ಇಂದು ಚಿನ್ನದ ಬೆಲೆಯಲ್ಲಿ ಸಾಕಷ್ಟು ಏರಿಕೆಯಾಗಿದ್ದು ಹೂಡಿಕೆದಾರರಿಗೆ ಹಾಗೂ ಚಿನ್ನ ಕೊಳ್ಳುವವರಿಗೆ ಈದಿನ ಬ್ಯಾಡ್ ನ್ಯೂಸ್. ನಿನ್ನೆಗೆ ಹೋಲಿಸಿದರೆ ಇಂದು ಪ್ರತಿ ಗ್ರಾಂ ಚಿನ್ನದ ಬೆಲೆಯಲ್ಲಿ 50 ರೂ. ಗಳಷ್ಟು ಗಮನಾರ್ಹ ಏರಿಕೆಯಾಗಿದೆ. ನಿನ್ನೆಇದ್ದ ಪ್ರತಿ ಗ್ರಾಂ ಆಭರಣ ಚಿನ್ನದ ಬೆಲೆ ರೂ. 4,960 ಇಂದು ಐವತ್ತು ರೂ. ಗಳಷ್ಟು ಏರಿಕೆ ಕಂಡು ರೂ. 5,010 ಆಗಿದೆ. (ಸಾಂದರ್ಭಿಕ ಚಿತ್ರ)
ಹಿಂದಿನಿಂದಲೂ ಚಿನ್ನಕ್ಕೆ ಜಗತ್ತಿನುದ್ಯಂತ ಸಾಕಷ್ಟು ಬೇಡಿಕೆಯಿದೆ ಅದರಲ್ಲೂ ಭಾರತದಂತಹ ದೇಶದಲ್ಲಿ ಸಾಮಾನ್ಯ ಗೃಹಿಣಿಯೂ ಸಹ ಚಿನ್ನ ಕೊಳ್ಳಬಯಸುತ್ತಾರೆ. ಯಾವುದೇ ಶುಭ ಸಂದರ್ಭಗಳು ಚಿನ್ನ ಖರೀದಿಯಿಲ್ಲದೆ ಸಂಪನ್ನವಾಗಲ್ಲ. ಕಷ್ಟಕಾಲದಲ್ಲಿ ಕೈ ಹಿಡಿಯುವ ಸಾಧನ ಚಿನ್ನ ಎಂದು ಒಂದೆಡೆ ಪರಿಗಣಿಸಲಾಗಿರುವುದು ಒಂದೆಡೆಯಾದರೆ ಚಿನ್ನವು ಸಾಕಷ್ಟು ಸುರಕ್ಷಿತ ಹೂಡಿಕೆಯಾಗಿಯೂ ಗಮನಸೆಳೆಯುತ್ತದೆ ಇನ್ನೊಂದೆಡೆ. (ಸಾಂದರ್ಭಿಕ ಚಿತ್ರ)
ಇಂದು ಭಾರತೀಯ ಮಾರುಕಟ್ಟೆಯಲ್ಲಿ ಪ್ರತಿ 10 ಗ್ರಾಂ ಚಿನ್ನದ ಬೆಲೆ ರೂ. 50,100 ಆಗಿದೆ. ಬೆಂಗಳೂರು ಸೇರಿದಂತೆ ದೇಶದ ಮಹಾನಗರಗಳಲ್ಲಿ ಇಂದಿನ ಚಿನ್ನದ ಬೆಲೆ ಎಷ್ಟೆಷ್ಟಿದೆ ಎಂದು ನೋಡುವುದಾದರೆ, ಇಂದು ಬೆಂಗಳೂರಿನಲ್ಲಿ 22 ಕ್ಯಾರಟ್ ಬಂಗಾರದ ಬೆಲೆ (ಹತ್ತು ಗ್ರಾಂ) ರೂ. 50,150 ಆಗಿದ್ದರೆ ಚೆನ್ನೈ, ಮುಂಬೈ ಹಾಗೂ ಕೊಲ್ಕತ್ತಾ ನಗರಗಳಲ್ಲಿ ಕ್ರಮವಾಗಿ ಇದರ ಬೆಲೆ ರೂ. 51,180, ರೂ. 50,100, ರೂ. 50,100 ಆಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಇಂದು ಚಿನ್ನದ ಬೆಲೆ 50,250 ರೂ. ಆಗಿದೆ. (ಸಾಂದರ್ಭಿಕ ಚಿತ್ರ)
