1948ರಲ್ಲಿ ಅವರ ತಂದೆ ನೇವಲ್ ಟಾಟಾ ಮತ್ತು ತಾಯಿ ಸೂನಿ ಟಾಟಾ ಬೇರೆಯಾಗುತ್ತಾರೆ. ಆಗಿನಿಂದಲೂ ರತನ್ ಟಾಟಾ ಅವರು ಅಜ್ಜಿಯ ಆಶ್ರಯ ಪಡೆದುಕೊಂಡರು. 1961ರಲ್ಲಿ ಟಾಟಾ ಸ್ಟೀಲ್ನಲ್ಲಿ ಮೊದಲು ಕೆಲಸಕ್ಕೆ ಸೇರಿಕೊಂಡರು. ಅದಾದ ಬಳಿಕ 1991ರಲ್ಲಿ ಟಾಟಾ ಗ್ರೂಪ್ನ ಅಧ್ಯಕ್ಷರಾದರು. ಬರೋಬ್ಬರಿ 21 ವರ್ಷ ಅಂದರೆ 2012ರವರೆಗೆ ಟಾಟಾ ಗ್ರೂಪ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ.
ಅಮೆರಿಕದಲ್ಲಿ ಕಾರ್ಯನಿರ್ವಹಿಸುತ್ತಿದ್ದ ವೇಳೆ ರತನ್ ಟಾಟಾ(Ratan Tata) ಅವರು ಮುದ್ದಾದ ಹುಡುಗಿಯೊಬ್ಬಳಿಗೆ ಮನಸೋತಿದ್ದರು(Ratan Tata Marriage). ಇಬ್ಬರು ಮನೆಯವರನ್ನು ಒಪ್ಪಿಸಿ ಮದುವೆಯಾಗಬೇಕು ಅನ್ನೋ ವೇಳೆ ಭಾರತ ಮತ್ತು ಚೀನಾ ನಡುವೆ ಯುದ್ಧ ಶುರುವಾಗಿತ್ತು. ಅಮೆರಿಕದಿಂದ ಭಾರತಕ್ಕೆ ಮರಳುವ ಯೋಚನೆಯಲ್ಲಿದ್ದ ರತನ್ ಟಾಟಾ ಅವರು ಆ ಹುಡುಗಿಯನ್ನು ಮದುವೆಯಾಗಿ ಸ್ವದೇಶಕ್ಕೆ ತೆರಳಲು ಸಿದ್ಧವಾಗಿದ್ದರು.