ನಿನ್ನೆ ಒಂದು ಕೆಜಿ ಬೆಳ್ಳಿಗೆ ರೂ. 74,600 ಆಗಿದ್ದು ಇಂದು ಬೆಳ್ಳಿಯ ದರ ರೂ 74,500 ಆಗಿದೆ. ಪ್ರಮುಖವಾಗಿ ಬೆಳ್ಳಿ ದರವು ಭಾರತದಲ್ಲಿ ಅದರ ಅಂತಾರಾಷ್ಟ್ರೀಯ ದರದ ಮೇಲೆ ಅವಲಂಬಿತವಾಗಿರುತ್ತದೆ, ಅಲ್ಲದೆ, ರೂಪಾಯಿ-ಡಾಲರ್ ಮಧ್ಯದ ಪೈಪೋಟಿಯು ಸಹ ಬೆಳ್ಳಿ ದರದ ಮೇಲೆ ಪ್ರಭಾವ ಬೀರುತ್ತಿರುತ್ತದೆ ಎನ್ನಬಹುದು. ಇತ್ತೀಚಿನ ಕೆಲ ವರ್ಷಗಳಿಂದ ಬೆಳ್ಳಿಯನ್ನು ಸಹ ಹೂಡಿಕೆಯ ವಸ್ತುವನ್ನಾಗಿ ಗುರುತಿಸಲಾಗಿದೆ
ಬೆಂಗಳೂರು ನಗರ ನೋಡುವುದಾದರೆ ಇಂದು ನಗರದಲ್ಲಿ ಪ್ರತಿ 10gm, 100gm, 1000gm (1ಕೆಜಿ) ಬೆಳ್ಳಿ ಬೆಲೆಗಳು ಕ್ರಮವಾಗಿ ರೂ. 781, ರೂ. 7,810 ಹಾಗೂ ರೂ. 78,100 ಆಗಿದೆ. ಮಿಕ್ಕಂತೆ ದೇಶದ ಇತರೆ ಮಹಾನಗರಗಳಾದ ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿ ದರ ರೂ. 78,100 ಆಗಿದ್ದರೆ, ದೆಹಲಿಯಲ್ಲಿ ರೂ. 74,500, ಅಂತೆಯೇ ಮುಂಬೈ ಹಾಗೂ ಕೋಲ್ಕತ್ತಾದಲ್ಲೂ ಬೆಳ್ಳೆಯ ದರ ರೂ 74,500 ಆಗಿದೆ.