Todays Gold Price: ಚಿನ್ನದ ದರದಲ್ಲಿ ಭಾರೀ ಬದಲಾವಣೆ, ಖರೀದಿದಾದರೇ ಇಲ್ಲಿದೆ ನೋಡಿ ಇಂದಿನ ರೇಟ್

ಚಿನ್ನ ಬೆಳ್ಳಿ ದರ ಎಷ್ಟೇ ಏರಿಳಿಕೆಯಾಗುತ್ತಿದ್ದರೂ ಖರೀದಿಸುವವರು ಖರೀದಿಸುತ್ತಾರೆ ಹಾಗಾಗಿ ಆಭರಣಗಳ ಅಂಗಡಿಯಲ್ಲಿ ಯಾವಾಗಲೂ ಜನರ ಗಿಜಿಗಿಡುವಿಕೆ ಕಡಿಮೆಯಾಗುವುದೇ ಇಲ್ಲ. ಒಂದಿಲ್ಲೊಂದು ಕಾರಣಗಳಿಂದ ಗ್ರಾಹಕರು ಚಿನ್ನ ಬೆಳ್ಳಿ ಖರೀದಿ ಮಾಡುತ್ತಿರುತ್ತಾರೆ.

First published:

 • 19

  Todays Gold Price: ಚಿನ್ನದ ದರದಲ್ಲಿ ಭಾರೀ ಬದಲಾವಣೆ, ಖರೀದಿದಾದರೇ ಇಲ್ಲಿದೆ ನೋಡಿ ಇಂದಿನ ರೇಟ್

  ಭಾರತೀಯರಿಗೆ ಚಿನ್ನ ಬೆಳ್ಳಿ ಎಂಬುದು ಶುಭ ಸಂಕೇತವೂ ಹೌದು ಉಳಿತಾಯದ ಒಂದು ವಿಧವೂ ಹೌದು. ಹೂಡಿಕೆಯ ರೂಪದಲ್ಲಿ ಮಾನ್ಯವಾಗಿರುವ ಚಿನ್ನ ಎಷ್ಟೋ ಸಮಯದಲ್ಲಿ ಕಷ್ಟಕಾಲದ ಬಂಧುವಾಗಿ ನೆರವಾಗುತ್ತದೆ. ಹಾಗಾಗಿಯೇ ಚಿನ್ನ ಬೆಳ್ಳಿ ಎಂಬುದು ಭಾರತೀಯರಿಗೆ ಹೆಚ್ಚು ಸಮೀಪವಾದ ಲೋಹ ಎಂದೆನಿಸಿದೆ.

  MORE
  GALLERIES

 • 29

  Todays Gold Price: ಚಿನ್ನದ ದರದಲ್ಲಿ ಭಾರೀ ಬದಲಾವಣೆ, ಖರೀದಿದಾದರೇ ಇಲ್ಲಿದೆ ನೋಡಿ ಇಂದಿನ ರೇಟ್

  ಅಲಂಕಾರ ಪ್ರತಿಷ್ಟೆ ಹಾಗೂ ಹೂಡಿಕೆಯ ರೂಪದಲ್ಲಿ ಮಾನ್ಯವಾಗಿರುವ ಚಿನ್ನವನ್ನು ಖರೀದಿಯ ಸಮಯದಲ್ಲಿ ಬೆಲೆ ನೋಡಿ ಖರೀದಿಸುತ್ತಾರೆ. ಜೀವಮಾನದಲ್ಲಿ ಒಮ್ಮೆಯಾದರೂ ಚಿನ್ನದ ಆಭರಣ ಖರೀದಿಸಬೇಕೆಂಬ ಮಹದಾಸೆ ಇಟ್ಟುಕೊಂಡು ಅದಕ್ಕಾಗಿ ದುಡಿಯುವವರ ಪ್ರತ್ಯೇಕ ವರ್ಗವೇ ಇದೆ. ಹೀಗಾಗಿ ಚಿನ್ನಕ್ಕೆ ಪ್ರತೀ ಬಾರಿ ಬೇಡಿಕೆ ಇದ್ದೇ ಇರುತ್ತದೆ.

