ಬೆಂಗಳೂರಿನಲ್ಲಿ ಚಿನ್ನದ ಬೆಲೆ
ಚಿನ್ನದ ಮೇಲಿನ ಹೂಡಿಕೆ ಈಗ ಹೆಚ್ಚುತ್ತಲೇ ಇದೆ. ದೇಶದ ಆರ್ಥಿಕ ಸದೃಢತೆಯೂ ಅದು ತಾನು ಹೊಂದಿರುವ ಚಿನ್ನದ ಪ್ರಮಾಣದ ಮೇಲೆ ಅವಲಂಬಿತವಾಗಿದೆ ಹಾಗೂ ಚಿನ್ನ ಜಗತ್ತಿನಾದ್ಯಂತ ಎಲ್ಲ ದೇಶಗಳಲ್ಲೂ ಮಾನ್ಯತೆ ಪಡೆದಿದ್ದು ಸ್ವೀಕರಿಸಲ್ಪಡುತ್ತದೆ. ಈ ಎಲ್ಲ ಅಂಶಗಳಿಂದಾಗಿ ಚಿನ್ನಕ್ಕೆ ದೊಡ್ಡದಾದ ಅಂತಾರಾಷ್ಟ್ರೀಯ ಮಾರುಕಟ್ಟೆಯೇ ಇದೆ. (ಸಾಂದರ್ಭಿಕ ಚಿತ್ರ)
ಬಂಗಾರಕ್ಕೆ ಜಾಗತಿಕ ಮಾರುಕಟ್ಟೆಯಲ್ಲಿ ಇರುವ ಮಹತ್ವ ಇಂದಿನದ್ದಲ್ಲ. ಕ್ರಿಸ್ತ ಪೂರ್ವ 5 ನೇ ಶತಮಾನದಿಂದಲೂ ಬಂಗಾರಕ್ಕೆ ಬಂಗಾರದ್ದೇ ಮೌಲ್ಯ. ಚಿನ್ನ ನಮ್ಮ ದೇಶದಲ್ಲಿ ಕೇವಲ ಆಭರಣವಾಗಿ ಉಳಿಯದೇ ಉಳಿತಾಯ, ಹೂಡಿಕೆಯಾಗಿದೆ. ಚಿನ್ನದಿಂದ ಉಳಿತಾಯವನ್ನು ಪ್ರಾರಂಭಿಸಲು ನೀವು ಆರ್ಥಿಕ ಪರಿಣತರಾಗಿರಬೇಕಿಲ್ಲ, ಬದಲಿಗೆ ಆಗಾಗ ಒಂದಿಷ್ಟು ಚಿನ್ನ ಮಾಡಿಸಿಟ್ಟುಕೊಂಡರೆ ಮುಗಿಯಿತು. (ಸಾಂದರ್ಭಿಕ ಚಿತ್ರ)