ಚಿನ್ನದ ಬೆಲೆ ಯಾವಾಗಲೂ ಹಾವು-ಏಣಿ ಆಟದಂತೆ ಇಳಿಕೆ-ಏರಿಕೆಯಾಗುತ್ತಲೆ ಇರುತ್ತದೆ. ಇದೀಗ ಮತ್ತೊಮ್ಮೆ ಚಿನ್ನದ ಬೆಲೆ ಕುಸಿದಿದೆ. 10 ಗ್ರಾಂ ಚಿನ್ನದ ಬೆಲೆ 58 ಸಾವಿರಕ್ಕೆ ಸಿಗುತ್ತಿದೆ.
2/ 8
ಕಳೆದ 2 ದಿನಗಳಲ್ಲಿ ಚಿನ್ನದ ಬೆಲೆಯಲ್ಲಿ ಭಾರೀ ಇಳಿಕೆಯಾಗಿದೆ. ಸತತ ಮೂರನೇ ದಿನವಾದ ಇಂದು ಕೂಡ ದೆಹಲಿಯ ಬುಲಿಯನ್ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಕಡಿಮೆಯಾಗಿದೆ.
3/ 8
0 ಗ್ರಾಂ ಚಿನ್ನದ ರಾಷ್ಟ್ರ ರಾಜಧಾನಿಯ ಬುಲಿಯನ್ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ 10 ಗ್ರಾಂಗೆ 110 ರೂಪಾಯಿ ಇಳಿಕೆಯಾಗಿ 58,740 ರೂಪಾಯಿಗಳಿಗೆ ತಲುಪಿದೆ.
4/ 8
ಕಳೆದ ವಹಿವಾಟಿನಲ್ಲಿ, ಚಿನ್ನದ ಬೆಲೆ 10 ಗ್ರಾಂಗೆ 58,850 ರೂಪಾಯಿ ಇತ್ತು. ಇನ್ನೊಂದೆಡೆ ಬೆಳ್ಳಿಯ ದರದಲ್ಲಿ 350 ರೂಪಾಯಿ ಏರಿಕೆಯಾಗಿದ್ದು, ಕೆಜಿಗೆ 70,100 ರೂಪಾಯಿಗಳಿಗೆ ತಲುಪಿದೆ.
5/ 8
ಮಂಗಳವಾರ ಚಿನ್ನದ ಬೆಲೆಯಲ್ಲಿ 230 ರೂಪಾಯಿ ಇಳಿಕೆ ಕಂಡಿತ್ತು. ಮತ್ತೊಂದೆಡೆ, ಸೋಮವಾರ ದೆಹಲಿಯ ಬುಲಿಯನ್ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ 640 ರೂಪಾಯಿಗಳಷ್ಟು ಕುಸಿದಿದೆ.
6/ 8
ಇಂದೂ ಕೂಡ ಚಿನ್ನದ ಬೆಲೆ 110 ರೂಪಾಯಿಯಷ್ಟು ಕಡಿಮೆಯಾಗಿದೆ, ಆದ್ದರಿಂದ ಇದರ ಪ್ರಕಾರ ಕಳೆದ 3 ದಿನಗಳಲ್ಲಿ ಚಿನ್ನದ ಬೆಲೆ ಸುಮಾರು 980 ರೂಪಾಯಿಗಳ ಇಳಿಕೆ ಕಂಡಿದೆ.
7/ 8
ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರತಿ ಔನ್ಸ್ ಚಿನ್ನದ ಬೆಲೆ 1,962 ಡಾಲರ್‌ಗೆ ಕುಸಿದರೆ, ಬೆಳ್ಳಿಯ ಬೆಲೆ ಪ್ರತಿ ಔನ್ಸ್‌ಗೆ 23.14 ಡಾಲರ್‌ಗೆ ಏರಿಕೆಯಾಗಿದೆ.
8/ 8
ಅದರ ಹಿಂದಿನ ಮುಕ್ತಾಯದ ಬೆಲೆಗೆ ಹೋಲಿಸಿದರೆ ಕಾಮೆಕ್ಸ್’ನಲ್ಲಿ ಸ್ಪಾಟ್ ಚಿನ್ನದ ಬೆಲೆಗಳು 0.60 ಪ್ರತಿಶತದಷ್ಟು ಕುಸಿದು $ 1,962 ಕ್ಕೆ ತಲುಪಿದೆ. ನಿಮ್ಮ ಮನೆಯಲ್ಲಿ ಕುಳಿತು ಚಿನ್ನದ ಬೆಲೆಯನ್ನು ಸಹ ನೀವು ಪರಿಶೀಲಿಸಬಹುದು. ನೀವು 8955664433 ಗೆ ಮಿಸ್ಡ್ ಕಾಲ್ ನೀಡುವ ಮೂಲಕ ಬೆಲೆಯನ್ನು ಪರಿಶೀಲಿಸಬಹುದು.
First published:
18
Gold Price Down: ಮೂರೇ ದಿನದಲ್ಲಿ ಬಂಗಾರದ ಬೆಲೆ ಇಷ್ಟೊಂದು ಕುಸಿತ, ನೀವು ಊಹೆ ಮಾಡ್ಕೊಳ್ಳೋಕೂ ಆಗಲ್ಲ!