Gold Price: ಚಿನ್ನದ ಬೆಲೆ ಮತ್ತಷ್ಟು ಕಡಿಮೆಯಾಗುತ್ತಂತೆ, ಈಗಾಗಲೇ 3 ಸಾವಿರ ಇಳಿಕೆಯಾಗಿದೆ!

Gold Price Forecast: ಚಿನ್ನದ ಬೆಲೆ ಮತ್ತಷ್ಟು ಕುಸಿಯಲಿದ್ಯಾ? ಇಲ್ಲ ಇನ್ನೂ ಬೆಲೆ ಜಾಸ್ತಿಯಾಗುತ್ತಾ? ಯುಎಸ್ ಡಾಲರ್, ಫೆಡ್ ದರ ಹೆಚ್ಚಳ ಮತ್ತು ಬಾಂಡ್ ಇಳುವರಿಗಳಂತಹ ಅಂಶಗಳು ಚಿನ್ನದ ದಿಕ್ಕನ್ನು ಬದಲಾಯಿಸುತ್ತಿವೆ. ಮುಂದಿನ ದಿನಗಳಲ್ಲಿ ಗೋಲ್ಡ್​ ರೇಟ್​ ಮತ್ತಷ್ಟು ಕಡಿಮೆಯಾಗಲಿದೆ ಎಂದು ಹೇಳಲಾಗುತ್ತಿದೆ.

First published:

  • 110

    Gold Price: ಚಿನ್ನದ ಬೆಲೆ ಮತ್ತಷ್ಟು ಕಡಿಮೆಯಾಗುತ್ತಂತೆ, ಈಗಾಗಲೇ 3 ಸಾವಿರ ಇಳಿಕೆಯಾಗಿದೆ!

    Gold Rate Prediction: ಯಾವ ದಿನದಂದು ಚಿನ್ನದ ಬೆಲೆಗಳು ಹೇಗೆ ಬದಲಾಗುತ್ತೆ ಅಂತ ಹೇಳೋದು ಕಷ್ಟ. ಯಾಕಂದ್ರೆ ಜಾಗತಿಕ ಮಾರುಕಟ್ಟೆಯ ದರಗಳಿಗೆ ಅನುಗುಣವಾಗಿ ನಮ್ಮ ದೇಶದ ಚಿನ್ನದ ಬೆಲೆಗಳೂ ಬದಲಾಗುತ್ತವೆ. ಅಲ್ಲದೆ, ಇಳುವರಿ ಮೇಲೆ ಪರಿಣಾಮ ಬೀರುವ ಹಲವು ಅಂಶಗಳಿವೆ. ಹೀಗಾಗಿ ಚಿನ್ನದ ಬೆಲೆ ಸ್ಥಿರವಾಗಿರುವುದಿಲ್ಲ.

    MORE
    GALLERIES

  • 210

    Gold Price: ಚಿನ್ನದ ಬೆಲೆ ಮತ್ತಷ್ಟು ಕಡಿಮೆಯಾಗುತ್ತಂತೆ, ಈಗಾಗಲೇ 3 ಸಾವಿರ ಇಳಿಕೆಯಾಗಿದೆ!

    ಕಳೆದ ತಿಂಗಳಿಗೆ ಹೋಲಿಸಿದರೆ ಈಗ ಚಿನ್ನದ ಬೆಲೆ ಕಡಿಮೆಯಾಗಿದೆ ಎನ್ನಬಹುದು. ಆದರೆ ಕಳೆದ ಮೂರು ದಿನಗಳಿಂದ ಮತ್ತೆ ಟ್ರೆಂಡ್ ಬದಲಾಗಿದೆ. ಕಚ್ಚಾ ತೈಲ ದರ ಮತ್ತೆ ಹೆಚ್ಚುತ್ತಿದೆ. ಚಿನ್ನದ ಬೆಲೆ ಇದೇ ರೀತಿ ಮುಂದುವರಿಯುತ್ತಾ? ಇಲ್ಲ ಯೂಟನ್​ ತೆಗೆದುಕೊಳ್ಳುತ್ತಾ? ಕಾದು ನೋಡಬೇಕಿದೆ.

    MORE
    GALLERIES

  • 310

    Gold Price: ಚಿನ್ನದ ಬೆಲೆ ಮತ್ತಷ್ಟು ಕಡಿಮೆಯಾಗುತ್ತಂತೆ, ಈಗಾಗಲೇ 3 ಸಾವಿರ ಇಳಿಕೆಯಾಗಿದೆ!