  MORE
  GALLERIES

 • 39

  Todays Gold Price: ಚಿನ್ನದ ದರದಲ್ಲಿ ಭಾರೀ ಬದಲಾವಣೆ, ಖರೀದಿದಾದರೇ ಇಲ್ಲಿದೆ ನೋಡಿ ಇಂದಿನ ರೇಟ್

  ಚಿನ್ನ ಎಂದರೆ ಎಲ್ಲರಿಗೂ ಪ್ರೀತಿ. ಖರೀದಿ ಮಾಡುವವರು ಚಿನ್ನದ ಬೆಲೆ ಕಡಿಮೆ ಇರಲಿ ಎಂದು ಬಯಸಿದರೆ ಹೂಡಿಕೆ ಮಾಡಿದವರು ಬೆಲೆ ಏರಲಿ ಎಂದು ಬಯಸುತ್ತಾರೆ ಇನ್ನು ಚಿನ್ನ ಮಾರಾಟ ಮಾಡುವವರು ಚಿನ್ನಕ್ಕೆ ಒಳ್ಳೆ ಬೆಲೆ ಬರಲಿ ಎಂದು ಬಯಸುತ್ತಾರೆ. ಅದಾಗ್ಯೂ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಏರಿಳಿಯುತ್ತಲೇ ಇರುತ್ತದೆ.

  MORE
  GALLERIES

 • 49

  Todays Gold Price: ಚಿನ್ನದ ದರದಲ್ಲಿ ಭಾರೀ ಬದಲಾವಣೆ, ಖರೀದಿದಾದರೇ ಇಲ್ಲಿದೆ ನೋಡಿ ಇಂದಿನ ರೇಟ್

  ಬೆಂಗಳೂರಿನಲ್ಲಿ ಇಂದು 22 ಕ್ಯಾರಟ್ ಬಂಗಾರದ ಬೆಲೆ (ಹತ್ತು ಗ್ರಾಂ) ರೂ. 56,300 ಆಗಿದ್ದರೆ, ಚೆನ್ನೈ, ಮುಂಬೈ ಹಾಗೂ ಕೊಲ್ಕತ್ತಾ ನಗರಗಳಲ್ಲಿ ಕ್ರಮವಾಗಿ ಚಿನ್ನದ ಬೆಲೆ ರೂ. 56,650, ರೂ. 56,250, ರೂ. 56,250 ಆಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ ಇಂದು ಚಿನ್ನದ ಬೆಲೆ ರೂ. 56,400 ಆಗಿದೆ.

  MORE
  GALLERIES

 • 59

  Todays Gold Price: ಚಿನ್ನದ ದರದಲ್ಲಿ ಭಾರೀ ಬದಲಾವಣೆ, ಖರೀದಿದಾದರೇ ಇಲ್ಲಿದೆ ನೋಡಿ ಇಂದಿನ ರೇಟ್

  ಮಾರುಕಟ್ಟೆಯಲ್ಲಿ ಇಂದಿನ ಬಂಗಾರದ ದರಗಳ ಕುರಿತು ನೋಡುವುದಾದರೆ ಒಂದು ಗ್ರಾಂ (1GM)22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 5,625 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 6,136 ಆಗಿದೆ. ಎಂಟು ಗ್ರಾಂ (8GM)22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 45,000 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 49,088 ಆಗಿದೆ.

  MORE
  GALLERIES

 • 69

  Todays Gold Price: ಚಿನ್ನದ ದರದಲ್ಲಿ ಭಾರೀ ಬದಲಾವಣೆ, ಖರೀದಿದಾದರೇ ಇಲ್ಲಿದೆ ನೋಡಿ ಇಂದಿನ ರೇಟ್

  ಹತ್ತು ಗ್ರಾಂ (10GM)22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 56250 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 61,360 ಆಗಿದೆ. ನೂರು ಗ್ರಾಂ (100GM)22 ಕ್ಯಾರಟ್ ಆಭರಣ ಚಿನ್ನದ ಬೆಲೆ - ರೂ. 5,62,500 ಆಗಿದ್ದು, 24 ಕ್ಯಾರಟ್ ಬಂಗಾರದ ಬೆಲೆ (ಅಪರಂಜಿ) - ರೂ. 6,13,600 ಆಗಿದೆ.

