ಬಂಗಾರ ಎಂಬುದು ಆಕರ್ಷಕ ಹೂಡಿಕೆಯ ಸಾಧನ ಹಾಗೂ ಪ್ರತಿಯೊಬ್ಬ ಭಾರತೀಯನ ಅದರಲ್ಲೂ ವಿಶೇಷವಾಗಿ ಮಹಿಳೆಯರ ನೆಚ್ಚಿನ ಲೋಹ. ಹಾಗಾಗಿ, ಭಾರತೀಯ ಮಾರುಕಟ್ಟೆಯಲ್ಲಿ ಸದಾ ಬಂಗಾರಕ್ಕೆ ಡಿಮ್ಯಾಂಡ್ ಇದ್ದೆ ಇರುತ್ತದೆ ಅಂದರೆ ತಪ್ಪಾಗಲಿಕ್ಕಿಲ್ಲ. ಬಹಳಷ್ಟು ಹೂಡಿಕೆದಾರರ ಕಣ್ಣು ನಿತ್ಯ ಬದಲಾವಣೆಗೆ ಒಳಪಡುವ ಈ ಹಳದಿ ಲೋಹದ ಮೇಲೆ ಇದ್ದೆ ಇರುತ್ತದೆ. ಇಂದು ಭಾರತೀಯ ಮಾರುಕಟ್ಟೆಯಲ್ಲಿ ಪ್ರತಿ 10 ಗ್ರಾಂ ಚಿನ್ನದ ಬೆಲೆ ರೂ. 49,500 ಆಗಿದೆ. (ಸಾಂದರ್ಭಿಕ ಚಿತ್ರ)
ದೇಶದ ಹಲವು ಭಾಗಗಳಲ್ಲಿ ನಿತ್ಯ ಚಿನ್ನದ ಬೆಲೆಗಳಲ್ಲಿ ಸಣ್ಣಪುಟ್ಟ ವ್ಯತ್ಯಾಸಗಳು ಸಹಜ. ಅಂತೆಯೇ ದೇಶದ ವಿವಿಧ ಭಾಗಗಳಲ್ಲೂ ಸಹ ಇದರ ಬೆಲೆಯಲ್ಲಿ ವ್ಯತ್ಯಾಸಗಳನ್ನು ಗಮನಿಸಬಹುದು. ಹಾಗಾಗಿಯೇ ಸಾಕಷ್ಟು ಹೂಡಿಕೆದಾರರು ಹಾಗೂ ಆಭರಣಗಳನ್ನು ಕೊಳ್ಳಬಯಸುವವರು ಇದರ ಬೆಲೆಯಿಂದ ಪ್ರಭಾವಿತರಾಗುತ್ತಿರುತ್ತಾರೆ ಅಂದರೆ ತಪ್ಪಿಲ್ಲ. ಅಂತೆಯೇ ಆಯಾ ಪ್ರದೇಶಗಳ ಗ್ರಾಹಕರ ಅನುಕೂಲಕ್ಕಾಗಿ ಈ ನಿತ್ಯದ ಅಪ್ಡೇಟ್ ಬಲು ಸಹಾಯಕ ಎನ್ನಬಹುದು. (ಸಾಂದರ್ಭಿಕ ಚಿತ್ರ)
ಇನ್ನು ದೇಶದ ಮಹಾನಗರಗಳನ್ನು ನೋಡುವುದಾದರೆ ಬಂಗಾರದ ಬೆಲೆಯಲ್ಲಿ ವ್ಯತ್ಯಾಸಗಳಿರುವುದನ್ನು ಸಾಮಾನ್ಯವಾಗಿ ಗಮನಿಸಭುದು. ಇಂದು ಬೆಂಗಳೂರಿನಲ್ಲಿ 22 ಕ್ಯಾರಟ್ ಬಂಗಾರದ ಬೆಲೆ (ಹತ್ತು ಗ್ರಾಂ) ರೂ. 49,550 ಆಗಿದ್ದರೆ ಚೆನ್ನೈ, ಮುಂಬೈ ಹಾಗೂ ಕೊಲ್ಕತ್ತಾ ನಗರಗಳಲ್ಲಿ ಕ್ರಮವಾಗಿ ಇದರ ಬೆಲೆ ರೂ. 50,160, ರೂ. 49,500, ರೂ. 49,500 ಆಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಇಂದು ಚಿನ್ನದ ಬೆಲೆ 49,650 ರೂ. ಆಗಿದೆ. (ಸಾಂದರ್ಭಿಕ ಚಿತ್ರ)
