ಚಿನ್ನ ಆಭರಣವಾಗಿ ಹಾಗೂ ಪ್ರತಿಷ್ಟೆಯ ದ್ಯೋತಕವಾಗಿ ಭಾರತೀಯರ ಮನೆ ಮನಗಳಲ್ಲಿ ಸ್ಥಾನ ಪಡೆದುಕೊಂಡಿದೆ. ಹಬ್ಬ ಹರಿದಿನಗಳಿಂದ ಆರಂಭಗೊಂಡು ಯಾವುದೇ ಶುಭ ಸಮಾರಂಭಗಳಲ್ಲಿ ಚಿನ್ನ ಹಾಗೂ ಬೆಳ್ಳಿಗೆ ಪೂಜನೀಯ ಸ್ಥಾನವಿದೆ. ಪ್ರತಿಯೊಂದು ಪೂಜಾ ವಿಧಾನಗಳಲ್ಲೂ ಬೆಳ್ಳಿ ಹಾಗೂ ಚಿನ್ನಕ್ಕೆ ಪ್ರಾಶಸ್ತ್ಯವಿದೆ ಇನ್ನು ವಿವಾಹ ಸಮಾರಂಭಗಳಲ್ಲಿ ವಧು ವರರ ಅನುರೂಪ ಬಾಂಧವ್ಯವನ್ನು ಚಿನ್ನ ಬೆಳ್ಳಿ ಇನ್ನಷ್ಟು ಗಟ್ಟಿಗೊಳಿಸುತ್ತದೆ.
ಬೆಂಗಳೂರು ನಗರ ನೋಡುವುದಾದರೆ ಇಂದು ನಗರದಲ್ಲಿ ಪ್ರತಿ 10gm, 100gm, 1000gm (1ಕೆಜಿ) ಬೆಳ್ಳಿ ಬೆಲೆಗಳು ಕ್ರಮವಾಗಿ ರೂ. 765, ರೂ. 7,650 ಹಾಗೂ ರೂ. 76,500 ಆಗಿದೆ. ಮಿಕ್ಕಂತೆ ದೇಶದ ಇತರೆ ಮಹಾನಗರಗಳಾದ ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿ ದರ ರೂ. 76,500 ಆಗಿದ್ದರೆ, ದೆಹಲಿಯಲ್ಲಿ ರೂ. 73,050, ಅಂತೆಯೇ ಮುಂಬೈ ಹಾಗೂ ಕೋಲ್ಕತ್ತಾದಲ್ಲೂ ಬೆಳ್ಳಿಯ ದರ ರೂ 73,050 ಆಗಿದೆ.