Gold Silver Price Today: ಬಜೆಟ್ ದಿನವೇ ಕುಸಿದ ಚಿನ್ನದ ದರ! ಏರಿದ ಬೆಳ್ಳಿ ಬೆಲೆ

Union Budget On Gold Silver Price: ಇಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್ ಮಂಡನೆ ಮಾಡಲಿದ್ದಾರೆ. ಈ ದಿನವೇ ಚಿನ್ನ ಮತ್ತು ಬೆಳ್ಳಿ ದರದಲ್ಲಿ ಗಮನಾರ್ಹ ಬದಲಾವಣೆಯಾಗಿದೆ. ಆ ಮಾಹಿತಿ ಇಲ್ಲಿದೆ ನೋಡಿ

First published:

  • 110

    Gold Silver Price Today: ಬಜೆಟ್ ದಿನವೇ ಕುಸಿದ ಚಿನ್ನದ ದರ! ಏರಿದ ಬೆಳ್ಳಿ ಬೆಲೆ

    ಕಳೆದ ಎರಡು ವಾರಗಳನ್ನು ಗಮನಿಸಿದರೆ ಚಿನ್ನದ ಬೆಲೆಯಲ್ಲಿ ಏರಿಕೆಯೇ ಆಗಿತ್ತು ಹಾಗೂ ಕಳೆದ ಎರಡು ದಿನಗಳಿಂದ ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನ ತನ್ನ ಬೆಲೆಯನ್ನು ಸ್ಥಿರವಾಗಿ ಕಾಯ್ದುಕೊಂಡಿತ್ತು. ಆದರೆ ಈ ದಿನ ಆಭರಣ ಪ್ರಿಯರಿಗೆ ಒಳ್ಳೆಯ ದಿನ ಎನ್ನಬಹುದಾಗಿದ್ದು ನಿನ್ನೆಗೆ ಹೋಲಿಸಿದರೆ ಚಿನ್ನದ ಬೆಲೆಯಲ್ಲಿ ಇಂದು ಕುಸಿತವಾಗಿದೆ.

    MORE
    GALLERIES

  • 210

    Gold Silver Price Today: ಬಜೆಟ್ ದಿನವೇ ಕುಸಿದ ಚಿನ್ನದ ದರ! ಏರಿದ ಬೆಳ್ಳಿ ಬೆಲೆ

    ನಿನ್ನೆಗೆ 22 ಕ್ಯಾರಟ್ ಪ್ರತಿ ಗ್ರಾಂ ಚಿನ್ನದ ಬೆಲೆ ರೂ. 5,265 ಇದ್ದದ್ದು ಇಂದು ಪ್ರತಿ ಗ್ರಾಂಗೆ ರೂ. 5,250ಕ್ಕೆ ಇಳಿದಿದೆ. ಈ ಮೂಲಕ ಆಭರಣ ಕೊಳ್ಳಬಯಸುವವರಿಗೆ ಈ ದಿನ ಉತ್ತಮವಾಗಿದೆ ಎನ್ನಬಹುದಾಗಿದೆ. ಚಿನ್ನ ಅಪರೂಪದ ಹಾಗೂ ಪ್ರಾಚೀನ ಕಾಲದಿಂದಲೂ ಅಪಾರ ಬೇಡಿಕೆಯುಳ್ಳ ವಸ್ತುವಾಗಿದೆ ಎನ್ನುವುದರಲ್ಲಿ ಸಂಶಯವಿಲ್ಲ.

    MORE
    GALLERIES

  • 310

    Gold Silver Price Today: ಬಜೆಟ್ ದಿನವೇ ಕುಸಿದ ಚಿನ್ನದ ದರ! ಏರಿದ ಬೆಳ್ಳಿ ಬೆಲೆ

    ಆದರೆ, ಚಿನ್ನದ ಬೆಲೆ ಎಂಬುದು ಅಂತಾರಾಷ್ಟ್ರೀಯವಾಗಿ ಒಂದೇ ತೆರನಾಗಿರುವುದಿಲ್ಲ, ಹಲವಾರು ಜಾಗತಿಕ ಕಾರಣಗಳಿಂದಾಗಿ ಚಿನ್ನದ ಬೆಲೆಯಲ್ಲಿ ಏರಿಳಿತವಾಗುತ್ತಿರುತ್ತದೆ. ಈ ಕಾರಣದಿಂದಾಗಿಯೇ ಚಿನ್ನದ ಬೆಲೆಯ ಪ್ರತಿನಿತ್ಯದ ಅಪ್ಡೇಟ್ ಹೂಡಿಕೆದಾರರು ಹಾಗೂ ಗ್ರಾಹಕರಿಗೆ ಸಾಕಷ್ಟು ಉಪಯುಕ್ತವಾಗಿರುತ್ತದೆ.