ನಿನ್ನೆಗೆ ಹೋಲಿಸಿದರೆ ಇಂದು ಬೆಳ್ಳಿ ಬೆಲೆಯಲ್ಲಿ ಇನ್ನಷ್ಟು ಅಲ್ಪ ಕುಸಿತವಾಗಿರುವುದನ್ನು ಗಮನಿಸಬಹುದು. ಚಿನ್ನದಂತೆಯೇ ಬೆಳ್ಳಿ ಬೆಲೆಯಲ್ಲಿ ಏರಿಳಿತಗಳಾಗುವುದು ಸಾಮಾನ್ಯ. ಇಂದು ಮಾರುಕಟ್ಟೆಯಲ್ಲಿ ಒಂದು ಕೆಜಿ ಬೆಳ್ಳಿಯ ಬೆಲೆ ರೂ. 65,500 ಗಳಷ್ಟಿದೆ. ಈ ತಿಂಗಳಿನಲ್ಲಿ ಬೆಳ್ಳಿ ತನ್ನ ಗರಿಷ್ಠ ಹಾಗೂ ಕನಿಷ್ಠ ಬೆಲೆಗಳನ್ನು ಯಾವ ದಿನಗಳಲ್ಲಿ ಕಾಣಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ. ಅಂದಹಾಗೆ ಕಳೆದ ತಿಂಗಳಿನಲ್ಲಿ ಬೆಳ್ಳಿಯ ಗರಿಷ್ಠ ಬೆಲೆ ರೂ. 62,700 ರೂ. ಆಗಿದ್ದರೆ ಕನಿಷ್ಠ ಬೆಲೆ ರೂ. 58,100 ಹೊಂದಿತ್ತು. (ಸಾಂದರ್ಭಿಕ ಚಿತ್ರ)
ಇನ್ನು ರಾಜಧಾನಿ ಬೆಂಗಳೂರು ನಗರ ನೋಡುವುದಾದರೆ ಬೆಳ್ಳಿ ಬೆಲೆಯಲ್ಲಿ ನಿನ್ನೆಗಿಂತ ಸ್ವಲ್ಪ ಏರಿಕೆಯಾಗಿದೆ. ನಗರದಲ್ಲಿ ಇಂದು ಪ್ರತಿ 10gm, 100gm, 1000gm (1ಕೆಜಿ) ಬೆಳ್ಳಿ ಬೆಲೆಗಳು ಕ್ರಮವಾಗಿ ರೂ. 710, ರೂ. 7,100 ಹಾಗೂ ರೂ. 71,000 ಗಳಾಗಿವೆ. ಮಿಕ್ಕಂತೆ ದೇಶದ ಇತರೆ ಮಹಾನಗರಗಳಾದ ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿ ದರ ರೂ. 71,000 ಆಗಿದ್ದರೆ, ದೆಹಲಿಯಲ್ಲಿ ರೂ. 65,500, ಮುಂಬೈನಲ್ಲಿ ರೂ. 65,500 ಹಾಗೂ ಕೊಲ್ಕತ್ತದಲ್ಲೂ ರೂ. 65,500 ಗಳಾಗಿದೆ. (ಸಾಂದರ್ಭಿಕ ಚಿತ್ರ)