ಚಿನ್ನದಂತೆ ಬೆಳ್ಳಿ ಬೆಲೆಯಲ್ಲೂ ಇಂದು ಏರಿಕೆಯಾಗಿದೆ. ನಿನ್ನೆಗೆ ಭಾರತದ ಮಾರುಕಟ್ಟೆಯಲ್ಲಿ ಒಂದು ಕೆಜಿ ಬೆಳ್ಳಿ ಬೆಲೆ ರೂ. 69,300 ಇದ್ದದ್ದು ಇಂದು ರೂ. 70,100 ಕ್ಕೆ ಹೋಗಿ ತಲುಪಿದೆ. ಚಿನ್ನದಂತೆಯೇ ಬೆಳ್ಳಿ ಬೆಲೆಯಲ್ಲೂ ದರದ ವ್ಯತ್ಯಾಸ ಆಗುತ್ತಲೇ ಇರುತ್ತದೆ. ಹಾಗಾಗಿ ಇದು ಮುಖ್ಯವಾಗಿ ಅಂತಾರಾಷ್ಟ್ರೀಯ ಬೆಲೆಗಳ ಆಧಾರದ ಮೇಲೆ ಬೆಳ್ಳಿ ಬೆಲೆ ಅವಲಂಬಿತವಾಗಿರುತ್ತದೆ. ಅಲ್ಲದೆ ಡಾಲರ್ ವಿರುದ್ಧ ರೂಪಾಯಿಯ ಪ್ರದರ್ಶನವೂ ಸಹ ಚಿನ್ನ-ಬೆಳ್ಳಿ ದರಗಳ ಮೇಲೆ ಪರಿಣಾಮ ಬೀರುತ್ತಲೆ ಇರುತ್ತದೆ. ಭಾರತದಲ್ಲಿ ಬೆಳ್ಳಿಯೂ ಸಹ ಚಿನ್ನದಂತೆ ಸಾಕಷ್ಟು ಬೇಡಿಕೆ ಹೊಂದಿದ್ದು ಸುರಕ್ಷಿತ ಹೂಡಿಕೆ ಎಂದು ಪರಿಗಣಿಸಲಾಗುತ್ತದೆ. (ಸಾಂದರ್ಭಿಕ ಚಿತ್ರ)
ಇನ್ನು ಬೆಂಗಳೂರು ನಗರ ನೋಡುವುದಾದರೆ ಬೆಳ್ಳಿ ಬೆಲೆಯಲ್ಲಿ ಗಮನಾರ್ಹ ಏರಿಕೆಯಾಗಿದೆ. ನಗರದಲ್ಲಿ ಇಂದು ಪ್ರತಿ 10gm, 100gm, 1000gm (1ಕೆಜಿ) ಬೆಳ್ಳಿ ಬೆಲೆಗಳು ಕ್ರಮವಾಗಿ ರೂ. 747, ರೂ. 7,470 ಹಾಗೂ ರೂ. 74,700 ಗಳಾಗಿವೆ. ಮಿಕ್ಕಂತೆ ದೇಶದ ಇತರೆ ಮಹಾನಗರಗಳಾದ ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿ ದರ ರೂ. 74,700 ಆಗಿದ್ದರೆ, ದೆಹಲಿಯಲ್ಲಿ ರೂ. 70,100, ಮುಂಬೈನಲ್ಲಿ ರೂ. 70,100 ಹಾಗೂ ಕೊಲ್ಕತ್ತದಲ್ಲೂ ರೂ. 70,100 ಗಳಾಗಿದೆ. (ಸಾಂದರ್ಭಿಕ ಚಿತ್ರ)