    MORE
    GALLERIES

  • 410

    Gold Silver Price Today: ಬಜೆಟ್ ದಿನವೇ ಕುಸಿದ ಚಿನ್ನದ ದರ! ಏರಿದ ಬೆಳ್ಳಿ ಬೆಲೆ

    ನಿನ್ನೆಗೆ ಹೋಲಿಸಿದರೆ ಇಂದು ಬೆಂಗಳೂರಿನಲ್ಲಿ ಪ್ರತಿ ಹತ್ತು ಗ್ರಾಂ 22 ಕ್ಯಾರಟ್ ಬಂಗಾರದ ಬೆಲೆ ರೂ. 52,550 ಆಗಿದ್ದರೆ, ಚೆನ್ನೈ, ಮುಂಬೈ ಹಾಗೂ ಕೊಲ್ಕತ್ತಾ ನಗರಗಳಲ್ಲಿ ಕ್ರಮವಾಗಿ ಇದರ ಬೆಲೆ ರೂ. 53,380, ರೂ. 52,500, ರೂ. 52,500 ಆಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಇಂದು ಚಿನ್ನದ ಬೆಲೆ 52,650 ರೂ. ಆಗಿದೆ.

    MORE
    GALLERIES

  • 510

    Gold Silver Price Today: ಬಜೆಟ್ ದಿನವೇ ಕುಸಿದ ಚಿನ್ನದ ದರ! ಏರಿದ ಬೆಳ್ಳಿ ಬೆಲೆ

    ಮಾರುಕಟ್ಟೆಯಲ್ಲಿ ಇಂದಿನ ಬಂಗಾರದ ದರಗಳ ಕುರಿತು ಒಂದು ನೋಟ ಬೀರೋಣ. ಒಂದು ಗ್ರಾಂ (1GM) 22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 5,250 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 5,727

    MORE
    GALLERIES

  • 610

    Gold Silver Price Today: ಬಜೆಟ್ ದಿನವೇ ಕುಸಿದ ಚಿನ್ನದ ದರ! ಏರಿದ ಬೆಳ್ಳಿ ಬೆಲೆ

    ಎಂಟು ಗ್ರಾಂ (8GM) 22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 42,000 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 45,816 ಹತ್ತು ಗ್ರಾಂ (10GM) 22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 52,500 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 57,270

    MORE
    GALLERIES

  • 710

    Gold Silver Price Today: ಬಜೆಟ್ ದಿನವೇ ಕುಸಿದ ಚಿನ್ನದ ದರ! ಏರಿದ ಬೆಳ್ಳಿ ಬೆಲೆ

    ನೂರು ಗ್ರಾಂ (100GM) 22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 5,25,000 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 5,72,700

    MORE
    GALLERIES

  • 810

    Gold Silver Price Today: ಬಜೆಟ್ ದಿನವೇ ಕುಸಿದ ಚಿನ್ನದ ದರ! ಏರಿದ ಬೆಳ್ಳಿ ಬೆಲೆ

    ಒಂದೆಡೆ ಇಂದು ಚಿನ್ನದ ಬೆಲೆಯಲ್ಲಿ ಕುಸಿತವಾಗಿದ್ದರೆ ಇನ್ನೊಂದೆಡೆ ಬೆಳ್ಳಿ ದರದಲ್ಲೂ ಇಳಿಕೆಯಾಗಿದೆ. ಮಾರುಕಟ್ಟೆಯಲ್ಲಿ ತನ್ನದೆ ಆದ ಬೇಡಿಕೆಯನ್ನು ಹೊಂದಿರುವ ಬೆಳ್ಳಿಯ ಒಂದು ಕೆಜಿ ದರವು ಇಂದು ರೂ. 72,300 ಆಗಿದೆ.

    MORE
    GALLERIES

  • 910

    Gold Silver Price Today: ಬಜೆಟ್ ದಿನವೇ ಕುಸಿದ ಚಿನ್ನದ ದರ! ಏರಿದ ಬೆಳ್ಳಿ ಬೆಲೆ

    ದೇಶದ ಮಹಾನಗರಗಳಲ್ಲಿ ಇಂದಿನ ಬೆಳ್ಳಿ ದರಗಳು ಬೆಂಗಳೂರು ನಗರ ನೋಡುವುದಾದರೆ ಇಂದು ನಗರದಲ್ಲಿ ಬೆಳ್ಳಿ ಬೆಲೆಯಲ್ಲಿ ಏರಿಕೆಯಾಗಿದೆ. ಪ್ರತಿ 10gm, 100gm, 1000gm (1ಕೆಜಿ) ಬೆಳ್ಳಿ ಬೆಲೆಗಳು ಕ್ರಮವಾಗಿ ರೂ. 745, ರೂ. 7,450 ಹಾಗೂ ರೂ. 74,500 ಗಳಾಗಿವೆ.

    MORE
    GALLERIES

  • 1010

    Gold Silver Price Today: ಬಜೆಟ್ ದಿನವೇ ಕುಸಿದ ಚಿನ್ನದ ದರ! ಏರಿದ ಬೆಳ್ಳಿ ಬೆಲೆ

    ಮಿಕ್ಕಂತೆ ದೇಶದ ಇತರೆ ಮಹಾನಗರಗಳಾದ ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿ ದರ ರೂ. 74,500 ಆಗಿದ್ದರೆ, ದೆಹಲಿಯಲ್ಲಿ ರೂ. 72,300, ಮುಂಬೈನಲ್ಲಿ ರೂ. 72,300 ಹಾಗೂ ಕೊಲ್ಕತ್ತದಲ್ಲೂ ರೂ. 72,300 ಗಳಾಗಿದೆ.

    MORE
    GALLERIES