ಚಿನ್ನದ ಏರುತ್ತಿರುವ ಮ್ಯಾರಥಾನ್ ಓಟ ಹಾಗೆ ಮುಂದುವರೆದಂತೆ ಕಾಣುತ್ತಿದೆ. ನಿನ್ನೆಯಷ್ಟೇ ಅಲ್ಪ ಏರಿಕೆ ಕಂಡಿದ್ದ ಚಿನ್ನ ಇಂದು ಹೈ ಜಂಪ್ ಹಾಕಿದ್ದು ಪ್ರತಿ ಗ್ರಾಂ ಆಭರಣ ಚಿನ್ನದ ಬೆಲೆ ರೂ. 19 ರಷ್ಟು ಹೆಚ್ಚಾಗಿದೆ. ಕಳೆದ ಎರಡು ವಾರಗಳನ್ನು ಅವಲೋಕಿಸಿದರೆ ಚಿನ್ನದ ಬೆಲೆಯಲ್ಲಿ ಏರಿಳಿತ ಕಂಡುಬ್ಬರುತ್ತಿದೆಯಾದರೂ ಹಿಂದೆಂದಿಗಿಂತ ಚಿನ್ನ ದುಬಾರಿಯೇ ಆಗಿದೆ. (ಸಾಂದರ್ಭಿಕ ಚಿತ್ರ)
ಎರಡು ದಿನಗಳ ಹಿಂದಷ್ಟೆ ಕುಸಿತ ಕಂಡಿದ್ದ ಚಿನ್ನದ ಬೆಲೆ ತದನಂತರ ಏರಿಕೆಯ ಪಥದಲ್ಲೇ ಸಾಗುತ್ತಿದೆ. ಇದೀಗ ನಿನ್ನೆಗೆ ಹೋಲಿಸಿದರೆ ಇಂದು ಚಿನ್ನದ ಬೆಲೆಯಲ್ಲಿ ಪ್ರತಿ ಗ್ರಾಂಗೆ 19 ರೂ. ಏರಿಕೆಯಾಗಿದೆ. ನಿನ್ನೆ ಪ್ರತಿ ಗ್ರಾಂಗೆ ರೂ. 5,201 ಇದ್ದ ಆಭರಣ ಚಿನ್ನದ ಬೆಲೆ ಇಂದು ಮಾರುಕಟ್ಟೆಯಲ್ಲಿ ರೂ. 5,220 ಕ್ಕೆ ಹೋಗಿ ತಲುಪಿದೆ. ಅಂತೆಯೇ ಪ್ರತಿ ಹತ್ತು ಗ್ರಾಂ ಆಭರಣ ಚಿನ್ನದ ಬೆಲೆ ಇಂದು ರೂ. 52,200 ಆಗಿದೆ. (ಸಾಂದರ್ಭಿಕ ಚಿತ್ರ)
ನಿನ್ನೆಗೆ ಹೋಲಿಸಿದರೆ ಇಂದು ಬೆಂಗಳೂರಿನಲ್ಲಿ 22 ಕ್ಯಾರಟ್ ಬಂಗಾರದ ಬೆಲೆ ಯಲ್ಲಿ ಏರಿಕೆಯಾಗಿದ್ದು ಪ್ರತಿ ಹತ್ತು ಗ್ರಾಂ 22 ಕಾರಟ್ ಚಿನ್ನದ ದರ ರೂ. 52,250 ಆಗಿದ್ದರೆ, ಚೆನ್ನೈ, ಮುಂಬೈ ಹಾಗೂ ಕೊಲ್ಕತ್ತಾ ನಗರಗಳಲ್ಲಿ ಕ್ರಮವಾಗಿ ಇದರ ಬೆಲೆ ರೂ. 53,170, ರೂ. 52,200, ರೂ. 52,200 ಆಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಇಂದು ಚಿನ್ನದ ಬೆಲೆ 52,350 ರೂ. ಆಗಿದೆ. (ಸಾಂದರ್ಭಿಕ ಚಿತ್ರ)
ಬೆಂಗಳೂರು ನಗರ ನೋಡುವುದಾದರೆ ಇಂದು ನಗರದಲ್ಲಿ ಪ್ರತಿ 10gm, 100gm, 1000gm (1ಕೆಜಿ) ಬೆಳ್ಳಿ ಬೆಲೆಗಳು ಕ್ರಮವಾಗಿ ರೂ. 758, ರೂ. 7,580 ಹಾಗೂ ರೂ. 75,800 ಗಳಾಗಿವೆ. ಮಿಕ್ಕಂತೆ ದೇಶದ ಇತರೆ ಮಹಾನಗರಗಳಾದ ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿ ದರ ರೂ. 75,800 ಆಗಿದ್ದರೆ, ದೆಹಲಿಯಲ್ಲಿ ರೂ. 72,900, ಮುಂಬೈನಲ್ಲಿ ರೂ. 72,900 ಹಾಗೂ ಕೊಲ್ಕತ್ತದಲ್ಲೂ ರೂ. 72,900 ಗಳಾಗಿದೆ. (ಸಾಂದರ್ಭಿಕ ಚಿತ್ರ)