    ಮಾರುಕಟ್ಟೆ ತಜ್ಞರ ಪ್ರಕಾರ, ಯುಎಸ್ ಫೆಡರಲ್ ರಿಸರ್ವ್ ಮುಂದಿನ ದಿನಗಳಲ್ಲಿ ಫೆಡ್ ದರವನ್ನು ಹೆಚ್ಚಿಸಬಹುದು. ಇದು ಒಂದು ವೇಳೆ ಆದರೆ ಚಿನ್ನದ ಬೆಲೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.

    MORE
    GALLERIES

  • 410

    Gold Price: ಚಿನ್ನದ ಬೆಲೆ ಮತ್ತಷ್ಟು ಕಡಿಮೆಯಾಗುತ್ತಂತೆ, ಈಗಾಗಲೇ 3 ಸಾವಿರ ಇಳಿಕೆಯಾಗಿದೆ!

    ಆರ್ಥಿಕ ಹಿಂಜರಿತದ ಭಯವನ್ನು ಕಡಿಮೆ ಮಾಡುವುದು, ಜಾಗತಿಕ ಆರ್ಥಿಕತೆಗಳ ಚೇತರಿಕೆ ಮತ್ತು ಹೆಚ್ಚಿನ ಯುಎಸ್ ಬಾಂಡ್ ಇಳುವರಿಗಳಂತಹ ಅಂಶಗಳು ಚಿನ್ನದ ಬೆಲೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತಿವೆ ಎಂದು ತಜ್ಞರು ಹೇಳುತ್ತಾರೆ. ಯುಎಸ್ ಡಾಲರ್ ಮೂರು ತಿಂಗಳ ಗರಿಷ್ಠ ಮಟ್ಟವನ್ನು ತಲುಪಿದೆ ಎಂದು ಸಹ ಸ್ಮರಿಸಲಾಗುತ್ತದೆ.

    MORE
    GALLERIES

  • 510

    Gold Price: ಚಿನ್ನದ ಬೆಲೆ ಮತ್ತಷ್ಟು ಕಡಿಮೆಯಾಗುತ್ತಂತೆ, ಈಗಾಗಲೇ 3 ಸಾವಿರ ಇಳಿಕೆಯಾಗಿದೆ!

    ತಜ್ಞರ ಪ್ರಕಾರ, ಚಿನ್ನದ ಬೆಲೆಗಳು ಕಳೆದ ತಿಂಗಳು 9 ತಿಂಗಳ ಗರಿಷ್ಠ 1960 ಡಾಲರ್‌ಗಳನ್ನು ಮುಟ್ಟಿವೆ. ಆದರೆ ನಂತರದಲ್ಲಿ ಪಸಿಡಿ ದರ ಶೇ.7ಕ್ಕೂ ಹೆಚ್ಚು ಕಡಿಮೆಯಾಗಿದೆ ಎಂದರು. ದೇಶಿಯ ಮಾರುಕಟ್ಟೆಯಲ್ಲೂ ಇದೇ ಟ್ರೆಂಡ್ ಮುಂದುವರೆದಿದೆ ಎನ್ನಲಾಗಿದೆ.

    MORE
    GALLERIES

  • 610

    Gold Price: ಚಿನ್ನದ ಬೆಲೆ ಮತ್ತಷ್ಟು ಕಡಿಮೆಯಾಗುತ್ತಂತೆ, ಈಗಾಗಲೇ 3 ಸಾವಿರ ಇಳಿಕೆಯಾಗಿದೆ!

    ಮಲ್ಟಿ ಕಮಾಡಿಟಿ ಎಕ್ಸ್‌ಚೇಂಜ್ (ಎಂಸಿಎಕ್ಸ್) ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ರೂ. 55 ಸಾವಿರದ ಕೆಳಗೆ ಬಂದಿದೆ. ಸಾರ್ವಕಾಲಿಕ ಗರಿಷ್ಠ ರೂ. 58,826 ರಿಂದ ಚಿನ್ನದ ಬೆಲೆ ಇಳಿಕೆಯಾಗಿದೆ.

    MORE
    GALLERIES

  • 710

    Gold Price: ಚಿನ್ನದ ಬೆಲೆ ಮತ್ತಷ್ಟು ಕಡಿಮೆಯಾಗುತ್ತಂತೆ, ಈಗಾಗಲೇ 3 ಸಾವಿರ ಇಳಿಕೆಯಾಗಿದೆ!

