ಭಾರತೀಯರಿಗೆ ಮೊದಲಿನಿಂದಲೂ ಚಿನ್ನ ಹಾಗೂ ಅದರ ಆಭರಣಗಳೆಂದರೆ ಹೆಚ್ಚು ಆಕರ್ಷಣೆ. ಅಲಂಕಾರ, ಪ್ರತಿಷ್ಠೆ, ಹೂಡಿಕೆ, ಉಳಿತಾಯ ಹೀಗೆ ನಾನಾ ರೀತಿಯಲ್ಲಿ ಈ ಬೆಳ್ಳಿ-ಬಂಗಾರವನ್ನು ಮೌಲ್ಯಯುತವಾದ ವಸ್ತುವನ್ನಾಗಿ ನೋಡಲಾಗುತ್ತಿದೆ. ಇದೇ ಕಾರಣಕ್ಕೆ ಒಂದು ಕಾಲದಲ್ಲಿ ಬೀದಿಯಲ್ಲಿ ತೂಗಿ ಅಳೆದು ಮಾರುತ್ತಿದ್ದ ಚಿನ್ನ-ಬೆಳ್ಳಿಗೆ ಇಂದು ಎಲ್ಲಿಲ್ಲದ ಸ್ಥಾನಮಾನ ಸಿಕ್ಕಿದೆ. ಚಿನ್ನ ಮಾಡಿಸುವುದು ಅಂದರೆ ಅದೊಂದು ದೊಡ್ಡ ಉಳಿತಾಯ ಎಂದು ಜನ ಪರಿಗಣಿಸುತ್ತಿದ್ದಾರೆ.
ಚಿನ್ನ ಎಂದರೆ ಎಲ್ಲರಿಗೂ ಪ್ರೀತಿ. ಖರೀದಿಗೆ ಹೋದವರು ಕಡಿಮೆ ಇರಲಿ ಚಿನ್ನದ ಬೆಲೆ ಎಂದು ಬಯಸಿದರೆ, ಅದೇ ಹೂಡಿಕೆ ಮಾಡಿದವರು ಬೆಲೆ ಏರಲಿ ಎಂದು ಬಯಸ್ತಾರೆ, ಖರೀದಿ ಮಾಡಿದ ನಂತರ ಮುಂದೆ ಮಾರಲು ಹೋದಾಗ ಖರೀದಿದಾರರು ಮತ್ತೆ ನಮ್ಮ ಚಿನ್ನಕ್ಕೆ ಒಳ್ಳೆ ಮೊತ್ತ ಸಿಕ್ಕಿದರೆ ಸಾಕು ಅಂತಾ ಬಯಸ್ತಾರೆ. ಹೀಗೆ ಚಿನ್ನದ ಬೆಲೆ ಎಂಬುದು ಸದಾ ಸ್ಥಿರವಾಗಿರುವಂಥದ್ದಲ್ಲ. ಅಂತಾರಾಷ್ಟ್ರೀಯವಾಗಿ ಹಲವಾರು ಕಾರಣಗಳಿಂದಾಗಿ ಅದರ ಬೆಲೆಯಲ್ಲಿ ಏರಿಳಿತವಾಗುತ್ತಲೇ ಇರುತ್ತದೆ.
ಬೆಂಗಳೂರು ನಗರ ನೋಡುವುದಾದರೆ ಇಂದು ನಗರದಲ್ಲಿ ಪ್ರತಿ 10gm, 100gm, 1000gm (1ಕೆಜಿ) ಬೆಳ್ಳಿ ಬೆಲೆಗಳು ಕ್ರಮವಾಗಿ ರೂ. 780, ರೂ. 7,800 ಹಾಗೂ ರೂ. 78,000 ಆಗಿದೆ. ಮಿಕ್ಕಂತೆ ದೇಶದ ಇತರೆ ಮಹಾನಗರಗಳಾದ ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿ ದರ ರೂ. 78,000 ಆಗಿದ್ದರೆ, ದೆಹಲಿಯಲ್ಲಿ ರೂ. 74,500, ಅಂತೆಯೇ ಮುಂಬೈ ಹಾಗೂ ಕೋಲ್ಕತ್ತಾದಲ್ಲೂ ಬೆಳ್ಳಿಯ ದರ ರೂ 74,500 ಆಗಿದೆ.