  MORE
  GALLERIES

 • 79

  Todays Gold Price: ಚಿನ್ನದ ದರದಲ್ಲಿ ಭಾರೀ ಬದಲಾವಣೆ, ಖರೀದಿದಾದರೇ ಇಲ್ಲಿದೆ ನೋಡಿ ಇಂದಿನ ರೇಟ್

  ಇಂದು ಒಂದು ಕೆಜಿ ಬೆಳ್ಳಿಯ ದರ ರೂ 74,050 ಆಗಿದೆ. ಪ್ರಮುಖವಾಗಿ ಬೆಳ್ಳಿ ದರವು ಭಾರತದಲ್ಲಿ ಅದರ ಅಂತಾರಾಷ್ಟ್ರೀಯ ದರದ ಮೇಲೆ ಅವಲಂಬಿತವಾಗಿರುತ್ತದೆ, ಅಲ್ಲದೆ, ರೂಪಾಯಿ-ಡಾಲರ್ ಮಧ್ಯದ ಪೈಪೋಟಿಯು ಸಹ ಬೆಳ್ಳಿ ದರದ ಮೇಲೆ ಪ್ರಭಾವ ಬೀರುತ್ತಿರುತ್ತದೆ ಎನ್ನಬಹುದು. ಇತ್ತೀಚಿನ ಕೆಲ ವರ್ಷಗಳಿಂದ ಬೆಳ್ಳಿಯನ್ನು ಸಹ ಹೂಡಿಕೆಯ ವಸ್ತುವನ್ನಾಗಿ ಗುರುತಿಸಲಾಗಿದೆ

  MORE
  GALLERIES

 • 89

  Todays Gold Price: ಚಿನ್ನದ ದರದಲ್ಲಿ ಭಾರೀ ಬದಲಾವಣೆ, ಖರೀದಿದಾದರೇ ಇಲ್ಲಿದೆ ನೋಡಿ ಇಂದಿನ ರೇಟ್

  ಬೆಂಗಳೂರು ನಗರ ನೋಡುವುದಾದರೆ ಇಂದು ನಗರದಲ್ಲಿ ಪ್ರತಿ 10gm, 100gm, 1000gm (1ಕೆಜಿ) ಬೆಳ್ಳಿ ಬೆಲೆಗಳು ಕ್ರಮವಾಗಿ ರೂ. 775, ರೂ. 7,750 ಹಾಗೂ ರೂ. 77,500 ಆಗಿದೆ. ಮಿಕ್ಕಂತೆ ದೇಶದ ಇತರೆ ಮಹಾನಗರಗಳಾದ ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿ ದರ ರೂ. 77,500 ಆಗಿದ್ದರೆ, ದೆಹಲಿಯಲ್ಲಿ ರೂ. 74,050, ಅಂತೆಯೇ ಮುಂಬೈ ಹಾಗೂ ಕೋಲ್ಕತ್ತಾದಲ್ಲೂ ಬೆಳ್ಳಿಯ ದರ ರೂ 74,050 ಆಗಿದೆ.

  MORE
  GALLERIES

 • 99

  Todays Gold Price: ಚಿನ್ನದ ದರದಲ್ಲಿ ಭಾರೀ ಬದಲಾವಣೆ, ಖರೀದಿದಾದರೇ ಇಲ್ಲಿದೆ ನೋಡಿ ಇಂದಿನ ರೇಟ್

  ವಿ.ಸೂ: ಇಲ್ಲಿ ಕೊಡಲಾದ ಎಲ್ಲ ದರಗಳು ಮಾರುಕಟ್ಟೆಯ ಬೆಲೆಗಳನ್ನು ಪ್ರತಿನಿಧಿಸುತ್ತವೆ ಹಾಗೂ ಜಿಎಸ್‍ಟಿ, ಟಿಸಿಎಸ್ ಹಾಗೂ ಇನ್ನಿತರೆ ಇರಬಹುದಾದ ಶುಲ್ಕಗಳನ್ನು ಒಳಗೊಂಡಿಲ್ಲ. ಹೆಚ್ಚು ನಿಖರ ಬೆಲೆಗಳಿಗಾಗಿ ನಿಮ್ಮ ಹತ್ತಿರದ ಆಭರಣ ವ್ಯಾಪಾರಿಗಳನ್ನು ಸಂಪರ್ಕಿಸಿ.

  MORE
  GALLERIES