    ಅಮೆರಿಕದ ಡಾಲರ್ ಮತ್ತೆ ಬಲಿಷ್ಠವಾಗುತ್ತಿರುವುದರಿಂದ ಚಿನ್ನದ ಮೇಲೆ ಎಲ್ಲವೂ ಪ್ರಭಾವ ಬೀರುತ್ತಿದೆ ಎನ್ನಲಾಗಿದೆ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಎರಡು ದಶಕಗಳ ಗರಿಷ್ಠ ಮಟ್ಟವನ್ನು ತಲುಪಿದ ನಂತರ, ಈ ವರ್ಷದ ಆರಂಭದಲ್ಲಿ ಯುಎಸ್ ಡಾಲರ್ 6 ಪ್ರತಿಶತದಷ್ಟು ಕುಸಿದಿದೆ. ಆದರೆ ಈಗ ಯುಎಸ್ ಫೆಡ್ ದರ ಏರಿಕೆಯ ನಿರೀಕ್ಷೆಗಳ ನಡುವೆ ಮತ್ತೆ ಏರುತ್ತಿದೆ.

    MORE
    GALLERIES

  • 810

    Gold Price: ಚಿನ್ನದ ಬೆಲೆ ಮತ್ತಷ್ಟು ಕಡಿಮೆಯಾಗುತ್ತಂತೆ, ಈಗಾಗಲೇ 3 ಸಾವಿರ ಇಳಿಕೆಯಾಗಿದೆ!

    ರಷ್ಯಾ-ಉಕ್ರೇನ್ ಯುದ್ಧದ ಭಯವು ಚಿನ್ನದ ಮೇಲೆ ಕಡಿಮೆ ಪರಿಣಾಮ ಬೀರಬಹುದು ಎಂದು ತಜ್ಞರು ಹೇಳುತ್ತಾರೆ. ಆದಾಗ್ಯೂ, ಭಾರತ ಮತ್ತು ಚೀನಾದಿಂದ ಭೌತಿಕ ಚಿನ್ನದ ಬೇಡಿಕೆಯು ಧನಾತ್ಮಕ ಅಂಶವಾಗಿದೆ. ಹೀಗಾಗಿ ಚಿನ್ನದ ಬೆಲೆಯಲ್ಲಿ ಸ್ವಲ್ಪ ಬೆಂಬಲ ಸಿಗುತ್ತಿದೆ ಎನ್ನಲಾಗಿದೆ.

    MORE
    GALLERIES

  • 910

    Gold Price: ಚಿನ್ನದ ಬೆಲೆ ಮತ್ತಷ್ಟು ಕಡಿಮೆಯಾಗುತ್ತಂತೆ, ಈಗಾಗಲೇ 3 ಸಾವಿರ ಇಳಿಕೆಯಾಗಿದೆ!

    ತಜ್ಞರು ಚಿನ್ನದ ಬೆಲೆಗಳು 1800 ಡಾಲರ್‌ಗಳಲ್ಲಿ ಬಲವಾದ ಬೆಂಬಲವನ್ನು ಹೊಂದಿವೆ ಎಂದು ಹೇಳುತ್ತಾರೆ. 1970 ಡಾಲರ್‌ಗಳಲ್ಲಿ ಬಲವಾದ ಪ್ರತಿರೋಧವನ್ನು ಸಹ ಸೂಚಿಸುತ್ತದೆ. ಗ್ರೀನ್‌ಬ್ಯಾಕ್ 1800 ಡಾಲರ್‌ಗಿಂತ ಕಡಿಮೆಯಾದರೆ, ಚಿನ್ನದ ಬೆಲೆ ಮತ್ತಷ್ಟು ಕಡಿಮೆಯಾಗುತ್ತೆ.

    MORE
    GALLERIES

  • 1010

    Gold Price: ಚಿನ್ನದ ಬೆಲೆ ಮತ್ತಷ್ಟು ಕಡಿಮೆಯಾಗುತ್ತಂತೆ, ಈಗಾಗಲೇ 3 ಸಾವಿರ ಇಳಿಕೆಯಾಗಿದೆ!

    ನಮ್ಮ ದೇಶದ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ರೂ. 54 ಸಾವಿರದಲ್ಲಿ ಪ್ರಬಲ ಬೆಂಬಲವಿದೆ. ಚಿನ್ನದ ಬೆಲೆ ಈ ಮಟ್ಟಕ್ಕಿಂತ ಕಡಿಮೆಯಾದರೆ, ಬಂಗಾರದ ಬೆಲೆ ಮತ್ತಷ್ಟು ಕುಸಿಯುವ ಸಾಧ್ಯತೆ ಇದೆ.

    MORE
    GALLERIES