ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಚಿನ್ನ ಹಾಗೂ ಬೆಳ್ಳಿ ದರಗಳು ಏರಿಕೆಯಾಗಿವೆ. ದೇಶೀಯ ಮಾರುಕಟ್ಟೆಗೆ ಅನುಗುಣವಾಗಿ ದೇಶದ ಪ್ರಮುಖ ನಗರಗಳಲ್ಲಿ ಚಿನ್ನ ಹಾಗೂ ಬೆಳ್ಳಿ ದರಗಳಲ್ಲಿ ವ್ಯತ್ಯಾಸ ಕಂಡುಬಂದಿದ್ದು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ದರ ವ್ಯತ್ಯಾಸ ಮತ್ತು ದೇಶೀಯ ಬೇಡಿಕೆಗಳಿಗೆ ಅನುಗುಣವಾಗಿ, ಚಿನ್ನ ಹಾಗೂ ಬೆಳ್ಳಿ ದರದಲ್ಲಿ ಏರಿಕೆಯಾಗಿದ್ದು, ಇಂದಿನ ದರಪಟ್ಟಿ ಇಲ್ಲಿದೆ.
ಬಂಗಾರಕ್ಕೆ ಯಾಕಿಷ್ಟು ಮೌಲ್ಯ ಅಂತಾ ಕೇಳಿದರೆ, ಇದು ಒಂದು ರೀತಿಯಲ್ಲಿ ಮನೆಯಲ್ಲಿರುವ ಬ್ಯಾಂಕ್ ಹಣದಂತೆ ಈ ಚಿನ್ನ. ಯಾವುದೇ ಆರ್ಥಿಕ ಕಷ್ಟದಲ್ಲೂ ನಮ್ಮ ಜೊತೆ ನಿಲ್ಲುವ ವಸ್ತು. ಹಣದ ಅಡಚಣೆ ಆದರೆ ಮೊದಲಿಗೆ ನಮ್ಮ ಆಲೋಚನೆಗೆ ಬರುವುದೇ ಬಂಗಾರ. ಇದನ್ನು ಆರ್ಥಿಕ ಗೆಳೆಯ ಎನ್ನಬಹುದು.ಆಭರಣವಾಗಿ ಬಂಗಾರ ಎಷ್ಟು ಜನಪ್ರಿಯವಾಗಿದೆಯೂ ಅದರ ಜೊತೆಗೆ ಸಂಪತ್ತಾಗಿಯೂ ಬೆಳ್ಳಿ-ಬಂಗಾರ ಸೇರಿ ಇತರೆ ಆಭರಣ ವಸ್ತುಗಳು ಪ್ರಾಮುಖ್ಯತೆ ಗಳಿಸಿವೆ.
ಬೆಂಗಳೂರು ನಗರ ನೋಡುವುದಾದರೆ ಇಂದು ನಗರದಲ್ಲಿ ಪ್ರತಿ 10gm, 100gm, 1000gm (1ಕೆಜಿ) ಬೆಳ್ಳಿ ಬೆಲೆಗಳು ಕ್ರಮವಾಗಿ ರೂ. 828, ರೂ. 8,280 ಹಾಗೂ ರೂ. 82,800 ಗಳಾಗಿವೆ. ಮಿಕ್ಕಂತೆ ದೇಶದ ಇತರೆ ಮಹಾನಗರಗಳಾದ ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿ ದರ ರೂ. 82, 800 ಆಗಿದ್ದರೆ, ದೆಹಲಿಯಲ್ಲಿ ರೂ. 77,100, ಮುಂಬೈನಲ್ಲಿ ರೂ. 77,100 ಹಾಗೂ ಕೊಲ್ಕತ್ತದಲ್ಲೂ ರೂ. 77,100 ಗಳಾಗಿದೆ.