿಸಲು ಬಯಸಿದರೆ, ನೀವು ಟಿವಿ ಆಯ್ಕೆಯನ್ನು ಆರಿಸಬೇಕಾಗುತ್ತದೆ. ಈಗ ನೀವು ಎಲ್ಲಿ ಸಿಲಿಂಡರ್ ಸಂಪರ್ಕವನ್ನು ಬದಲಾಯಿಸಲು ಬಯಸುತ್ತೀರೋ, ನೀವು ಆ ಪ್ರದೇಶದ ಪಿನ್ ಕೋಡ್ ಸಂಖ್ಯೆಯನ್ನು ನಮೂದಿಸಬೇಕು.

    MORE
    GALLERIES

  • 89

    LPG Cylinder Transfer: ಹೀಗೆ ಆನ್​​ಲೈನಲ್ಲಿ ನಿಮ್ಮ ಎಲ್​ಪಿಜಿ ಕನೆಕ್ಷನ್​ ಅಡ್ರೆಸ್​ ಬದಲಾಯಿಸಿ!

    ಪಿನ್ ಕೋಡ್ ಸಂಖ್ಯೆಯನ್ನು ನಮೂದಿಸಿದ ನಂತರ ಸರ್ಚ್​ ಮಾಡಿ. ಈಗ ನೀವು ಲಭ್ಯವಿರುವ ವಿತರಕರ ಪಟ್ಟಿಯನ್ನು ನೋಡುತ್ತೀರಿ. =ತಮ್ಮ ಆಯ್ಕೆಯ ವಿತರಕರನ್ನು ಆಯ್ಕೆ ಮಾಡಬಹುದು. ನಂತರ ಸಿಲಿಂಡರ್ ಸಂಪರ್ಕವನ್ನು ಏಕೆ ಬದಲಾಯಿಸಲಾಗುತ್ತಿದೆ ಎಂಬುದನ್ನು ತಿಳಿಸಿ. ನಂತರ ಸಲ್ಲಿಸಿ ಕ್ಲಿಕ್​ ಮಾಡಿ.

    MORE
    GALLERIES

  • 99

    LPG Cylinder Transfer: ಹೀಗೆ ಆನ್​​ಲೈನಲ್ಲಿ ನಿಮ್ಮ ಎಲ್​ಪಿಜಿ ಕನೆಕ್ಷನ್​ ಅಡ್ರೆಸ್​ ಬದಲಾಯಿಸಿ!

    ಈಗ ನಿಮ್ಮ ಆನ್‌ಲೈನ್ ಗ್ಯಾಸ್ ಸಂಪರ್ಕ ವರ್ಗಾವಣೆ ವಿನಂತಿಯು ವಿತರಕರಿಗೆ ಹೋಗುತ್ತದೆ. ಅವರಿಂದ ನಿಮಗೆ ಕರೆ ಬರುತ್ತದೆ. ಗ್ಯಾಸ್ ಸಿಲಿಂಡರ್ ತೆಗೆದುಕೊಂಡು ಹೋಗಿ ಅವರಿಗೆ ಕೊಡಬೇಕು. ಈ ರೀತಿ ನೀವು ಆನ್‌ಲೈನ್‌ನಲ್ಲಿ ಗ್ಯಾಸ್ ಸಿಲಿಂಡರ್ ಸಂಪರ್ಕವನ್ನು ಸುಲಭವಾಗಿ ಬದಲಾಯಿಸಬಹುದು.

    MORE
    GALLERIES