ಭಾರತದಲ್ಲಿ ಜನವರಿಯಿಂದ ಏಪ್ರಿಲ್ವರೆಗೂ ಹೆಚ್ಚಿನ ಶುಭಸಮಾರಂಭಗಳು ನಡೆಯುತ್ತವೆ. ಭಾರತೀಯರ ಕಾರ್ಯಕ್ರಮಗಳು ಚಿನ್ನ ಕೊಳ್ಳದೇ ಪೂರ್ತಿ ಆಗೋದೇ ಇಲ್ಲ. ಹೀಗೆ ಬೇಡಿಕೆ ಈ ಸಮಯದಲ್ಲಿ ಹೆಚ್ಚಿದ್ದು, ಅಂತೆಯೇ ಬೆಲೆಯೂ ಹೆಚ್ಚಾಗುತ್ತಿದೆ. ನಿನ್ನೆ ಪ್ರತಿ ಗ್ರಾಂಗೆ ರೂ. 5,130 ಇದ್ದ ಚಿನ್ನದ ಬೆಲೆ ಇಂದು ಮೂವತ್ತು ರೂಪಾಯಿ ಹೆಚ್ಚಿಸಿಕೊಳ್ಳುವ ಮೂಲಕ 5,160 ರೂಪಾಯಿ ಆಗಿದೆ. (ಸಾಂದರ್ಭಿಕ ಚಿತ್ರ)
ಚಿನ್ನವು ಜಗತ್ತಿನಾದ್ಯಂತ ಎಲ್ಲರಿಗೂ ಆಕರ್ಷಣೆಯ ವಸ್ತುವಾಗಿದೆ. ಕಾರಣ, ಒಂದೆಡೆ ಅದನ್ನು ಅತಿ ಸುರಕ್ಷಿತ ಹೂಡಿಕೆ ಎಂದು ಪರಿಗಣಿಸಲ್ಪಟ್ಟಿದ್ದರೆ ಇನ್ನೊಂದೆಡೆ ಆರ್ಥಿಕವಾಗಿ ಕಷ್ಟಕಾಲ ಬಂದಾಗ ವೈಯಕ್ತಿಕವಾಗಿ ಜನರ ನೆರವಿಗೆ ಚಿನ್ನವೇ ಬರುತ್ತದೆ ಎನ್ನುವುದರಲ್ಲಿ ಸಂಶಯವೇ ಇಲ್ಲ. ಮಾರುಕಟ್ಟೆಯಲ್ಲಿ ಇಂದಿನ ಬಂಗಾರದ ದರಗಳ ಕುರಿತು ಒಂದು ನೋಟ ಬೀರೋಣ. (ಸಾಂದರ್ಭಿಕ ಚಿತ್ರ)